
shimoga | ಶಿವಮೊಗ್ಗ ನಗರದ ವಿವಿಧೆಡೆ ಆಗಸ್ಟ್ 23 ರಂದು ವಿದ್ಯುತ್ ವ್ಯತ್ಯಯ
ಶಿವಮೊಗ್ಗ (shivamogga), ಆಗಸ್ಟ್ 18: ಶಿವಮೊಗ್ಗ ನಗರದ ಮೆಗ್ಗಾನ್ ಆವರಣದ 110/11 ಕೆ.ವಿ. ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ನಿರ್ವಹಣ ಕಾಮಗಾರಿಯನ್ನು ಆಗಸ್ಟ್ 23 ರಂದು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 06 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿವರ : ಹೊಸಮನೆ, ಹೊಸಮನೆ ಛಾನಲ್ ಏರಿಯಾ, ಶರಾವತಿನಗರ ಎ ಮತ್ತು ಬಿ ಬ್ಲಾಕ್ ಆಯುರ್ವೇದ ಕಾಲೇಜು, ಕುವೆಂಪು ರಸ್ತೆ, ಸಾಗರ ರಸ್ತೆ, ಆಯನೂರು ಗೇಟ್, ಆದಿಚುಂಚನಗಿರಿ ಸಮುದಾಯ ಭವನ, ಯೂನಿಟಿ ಆಸ್ಪತ್ರೆ,
ಜೈಲ್ ವೃತ್ತ, ಸುಬ್ಬಯ್ಯ ಆಸ್ಪತ್ರೆ, ಜೈಲ್ ರಸ್ತೆ, ಸತ್ಯಂ ಫೋರ್‌ವಿಂಗ್ಸ್, ಎ.ಆರ್.ಬಿ ಕಾಲೋನಿ, ಅಶೋಕನಗರ, ಅಣ್ಣಾನಗರ, ಪಂಪನಗರ, ರಂಗನಾಥ ಬಡಾವಣೆ, ಮಿಳಘಟ್ಟ, ಟಿಪ್ಪುನಗರ ಬಲಭಾಗ, ಬಿ.ಎಸ್.ಎನ್.ಎಲ್ ಭವನ,
ಪಾರ್ಕ್ ಎಕ್ಸ್ಟಷನ್, ದುರ್ಗಿಗುಡಿ, ಜಿಲ್ಲಾ ಪಂಚಾಯತ್ ಕಛೇರಿ, ತಿಲಕ್ ನಗರ, ಆರ್.ಎಂ.ಆರ್ ರಸ್ತೆ, ಜಯನಗರ, ಬಸವನಗುಡಿ, ನಂಜಪ್ಪ ಆಸ್ಪತ್ರೆ, ಮ್ಯಾಕ್ಸ್ ಆಸ್ಪತ್ರೆ, ಶಿವಮೂರ್ತಿ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ,
ಎ.ಎನ್.ಕೆ ರಸ್ತೆ, ಅಚ್ಯುತ್ ರಾವ್ ಬಡಾವಣೆ, ಸವಳಂಗ ರಸ್ತೆ, ರಾಘವೇಂದ್ರ ಸ್ವಾಮಿ ಮಠ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Details : Hosmane, Hosmane Channel Area, Sharavathinagar A and B Block Ayurveda College, Kuvempu Road, Sagar Road, Ayanur Gate, Adichunchanagiri Community Bhawan, Unity Hospital, Jail Circle, Subbaiah Hospital, Jail Road, Satyam Four Wings, ARB Colony, Ashokanagar, Annanagar, Pampanagar, Ranganath Barangay, Milaghatta, Tippunagar Right, BSNL Bhawan, Park Extension, Durgigudi, Zilla Panchayat Office, Tilak Nagar, RMR Road, Jayanagar, Basavanagudi, Nanjappa Hospital, Max Hospital, Shivamurthy Circle, District Collector’s Office, ANK Road, Achyut Rao Barangay, Savalanga Road, Raghavendra Swami Math.