bhadravati | Father and son drown in Bhadra Dam backwater! bhadravati | ಭದ್ರಾ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ತಂದೆ – ಮಗ ಸಾವು!

hosanagara | ಹೊಸನಗರ : ನೀರಿನಲ್ಲಿ ಮುಳುಗಿ ಎಸ್ಎಸ್ಎಲ್’ಸಿ ವಿದ್ಯಾರ್ಥಿ ಸಾವು!

ಶಿವಮೊಗ್ಗ (shivamogga), ಮಾ. 17: ಕಲ್ಲುಕ್ವಾರಿ ನೀರಿನಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ಘಟನೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಳಿಕೊಪ್ಪದ ಅಂಬೇಡ್ಕರ್ ಕಾಲೋನಿಯಲ್ಲಿ ಮಾರ್ಚ್ 16 ರಂದು ನಡೆದಿದೆ.

ಮುರುಗೇಶ್ ಎಂಬುವರ ಪುತ್ರ ಶಮಂತ್ (16) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ಅಭ್ಯಾಸ ಮಾಡುತ್ತಿದ್ದ.

ಮನೆಯ ಸಮೀಪದ ಕಲ್ಲುಕ್ವಾರಿಯಲ್ಲಿ ಸ್ನೇಹಿತನೋರ್ವನ ಜೊತೆ ಈಜಾಡಲು ತೆರಳಿದ್ದ ವೇಳೆ, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಬಾಲಕ ಅಸುನೀಗಿದ್ದಾನೆ ಎಂದು ತಿಳಿದುಬಂದಿದೆ.  

ಬಾಲಕನ ಮೃತದೇಹವನ್ನು ನಿನ್ನೆಯೇ ಹೊರತೆಗೆಯಲಾಗಿದೆ. ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ಪೋಷಕರಿಗೆ ಹಸ್ತಾಂತರಿಸಲಾಗಿದೆ . ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga, Mar 17: A boy drowned in the water of a quarry while swimming in the water on March 16 in Ambedkar Colony, Aralikoppa, Hosanagara taluk, Shivamogga district. The boy’s body was exhumed yesterday. After a post-mortem examination on Monday, it was handed over to the parents. A case has been registered at the Hosanagar police station in this regard.

Shivamogga: Murder case accused gets stiff prison sentence! ಶಿವಮೊಗ್ಗ : ಕೊಲೆ ಪ್ರಕರಣದ ಆರೋಪಿಗೆ ಕಠಿಣ ಜೈಲು ಶಿಕ್ಷೆ! Previous post shimoga | ಶಿವಮೊಗ್ಗ : ಜಮೀನಿನಲ್ಲಿ ಗಾಂಜಾ ಬೆಳೆದವನಿಗೆ ಕಠಿಣ ಜೈಲು ಶಿಕ್ಷೆ!
Shivamogga: An unknown young man who came to steal and fell asleep next to the house! shimoga | ಮನೆಯ ಪಕ್ಕವೇ ನಿದ್ರೆ ಹೋದ ಅಪರಿಚಿತ ಯುವಕ… ಎಚ್ಚರಿಸಿ ಕರೆದೊಯ್ದ ಪೊಲೀಸರು…! Next post shimoga | ಮನೆಯ ಪಕ್ಕವೇ ನಿದ್ರೆ ಹೋದ ಅಪರಿಚಿತ ಯುವಕ… ಎಚ್ಚರಿಸಿ ಕರೆದೊಯ್ದ ಪೊಲೀಸರು…!