Collision between milk truck and bike: Two students die in horrific accident! ಶಿವಮೊಗ್ಗದಲ್ಲಿ ಹಾಲಿನ ವಾಹನ – ಬೈಕ್ ನಡುವೆ ಡಿಕ್ಕಿ : ಇಬ್ಬರು ವಿದ್ಯಾರ್ಥಿಗಳ ದಾರುಣ ಸಾವು!

shimoga | ಶಿವಮೊಗ್ಗದಲ್ಲಿ ಹಾಲಿನ ವಾಹನ – ಬೈಕ್ ನಡುವೆ ಡಿಕ್ಕಿ : ಇಬ್ಬರು ವಿದ್ಯಾರ್ಥಿಗಳ ದಾರುಣ ಸಾ**ವು!

ಶಿವಮೊಗ್ಗ (shivamogga), ಆಗಸ್ಟ್ 20: ಶಿವಮೊಗ್ಗ ನಗರದ ನಗರದ ಸರ್ಕ್ಯೂಟ್ ಹೌಸ್ ಸರ್ಕಲ್ ಬಳಿ, ಆಗಸ್ಟ್ 20 ರ ಮುಂಜಾನೆ ನಂದಿನಿ ಹಾಲು ಸಾಗಾಣೆ ಮಾಡುವ ಟಾಟಾ ಏಸ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ, ಬೈಕ್ ನಲ್ಲಿದ್ದ ಇಬ್ಬರು  ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃ**ತಪ**ಟ್ಟ ದಾರುಣ ಘಟನೆ ನಡೆದಿದೆ.

ಉಡುಪಿ ಮೂಲದ ಆದಿತ್ಯ (22) ಹಾಗೂ ಚಿತ್ರದುರ್ಗ ಜಿಲ್ಲೆ ಹಿರಿಯೂರು ಮೂಲದ ಸಂದೀಪ್ (22) ಮೃ**ತಪ**ಟ್ಟವರೆಂದು ಗುರುತಿಸಲಾಗಿದೆ. ಇವರು ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜ್ ನಲ್ಲಿ ಮೂರನೇ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ.

ಬೆಳಿಗ್ಗೆ 5. 15 ರ ಸುಮಾರಿಗೆ ಅವಘಟ ಸಂಭವಿಸಿದೆ. ಅಪಘಾತದ ವೇಳೆ ವಾಹನ ಹಿಂಬದಿಯಿಂದ್ದ ಹಾಲಿನ ಪ್ಯಾಕೆಟ್ ಗಳಿದ್ದ ಕ್ರೇಟ್ ಗಳು ನೆಲಕ್ಕೆ ಬಿದ್ದಿವೆ. ಇದರಿಂದ ರಸ್ತೆ ಮೇಲೆಲ್ಲಾ ಹಾಲು ಚೆಲ್ಲಿದೆ.

ಅಪಘಾತದ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ. ಘಟನಾ ಸ್ಥಳಕ್ಕೆ ಪಶ್ಚಿಮ ಸಂಚಾರಿ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.

Shivamogga, August 20: In a horrific incident, two medical college students on the bike d**ie**d on the spot in a collision between a Tata Ace vehicle carrying Nandini milk and a bike near the city’s Circuit House Circle in Shivamogga city on the early morning of August 20.

Peace Committee meeting in Sagar, Shiralakoppa: SP calls for celebrating festivals with harmony ಸಾಗರ, ಶಿರಾಳಕೊಪ್ಪದಲ್ಲಿ ಶಾಂತಿ ಸಮಿತಿ ಶಾಂತಿ ಸಮಿತಿ ಸಭೆ : ಸೌಹಾರ್ದತೆಯಿಂದ ಹಬ್ಬ ಆಚರಣೆಗೆ ಎಸ್ಪಿ ಕರೆ Previous post ಸಾಗರ, ಶಿರಾಳಕೊಪ್ಪದಲ್ಲಿ ಶಾಂತಿ ಸಮಿತಿ ಸಭೆ : ಸೌಹಾರ್ದತೆಯಿಂದ ಹಬ್ಬ ಆಚರಣೆಗೆ ಎಸ್ಪಿ ಕರೆ
Mysterious disappearance of student from Agumbe school hostel: Police department appeals for help in finding him ಆಗುಂಬೆಯ ಶಾಲಾ ಹಾಸ್ಟೆಲ್ ನಿಂದ ವಿದ್ಯಾರ್ಥಿಯ ನಿಗೂಢ ಕಣ್ಮರೆ : ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ Next post agumbe news | ಆಗುಂಬೆಯ ಶಾಲಾ ಹಾಸ್ಟೆಲ್ ನಿಂದ ವಿದ್ಯಾರ್ಥಿಯ ನಿಗೂಢ ಕಣ್ಮರೆ : ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ