ಸಾಗರ (sagara), ಆಗಸ್ಟ್ 19: ಮುಂಬರುವ ಗೌರಿ ಗಣೇಶ್ ಹಬ್ಬ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಆಗಸ್ಟ್ 19 ರಂದು ಜಿಲ್ಲಾ ಪೊಲೀಸರು ಸಾಗರ ತಾಲೂಕಿನ ಕಾರ್ಗಲ್ ಪಟ್ಟಣದಲ್ಲಿ ಪಥ ಸಂಚಲನ ನಡೆಸಿದರು.
ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್ ಎ ಎಫ್), ವಿಶೇಷ ಕಾರ್ಯಪಡೆ ಪೊಲೀಸರು ಹಾಗೂ ಸ್ಥಳೀಯ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.
ಕಾರ್ಗಲ್ ಪಟ್ಟಣದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಪಥ ಸಂಚಲನ ಸಾಗಿತು. ಪೊಲೀಸರ ಪಥ ಸಂಚಲನವು ನಾಗರೀಕರ ಗಮನ ಸೆಳೆಯಿತು.
ಮುನ್ನೆಚ್ಚರಿಕೆ : ಕಳೆದ ಹಲವು ದಿನಗಳಿಂದ ಜಿಲ್ಲೆಯ ನಗರ – ಪಟ್ಟಣ ಪ್ರದೇಶಗಳಲ್ಲಿ ವಿಶೇಷ ಕಾರ್ಯಪಡೆ ಪೊಲೀಸರು ಸ್ಥಳೀಯ ಠಾಣೆಗಳ ಪೊಲೀಸರೊಂದಿಗೆ ಪಥ ಸಂಚಲನ ನಡೆಸುತ್ತಿದ್ದಾರೆ. ಇದೀಗ ಆರ್ ಎ ಎಫ್ ಸಿಬ್ಬಂದಿಗಳು ಕೂಡ ಭಾಗಿಯಾಗಿದ್ದಾರೆ.
Sagara, August 19: As a precautionary measure, the district police conducted a procession in Kargal town of Sagara taluk on August 19, in view of the upcoming Gauri Ganesh festival and to maintain law and order.

