sagara taluk - Collision between lorry and KSRTC bus : 12 people injured! ಸಾಗರ : ಲಾರಿ – ಕೆಎಸ್ಆರ್’ಟಿಸಿ ಬಸ್ ನಡುವೆ ಡಿಕ್ಕಿ : 12 ಜನರಿಗೆ ಗಾಯ!

sagara accident news | ಲಾರಿ – ಕೆಎಸ್ಆರ್’ಟಿಸಿ ಬಸ್ ನಡುವೆ ಡಿಕ್ಕಿ : 12 ಜನರಿಗೆ ಗಾಯ!

ಸಾಗರ (sagar), ಜು. 24: ಲಾರಿ ಹಾಗೂ ಕೆಎಸ್ಆರ್’ಟಿಸಿ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ, ಬಸ್ ನಲ್ಲಿದ್ದ ಸುಮಾರು 12 ಪ್ರಯಾಣಿಕರು ಗಾಯಗೊಂಡ ಘಟನೆ ಜುಲೈ 24 ರ ಬೆಳಿಗ್ಗೆ ಸಾಗರ ತಾಲೂಕಿನ ಆನಂದಪುರ ಬಳಿಯ ಮುಂಬಾಳು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಗಾಯಾಳುಗಳನ್ನು ಸಾಗರ ಉಪ ವಿಭಾಗೀಯ ಆಸ್ಪತ್ರೆ, ಆನಂದಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಹಾಗೆಯೇ ಗಂಭೀರವಾಗಿ ಗಾಯಗೊಂಡಿರುವ ಕೆಲ ಪ್ರಯಾಣಿಕರನ್ನು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಸಮಯ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿತ್ತು. ಹೆದ್ದಾರಿಯ ಇಕ್ಕೆಲದಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.

‘ಅಪಘಾತಕ್ಕೀಡಾದ ಕೆಎಸ್ಆರ್’ಟಿಸಿ ಬಸ್ ಸಾಗರದಿಂದ ಶಿವಮೊಗ್ಗದೆಡೆಗೆ ಆಗಮಿಸುತ್ತಿತ್ತು. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಕೆಎಸ್ಆರ್’ಟಿಸಿ ಅಧಿಕಾರಿ, ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ಅಗತ್ಯ ನೆರವಿನಹಸ್ತ ಚಾಚಿದ್ದಾರೆ’ ಎಂದು ಕೆಎಸ್ಆರ್’ಟಿಸಿ ಶಿವಮೊಗ್ಗ ವಿಭಾಗದ ಜಿಲ್ಲಾ ಅಧಿಕಾರಿ ನವೀನ್ ಟಿ ಆರ್ ಅವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

Sagara, Ju. 24: In a collision between a lorry and a KSRTC bus, about 15 passengers in the bus were injured on the morning of July 24 on the national highway at Mumbalu village near Anandpur in Sagar taluk.

Shivamogga : Gas cylinder explodes while making tea at home – three injured! ಶಿವಮೊಗ್ಗ : ಮನೆಯಲ್ಲಿ ಟೀ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಸ್ಪೋಟ – ಮೂವರಿಗೆ ಗಾಯ! Previous post shimoga | ಶಿವಮೊಗ್ಗ : ಮನೆಯಲ್ಲಿ ಟೀ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಸ್ಪೋಟ – ಮೂವರಿಗೆ ಗಾಯ!
Rains intensify in Malnad : Linganamakki Dam still 14 feet to fill ಮಲೆನಾಡಲ್ಲಿ ಮಳೆ ಚುರುಕು : ಲಿಂಗನಮಕ್ಕಿ ಡ್ಯಾಂ ಭರ್ತಿಗೆ 14 ಅಡಿ ಬಾಕಿ Next post shimoga rain | ಮಲೆನಾಡಲ್ಲಿ ಮಳೆ ಚುರುಕು : ಲಿಂಗನಮಕ್ಕಿ ಡ್ಯಾಂ ಭರ್ತಿಗೆ 14 ಅಡಿ ಬಾಕಿ