
shimoga | ಶಿವಮೊಗ್ಗ : ವೃದ್ದನಿಗೆ ಸಹಾಯ ಮಾಡಲು ತೆರಳಿ ದಾಖಲಾತಿಗಳಿದ್ದ ಕವರ್ ಕಳೆದುಕೊಂಡು ಸಂಕಷ್ಟ ಸಿಲುಕಿದ ಗ್ರಾಮಸ್ಥ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಆಗಸ್ಟ್ 18: ಕೈಗಾಡಿ ತಳ್ಳಲು ಸಾಧ್ಯವಾಗದೆ ಪರಿತಪಿಸುತ್ತಿದ್ದ ವಯೋವೃದ್ದರೋರ್ವರಿಗೆ ಸಹಾಯ ಮಾಡಲು ತೆರಳಿದ್ದ ಗ್ರಾಮಸ್ಥನೋರ್ವ, ದಾಖಲಾತಿಗಳಿದ್ದ ಪ್ಲಾಸ್ಟಿಕ್ ಕವರ್ ವೊಂದನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಘಟನೆ, ಆಗಸ್ಟ್ 18 ರ ಮಧ್ಯಾಹ್ನ ಶಿವಮೊಗ್ಗ ನಗರದ ಎ ಎ ಸರ್ಕಲ್ ನಲ್ಲಿ ನಡೆದಿದೆ.
ಗುಡಮಗಟ್ಟೆ ಗ್ರಾಮದ ನಿವಾಸಿ ಮಧು ಎಂಬುವರೆ ದಾಖಲಾತಿ ಕಳೆದುಕೊಂಡವರಾಗಿದ್ದಾರೆ. ಕಳೆದುಹೋದ ಕವರ್ ಪತ್ತೆ ಹಚ್ಚಲು ಹರಸಾಹಸ ನಡೆಸುತ್ತಿದ್ದಾರೆ. ಸರ್ಕಲ್ ನಲ್ಲಿ ಅಳವಡಿಸಿರುವ ಸಿ ಸಿ ಕ್ಯಾಮರಾ ಪರಿಶೀಲಿಸುವಂತೆ ಟ್ರಾಫಿಕ್ ಪೊಲೀಸರಿಗೆ ಮೊರೆಯಿಟ್ಟಿದ್ದಾರೆ.
ಏನಾಯ್ತು? : ಮಕ್ಕಳ ದಾಖಲಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಮಧು ಅವರು ಶಿವಮೊಗ್ಗಕ್ಕೆ ಆಗಮಿಸಿದ್ದರು. ವೋಟರ್ ಐಡಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮಕ್ಕಳ ಜನನ ಪ್ರಮಾಣ ಪತ್ರದ ದಾಖಲಾತಿಗಳನ್ನು ಕವರ್ ವೊಂದರಲ್ಲಿಟ್ಟುಕೊಂಡಿದ್ದರು.
ಎ ಎ ಸರ್ಕಲ್ ನಲ್ಲಿ ಅವರು ನಿಂತಿದ್ದ ವೇಳೆ, ವಯೋವೃದ್ದರೋರ್ವರು ಸರಕು ಸಾಗಾಣೆಯ ಕೈ ಗಾಡಿ ತಳ್ಳಿಕೊಂಡು ಬಂದಿದ್ದಾರೆ. ಗಾಡಿ ತಳ್ಳಲು ಸಾಧ್ಯವಾಗದೆ ನೆರವಿನಹಸ್ತ ಕೋರಿದ್ದಾರೆ. ವೃದ್ಧನ ಕೋರಿಕೆಯಂತೆ ಮಧು ಹಾಗೂ ಇತರರು ಎ ಎ ಸರ್ಕಲ್ ನಿಂದ ಶಿವಪ್ಪನಾಯಕ ವೃತ್ತದವರೆಗೆ ಗಾಡಿ ತಳ್ಳಿ ನೆರವಾಗಿದ್ದಾರೆ.
ಈ ವೇಳೆ ಎ ಎ ಸರ್ಕಲ್ ನ ಟ್ರಾಫಿಕ್ ಪೊಲೀಸ್ ಬ್ಯಾರಿಕೇಡ್ ಬಳಿಯಿಟ್ಟಿದ್ದ ದಾಖಲಾತಿಗಳಿದ್ದ ಪ್ಲಾಸ್ಟಿಕ್ ಕವರ್ ನಾಪತ್ತೆಯಾಗಿದೆ. ಸುತ್ತಮುತ್ತ ಹುಡುಕಿದರೂ ಪತ್ತೆಯಾಗಿಲ್ಲ.
ಈ ವೇಳೆ ಸರ್ಕಲ್ ಗೆ ಆಗಮಿಸಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಗಿರೀಶ್ ಎಂಬುವರ ಬಳಿ ಮಧು ಅವರು ತಮ್ಮ ಅಹವಾಲು ತೋಡಿಕೊಂಡಿದ್ದಾರೆ. ಸರ್ಕಲ್ ನಲ್ಲಿರುವ ಸಿ ಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ನೆರವಾಗುವ ಭರವಸೆಯನ್ನು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಗಿರೀಶ್ ಅವರು ನೀಡಿದ್ದಾರೆ.
ಕೋರಿಕೆ : ‘ಸದರಿ ಪ್ಲಾಸ್ಟಿಕ್ ಕವರ್ ನಲ್ಲಿ ತಮ್ಮ ಕುಟುಂಬದವರ ಪ್ರಮುಖ ದಾಖಲಾತಿಗಳಿವೆ. ಸರ್ಕಲ್ ನಲ್ಲಿರುವ ಸಿ ಸಿ ಕ್ಯಾಮರಾ ಪರಿಶೀಲಿಸಿದರೆ ಸ್ಪಷ್ಟ ಮಾಹಿತಿ ಸಿಗಲಿದೆ. ವೃದ್ದನಿಗೆ ಸಹಾಯ ಮಾಡಲು ತೆರಳಿದ ವೇಳೆ, ಸದರಿ ಕವರ್ ನ್ನು ಬ್ಯಾರಿಕೇಡ್ ಮೇಲಿಟ್ಟು ತೆರಳಿದ್ದೆ. ಯಾರು ಕೊಂಡೊಯ್ದರು ಎಂಬುವುದು ಗೊತ್ತಾಗುತ್ತಿಲ್ಲ. ಸದರಿ ದಾಖಲಾತಿ ಸಿಕ್ಕವರು ತಮ್ಮ ಮೊಬೈಲ್ ಸಂಖ್ಯೆ : 87921-03984 ಗೆ ಸಂಪರ್ಕಿಸುವಂತೆ’ ಮನವಿ ಮಾಡಿದ್ದಾರೆ.
Shimoga, August 18: The incident took place on the afternoon of August 18 at AA Circle in Shimoga city, when a villager who went to help an elderly person who was unable to push a cart, lost the plastic cover containing the documents and got into trouble. Madhu, a resident of Gudamagatte village, has lost his plastic cover containing document. They are scrambling to find the lost cover. They have asked the traffic police to check the CC camera installed in the circle.