Peace Committee meeting in Sagar, Shiralakoppa: SP calls for celebrating festivals with harmony ಸಾಗರ, ಶಿರಾಳಕೊಪ್ಪದಲ್ಲಿ ಶಾಂತಿ ಸಮಿತಿ ಶಾಂತಿ ಸಮಿತಿ ಸಭೆ : ಸೌಹಾರ್ದತೆಯಿಂದ ಹಬ್ಬ ಆಚರಣೆಗೆ ಎಸ್ಪಿ ಕರೆ

ಸಾಗರ, ಶಿರಾಳಕೊಪ್ಪದಲ್ಲಿ ಶಾಂತಿ ಸಮಿತಿ ಸಭೆ : ಸೌಹಾರ್ದತೆಯಿಂದ ಹಬ್ಬ ಆಚರಣೆಗೆ ಎಸ್ಪಿ ಕರೆ

ಸಾಗರ / ಶಿಕಾರಿಪುರ, ಆಗಸ್ಟ್ 19: ಮುಂಬರುವ ಗೌರಿ – ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ, ಆಗಸ್ಟ್ 19 ರಂದು ಸಾಗರದ ಶಾರದಾಂಬ ಸಭಾ ಭವನ ಹಾಗೂ ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪಟ್ಟಣದ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ ಶಾಂತಿ ಸಮಿತಿ ಸಭೆಗಳಲ್ಲಿ, ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಭಾಗವಹಿಸಿದ್ದರು.

ಸಹಬಾಳ್ವೆಯ ಸಂಕೇತ : ಶಾಂತಿ ಸಮಿತಿ ಸಭೆಗಳಲ್ಲಿ ಎಸ್ಪಿ ಮಾತನಾಡಿ, ‘ಕಳೆದ ಬಾರಿಯಂತೆ ಈ ಬಾರಿಯು ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳು ಬಂದೇ ಬಾರಿ ಬಂದಿವೆ. ನಮ್ಮ ಸಾಮರಸ್ಯ ತೋರ್ಪಡಿಸಲು ಒಂದು ಸದಾವಕಾಶವಾಗಿದೆ. ಅತ್ಯಂತ ಸಹಬಾಳ್ವೆಯಿಂದ ಹಬ್ಬ ಆಚರಿಸೋಣ’ ಎಂದು ನಾಗರೀಕರಿಗೆ ಕರೆ ನೀಡಿದರು.

ನಾಗರೀಕರು ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಬೇಕೆಂಬ ಉದ್ದೇಶದಿಂದ, ಪೊಲೀಸ್ ಇಲಾಖೆಯು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡುತ್ತಿದೆ. ಇದಕ್ಕೆ ನಾಗರೀಕರ ಸಹಕಾರ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.

ವದಂತಿಗಳಿಗೆ ಕಿವಿಗೊಡಬೇಡಿ : ವದಂತಿ, ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಕೆಲವೊಮ್ಮೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ವಿಚಾರಗಳನ್ನು ಹರಿಬಿಡುವ ಸಾಧ್ಯತೆಗಳಿರುತ್ತವೆ. ಇಂತಹ ವೇಳೆ ಭಾವೋದ್ವೇಕ್ಕೆ ಒಳಗಾಗದೆ, ಸತ್ಯಾಸತ್ಯತೆ ಅರಿಯುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ಇಲಾಖೆಯು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಿದೆ. ಪ್ರಚೋದನಕಾರಿ, ಸುಳ್ಳು ಪೋಸ್ಟ್ ಹಾಕುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Sagar / Shikaripura, August 20: As part of the upcoming Gauri Ganesh and Eid Milad festivals, District SP G K Mithun Kumar participated in the peace committee meetings organized on August 19 at Sharadamba Sabha Bhavan in Sagar and Valmiki Bhavan in Shiralakoppa town of Shikaripura taluk.

Police parade in Kargal town! ಕಾರ್ಗಲ್ ಪಟ್ಟಣದಲ್ಲಿ ಪೊಲೀಸರ ಪಥ ಸಂಚಲನ Previous post kargal | ಕಾರ್ಗಲ್ ಪಟ್ಟಣದಲ್ಲಿ ಪೊಲೀಸರ ಪಥ ಸಂಚಲನ!
Collision between milk truck and bike: Two students die in horrific accident! ಶಿವಮೊಗ್ಗದಲ್ಲಿ ಹಾಲಿನ ವಾಹನ – ಬೈಕ್ ನಡುವೆ ಡಿಕ್ಕಿ : ಇಬ್ಬರು ವಿದ್ಯಾರ್ಥಿಗಳ ದಾರುಣ ಸಾವು! Next post shimoga | ಶಿವಮೊಗ್ಗದಲ್ಲಿ ಹಾಲಿನ ವಾಹನ – ಬೈಕ್ ನಡುವೆ ಡಿಕ್ಕಿ : ಇಬ್ಬರು ವಿದ್ಯಾರ್ಥಿಗಳ ದಾರುಣ ಸಾ**ವು!