
yadur abbi falls | ನೋಡ ನೋಡುತ್ತಿದ್ದಂತೆ ಅಬ್ಬಿ ಫಾಲ್ಸ್ ನಲ್ಲಿ ಕೊಚ್ಚಿ ಹೋದ ಬೆಂಗಳೂರಿನ ಯುವಕ!
ಶಿವಮೊಗ್ಗ (shivamogga), ಜು. 20: ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯ ಯಡೂರು ಸಮೀಪದ ಅಬ್ಬಿ ಫಾಲ್ಸ್ ಬಳಿ ಪ್ರವಾಸಿಗರೋರ್ವರು ನೀರು ಪಾಲಾದ ಘಟನೆ ಜುಲೈ 20 ರ ಭಾನುವಾರ ನಡೆದಿದೆ.
ಬೆಂಗಳೂರಿನ ನಾಗರಬಾವಿ ಬಡಾವಣೆಯ ನಿವಾಸಿ ರಮೇಶ್ (35) ನೀರುಪಾಲಾದವರೆಂದು ಗುರುತಿಸಲಾಗಿದೆ. ಇವರು ಖಾಸಗಿ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ರಮೇಶ್ ಅವರು ತಮ್ಮ ಐವರು ಸ್ನೇಹಿತರ ಜೊತೆಗೆ ಅಬ್ಬಿ ಫಾಲ್ಸ್ ಗೆ ಪ್ರವಾಸಕ್ಕೆ ಬಂದಿದ್ದರು. ನೀರಿನ ಬಳಿ ಬಂಡೆಯ ಮೇಲೆ ಕುಳಿತ್ತಿದ್ದರು. ಈ ವೇಳೆ ಅವರ ಸ್ನೇಹಿತರೋರ್ವರು ಮೊಬೈಲ್ ಪೋನ್ ನಲ್ಲಿ ಅವರ ವಿಡಿಯೊ ಮಾಡಿಕೊಳ್ಳುತ್ತಿದ್ದರು.
ವಿಡಿಯೋಗೆ ಪೋಸ್ ನೀಡಿದ ನಂತರ ರಮೇಶ್ ಅವರು ನೀರಿಗೆ ಇಳಿದಿದ್ದಾರೆ. ಈ ವೇಳೆ ನೋಡ ನೋಡುತ್ತಿದ್ದಂತೆ ನೀರಿನ ರಭಸದಲ್ಲಿ ಕೊಚ್ಚಿ ಹೋಗಿದ್ದಾರೆ. ನಂತರ ಅವರ ಸುಳಿವು ಪತ್ತೆಯಾಗಿರಲಿಲ್ಲ. ಶೋಧ ನಡೆಸಿದ ನಂತರ ಫಾಲ್ಸ್ ಕೆಳಭಾಗದಲ್ಲಿ ರಮೇಶ್ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ರಮೇಶ್ ಅವರು ಬಂಡೆಯ ಮೇಲೆ ಕುಳಿತು ವಿಡಿಯೋಗೆ ಫೋಸ್ ನೀಡಿದ್ದು ಹಾಗೂ ನಂತರ ಅವರು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯವು ಮೊಬೈಲ್ ಫೋನ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸದರಿ ವೀಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಘಟನಾ ಸ್ಥಳಕ್ಕೆ ನಗರ ಠಾಣೆ ಸಬ್ ಇನ್ಸ್’ಪೆಕ್ಟರ್ ಶಿವಾನಂದ ಕೋಳಿ ಅವರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.
Shimoga, Ju. 20: An incident of a tourist drowning near Abby Falls near Yadur in Hosnagar taluk of the district has been reported. He has been identified as Ramesh (35), a resident of Nagarabavi layout, Bangalore. Information is available that he was working as a manager in a private company.