sagara | ಸಾಗರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ವೃದ್ದೆಯ ಮಾಂಗಲ್ಯ ಸರ ಅಪಹರಿಸಿದ್ದ ಆರೋಪಿಯ ಬಂಧನ! Sagara | Rapid operation of the sagar police: the arrest of the accused who stoled the old lady Mangal sutra!

sagara | ಸಾಗರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ವೃದ್ದೆಯ ಮಾಂಗಲ್ಯ ಸರ ಅಪಹರಿಸಿದ್ದ ಆರೋಪಿಯ ಬಂಧನ!

ಸಾಗರ (sagar), ಮಾ. 2: ಸಂಜೆ ವೇಳೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ವೃದ್ದೆಯ ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿದ್ದ ಆರೋಪಿಯನ್ನು, ಘಟನೆ ನಡೆದ 24 ಗಂಟೆಯೊಳಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸಫಲರಾಗಿದ್ದಾರೆ!

ಸಾಗರ ತಾಲೂಕು ಶೆಡ್ತಿಕೆರೆ ಗ್ರಾಮದ ನಿವಾಸಿ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ರವಿಕುಮಾರ್ ಸಿ (39) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಆರೋಪಿಯಿಂದ ಕಳವು ಮಾಡಿದ್ದ ಅಂದಾಜು 2. 26 ಲಕ್ಷ ರೂ. ಮೌಲ್ಯದ 26 ಗ್ರಾಂ 400 ಮಿಲಿ ತೂಕದ ಮಾಂಗಲ್ಯ ಸರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಟಿ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಮಹಾಬಲೇಶ್ವರ ಎಸ್ ಎನ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಸಿದ್ದರಾಮಪ್ಪ, ಸಿಬ್ಬಂದಿಗಳಾದ ಶೇಖ್ ಫೈರೋಜ್ ಅಹಮದ್, ರವಿಕುಮಾರ್,

ಹನುಮಂತ ಜಂಬೂರ್, ನಂದೀಶ್, ಪ್ರವೀಣ್ ಕುಮಾರ್, ವಿಶ್ವನಾಥ್, ಚಾಲಕ ಗಿರೀಶ್ ಬಾಬು, ತಾಂತ್ರಿಕ ಘಟಕದ ಹೆಚ್ ಸಿ ಇಂದ್ರೇಶ್, ಗುರುರಾಜ್, ವಿಜಯಕುಮಾರ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಘಟನೆ ಹಿನ್ನೆಲೆ : 28-2-2025 ರಂದು ಸಂಜೆ ಶೆಡ್ತಿಕೆರೆ ಗ್ರಾಮದಲ್ಲಿ ವೃದ್ದ ದಂಪತಿಗಳಿದ್ದ ಮನೆಯ ವಿದ್ಯುತ್ ಸಂಪರ್ಕವನ್ನು ಆರೋಪಿ ಕಡಿತಗೊಳಿಸಿದ್ದ. ನಂತರ ಮನೆಯೊಳಗೆ ನುಗ್ಗಿ, ವೃದ್ದೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿದ್ದ. ಈ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆ ಕಲಂ 309 (4), 332 (ಬಿ) ಅಡಿ ಪ್ರಕರಣ ದಾಖಲಾಗಿತ್ತು.

Sagar, March 2: The Sagar rural station police have succeeded in arresting the accused who cut off the electricity connection of the house in the evening and stoled the elderly lady Mangal sutra, within 24 hours of the incident.

On 28-2-2025 in the evening, the accused cut off the electricity connection of the house of an elderly couple in Shedtikere village. Then entered the house, stoled Mangalya Sara who was in the old man’s neck and escaped. A case under section 309 (4), 332 (b) of the BNS Act was registered in this regard at the rural police station.

Shikaripura | Shikaripura: What did B Y Vijayendra say about e-account? shikaripura | ಶಿಕಾರಿಪುರ : ಇ – ಖಾತಾ ಕುರಿತಂತೆ ಬಿ ವೈ ವಿಜಯೇಂದ್ರ ಹೇಳಿದ್ದೇನು? Previous post shikaripura | ಶಿಕಾರಿಪುರ : ಇ – ಖಾತಾ ಕುರಿತಂತೆ ಬಿ ವೈ ವಿಜಯೇಂದ್ರ ಹೇಳಿದ್ದೇನು?
shimoga | Minister Madhu Bangarappa took his father's companions from Shimoga to Bangalore by plane! shimoga | ತಂದೆಯ ಒಡನಾಡಿಗಳನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆದೊಯ್ದ ಸಚಿವ ಮಧು ಬಂಗಾರಪ್ಪ! Next post shimoga | ತಂದೆಯ ಒಡನಾಡಿಗಳನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆದೊಯ್ದ ಸಚಿವ ಮಧು ಬಂಗಾರಪ್ಪ!