
shimoga | ಶಿವಮೊಗ್ಗ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ – ಉಪಾಧ್ಯಕ್ಷರ ಅವಿರೋಧ ಆಯ್ಕೆ
ಶಿವಮೊಗ್ಗ (shivamogga), ಆಗಸ್ಟ್ 18: ಶಿವಮೊಗ್ಗ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಗೆ, ಆಗಸ್ಟ್ 18 ರಂದು ನಗರದ ಬಾಲರಾಜ ಅರಸ್ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಚುನಾವಣೆ ನಡೆಯಿತು.
ಅಧ್ಯಕ್ಷರಾಗಿ ಎಂ ಎನ್ ಜಯಣ್ಣ ಹಾಗೂ ಉಪಾಧ್ಯಕ್ಷರಾಗಿ ಡಿ ಕೃಷ್ಣಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷರಾದ ಆರ್ ಎಂ ಮಂಜುನಾಥ ಗೌಡ ಅವರು ಹೂವಿನ ಮಾಲೆ ಹಾಕಿ ಶುಭ ಹಾರೈಸಿದ್ದಾರೆ.
ನಂತರ ಆರ್ ಎಂ ಮಂಜುನಾಥಗೌಡ ಅವರು ಮಾತನಾಡಿ, ಶಿವಮೊಗ್ಗ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿರುವುದು ಸಂತಸಕರ. ಇದರಿಂದ ಸಹಕಾರಿ ರಂಗದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಮೊಗ್ಗ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ಕಟ್ಟಡ ಅತ್ಯಂತ ಹಳೇಯದಾಗಿದ್ದು, ನೂತನ ಕಟ್ಟಡದ ಅಗತ್ಯವಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಅಗತ್ಯ ನೆರವಿನಹಸ್ತ ನೀಡುವುದಾಗಿ ಭರವಸೆ ನೀಡಿದ್ದಾರೆ.
ಸಂಘದ ನೂತನ ಅಧ್ಯಕ್ಷ ಎಂ ಎನ್ ಜಯಣ್ಣ ಅವರು ಮಾತನಾಡಿ, ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೆನೆ. ತಮ್ಮ ಅಧಿಕಾರಾವಧಿಯಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೆನೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ ಎನ್ ಮಹೇಶ್, ಆರ್ ಸಿ ನಾಯ್ಕ್, ಬಿ ಆರ್ ನಾಗರಾಜ್, ಪಿ ಸಿ ಮಲ್ಲಿಕಾರ್ಜುನ್, ನಟರಾಜ್, ರೇಣುಕಮ್ಮ, ರಜಿನಾ ಖಾತೂನ್, ದಶರಥಗಿರಿ, ಸಹಕಾರಿ ಇಲಾಖೆಯ ಎಆರ್’ಸಿಎಸ್ ಟಿ ವಿ ಶ್ರೀನಿವಾಸ್, ಸಂಘದ ಕಾರ್ಯದರ್ಶಿ ಸಂತೋಷ್ ಕುಮಾರ್, ಹಾಪ್’ಕಾಮ್ಸ್ ನ ಸೋಮಶೇಖರಪ್ಪ ಮೊದಲಾದವರಿದ್ದರು.
Shivamogga, August 18: Elections were held on August 18 at the association’s office on Balaraja Aras Road in the city to elect the president and vice-president of the Shivamogga Taluk Agricultural Produce Sales Cooperative Society Limited.
MN Jayanna and D Krishnappa were elected unopposed as the president and vice president, respectively. DCC Bank District President R M Manjunatha Gowda garlanded the new president and vice president and wished them well.