thirthahalli news | ತೀರ್ಥಹಳ್ಳಿಯ ಭಾರತೀಪುರದಲ್ಲಿ ಕೆಎಸ್ಆರ್’ಟಿಸಿ ಬಸ್ – ಕಾರು ಡಿಕ್ಕಿ : ನಾಲ್ವರ ಸಾವು!

Bharathipura in Tirthahalli taluk, Shivamogga district when a KSRTC bus collided with a Swift Dzire car. ತೀರ್ಥಹಳ್ಳಿಯ ಭಾರತೀಪುರದಲ್ಲಿ ಕೆಎಸ್ಆರ್’ಟಿಸಿ ಬಸ್ – ಕಾರು ಡಿಕ್ಕಿ : ನಾಲ್ವರ ಸಾವು!

ತೀರ್ಥಹಳ್ಳಿ (thirthahalli), ಜನವರಿ 14: ಕೆಎಸ್ಆರ್’ಟಿಸಿ ಬಸ್ ಹಾಗೂ ಸ್ವಿಫ್ಟ್ ಡಿಸೈರ್ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟು ಮೂವರು ಗಾಯಗೊಂಡ ಘಟನೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಭಾರತೀಪುರದಲ್ಲಿ ಜನವರಿ 13 ರ ರಾತ್ರಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಮೆಣಸೆ ಗ್ರಾಮದ ನಿವಾಸಿಗಳಾದ ಫಾತಿಮಾ ಬಿ (70) ಹಾಗೂ ರಿಹಾನ್ (14) ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.  ರಾಯಿಲ್ (9) ಹಾಗೂ ಝಯಾನ್ (12) ರವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.

ಉಳಿದಂತೆ ಕಾರಿನಲ್ಲಿದ್ದ ಝರೀನಾ (35), ರಿಹಾ (12) ಹಾಗೂ ಕಾರು ಚಾಲಕ ಚಾಲಕ ರಿಯಾಜ್ (35) ಗೆ ಗಾಯವಾಗಿದೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಕುಟುಂಬ ಸದಸ್ಯರು ಚನ್ನಗಿರಿಗೆ ತೆರಳಿದ್ದು, ಅಲ್ಲಿಂದ ಕಾರಿನಲ್ಲಿ ಶೃಂಗೇರಿಗೆ ಹಿಂದಿರುಗುತ್ತಿದ್ದಾಗ,  ಮಂಗಳೂರಿನಿಂದ ರಾಯಚೂರು ಕಡೆಗೆ ತೆರಳುತ್ತಿದ್ದ ಕೆಎಸ್ಆರ್’ಟಿಸಿ ಬಸ್ ಗೆ ಭಾರತೀಪುರದ ತಿರುವಿನ ಬಳಿ ಡಿಕ್ಕಿ ಹೊಡೆದಿದೆ.

ಮುಂದೆ ಹೋಗುತ್ತಿದ್ದ ಕಾರು ಹಾಗೂ ಮಹೇಂದ್ರಾ ಟೆಂಪೋ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ. ಕಾರು ಚಾಲಕನು ಎದುರಿನಿಂದ ಬರುತ್ತಿದ್ದ ಕೆಎಸ್ ಆರ್’ಟಿಸಿ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ.

ಕಾರು ಚಾಲಕನ ಅಜಾಗರೂಕ, ನಿರ್ಲಕ್ಷ್ಯದ ಚಾಲನೆಯೇ ಅವಘಡಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕಾರು ಚಾಲಕನ ವಿರುದ್ದ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga, January 14: A horrific accident occurred on the night of January 13 at Bharathipura in Tirthahalli taluk, Shivamogga district, when a KSRTC bus collided with a Swift Dzire car.

Casualties: Four passengers in the car died in the crash. Injuries: Three others sustained injuries in the collision. Location: The incident took place near Bharathipura in Tirthahalli taluk.

Thirthahalli, January 14: A horrific accident occurred on the night of January 13 in Bharathipur, Thirthahalli taluk, when a KSRTC bus collided with a Swift car. The impact left four occupants of the car dead and two others injured. The tragic incident has shocked the local community, highlighting once again the dangers of late-night travel on busy routes.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →