
shimoga | ಶಿವಮೊಗ್ಗ : ದಾಯಾದಿಗಳ ಕಲಹ – ಓರ್ವನ ಕೊ***ಲೆಯಲ್ಲಿ ಅಂತ್ಯ!
ಶಿವಮೊಗ್ಗ (shivamogga), ಆಗಸ್ಟ್ 21: ದೊಡ್ಡಪ್ಪ – ಚಿಕ್ಕಪ್ಪನ ಮಕ್ಕಳ ನಡುವಿನ ಕಲಹ, ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ, ಶಿವಮೊಗ್ಗದ ವಿನೋಬನಗರ ತರಕಾರಿ ಮಾರುಕಟ್ಟೆ ಸಮೀಪದ ಇಂದಿರಾಗಾಂಧಿ ಬಡಾವಣೆ ಸಮೀಪ ಆಗಸ್ಟ್ 20 ರ ರಾತ್ರಿ ನಡೆದಿದೆ.
ಬನ್ನಿಕೆರೆ ಗ್ರಾಮದ ನಿವಾಸಿ ಜನಾರ್ದನ್ (27) ಕೊಲೆಗೀಡಾದ ಯುವಕ ಎಂದು ಗುರುತಿಸಲಾಗಿದೆ. ಮೃತನ ದೊಡ್ಡಪ್ಪನ ಮಗನಾದ, ಬನ್ನಿಕೆರೆ ಗ್ರಾಮದ ನಿವಾಸಿಯಾದ ಹನುಮಂತ (26) ಆರೋಪಿಯಾಗಿದ್ದಾನೆ.
ಕೊಲೆಗೀಡಾದ ಜನಾರ್ದನ್ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆಗಸ್ಟ್ 20 ರ ರಾತ್ರಿ ಹೋಟೆಲ್ ಸಮೀಪದ 100 ಅಡಿ ರಸ್ತೆಯಲ್ಲಿ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಇದು ವಿಕೋಪಕ್ಕೆ ತಿರುಗಿದ್ದು, ಆರೋಪಿಯು ಚೂರಿಯಿಂದ ಜನಾರ್ದನ್’ಗೆ ಇರಿದಿದ್ದಾನೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಜನಾರ್ದನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆ ನಡೆದ ಕೆಲ ಗಂಟೆಗಳಲ್ಲಿಯೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆಗೊಳಪಡಿಸಿದ್ದಾರೆ. ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾಗಿ ಆರೋಪಿ ತಿಳಿಸಿದ್ದಾನೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಜಿ ಕೆ ಮಿಥುನ್ ಕುಮಾರ್, ಇನ್ಸ್’ಪೆಕ್ಟರ್ ಡಿ ಕೆ ಸಂತೋಷ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಯಿತ್ತು ಪರಿಶೀಲಿಸಿದ್ದಾರೆ. ಈ ಕುರಿತಂತೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Shivamogga, August 20: A dispute between the children of an uncle and his uncle, which ended in the murder of one of them, took place near the Indira Gandhi Layout near Vinobanagar Vegetable Market in Shivamogga city.