ಶಿವಮೊಗ್ಗ (shivamogga), ಜು. 23: ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರು ಗಾಯಗೊಂಡ ಘಟನೆ, ಶಿವಮೊಗ್ಗ ನಗರದ ಶರಾವತಿ ನಗರ ಚಾನಲ್ ಏರಿಯಾ 1 ನೇ ಕ್ರಾಸ್ ನಲ್ಲಿ ಜುಲೈ 23 ರ ಸಂಜೆ ನಡೆದಿದೆ.
ಮಹಮ್ಮದ್ ಪೀರ್ (55), ಇವರ ಪತ್ನಿ ಸಾಹೀರ ಭಾನು (48) ಹಾಗೂ ಸೊಸೆ ಸೈಯದ ಜೈಬ (24) ಎಂಬುವರಿಗೆ ಸುಟ್ಟು ಗಾಯಗಳಾಗಿದೆ. ಇವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸಾಹೀರ ಭಾನು ಅವರು ಟೀ ಮಾಡಲು ಮುಂದಾದ ವೇಳೆ, ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ನಂತರ ಕೆಲ ಸಮಯದಲ್ಲಿಯೇ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.
ಸಿಲಿಂಡರ್ ಸ್ಫೋಟದಿಂದ ಶೀಟ್ ಮೇಲ್ಛಾವಣಿಯ ಮನೆ ಸಂಪೂರ್ಣ ಜಖಂಗೊಂಡಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ನಷ್ಟದ ಪ್ರಮಾಣ ಸರಿಸುಮಾರು 15 ಲಕ್ಷ ರೂ.ಗಳಿಗೂ ಅಧಿಕ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಡಿಎಫ್ಓ ಅಶೋಕ್ ಕುಮಾರ್ ಬಿ ಆರ್, ಐಸಿಎಎಫ್ಎಸ್’ಟಿಓ ಹುಸೇನ್, ಸಿಬ್ಬಂದಿಗಳಾದ ಲೋಹಿತ್ ಕುಮಾರ್, ಮಂಜುನಾಥ್ ಬುಲಾರಿ, ನಿರಂಜನ್, ನಿಹಾರ್, ಗಣೇಶ್ ಅವರು ಭೇಟಿಯಿತ್ತು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದರು.
Shivamogga, Jul. 23: Three people were injured when a gas cylinder exploded while cooking at the 1st Cross, Sharavathi Nagar Channel Area, Shivamogga city on the evening of July 23.

