Dharmasthala case: Chinnaiah transferred to Shivamogga Central Jail? ಧರ್ಮಸ್ಥಳ ಪ್ರಕರಣ : ಶಿವಮೊಗ್ಗ ಸೆಂಟ್ರಲ್ ಜೈಲಿಗೆ ಚಿನ್ನಯ್ಯ ಸ್ಥಳಾಂತರ?

dharmasthala | BREAKING NEWS | ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಭಾರೀ ಟ್ವಿಸ್ಟ್ : ಮಾಸ್ಕ್ ಮ್ಯಾನ್ ಅರೆಸ್ಟ್!

ಧರ್ಮಸ್ಥಳ (dharmasthala), ಆಗಸ್ಟ್ 23: ಧರ್ಮಸ್ಥಳದಲ್ಲಿ ನೂರಾರು ಜನರನ್ನು ಹೂತು ಹಾಕಿರುವುದಾಗಿ ಹೇಳಿ ಭಾರೀ ಸಂಚಲನ ಸೃಷ್ಟಿಸಿದ್ದ ಅನಾಮಿಕ ವ್ಯಕ್ತಿಯನ್ನೇ, ವಿಶೇಷ ತನಿಖಾ ತಂಡ (ಎಸ್ಐಟಿ) ಬಂಧಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ!

ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ನೇತೃತ್ವದ ಪೊಲೀಸ್ ತಂಡ ಆಗಸ್ಟ್ 22 ರಂದೇ ಅನಾಮಿಕನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿತ್ತು. ಆಗಸ್ಟ್ 23 ರ ಬೆಳಿಗ್ಗೆ ಆತನನ್ನು ಅಧಿಕೃತವಾಗಿ ಬಂಧಿಸಿದೆ ಎಂದು ತಿಳಿದುಬಂದಿದೆ.

ಸದರಿ ಅನಾಮಿಕನು ಈ ಹಿಂದೆ ತಾನು ಧರ್ಮಸ್ಥಳದಲ್ಲಿ ಪೌರ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದು, ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿದ್ದ. ಈ ಕುರಿತಂತೆ ತಲೆ ಬುರುಡೆಯೊಂದನ್ನು ತಂದಿದ್ದ. ನ್ಯಾಯಾಲಯಕ್ಕೆ ಸ್ವಯಂಪ್ರೇರಿತ ದೂರು ಹೇಳಿಕೆ ದಾಖಲಿಸಿದ್ದ.

ಈತನ ಹೇಳಿಕೆಯು ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ನಡುವೆ ರಾಜ್ಯ ಸರ್ಕಾರವು ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ರಚನೆ ಮಾಡಿತ್ತು. ಅನಾಮಿಕ ಹೇಳಿದಂತೆ ಧರ್ಮಸ್ಥಳದ ವಿವಿಧೆಡೆ ಎಸ್ಐಟಿ ತಂಡ ಶೋಧ ಕಾರ್ಯಾಚರಣೆ ನಡೆಸಿತ್ತು.

13 ಕಡೆ ಗುಂಡಿ ತೆಗೆದು ಪರಿಶೀಲಿಸಿತ್ತು. ಆದರೆ ಒಂದು ಪಾಯಿಂಟ್ ಹೊರುತುಪಡಿಸಿ, ಉಳಿದೆಡೆ ಅಸ್ಥಿಪಂಜರಗಳು ದೊರಕಿರಲಿಲ್ಲ. ಎಸ್ಐಟಿ ತನಿಖೆ ವೇಳೆ ಅನಾಮಿಕನ ಹೇಳಿಕೆಯ ಬಗ್ಗೆ ಅನುಮಾನ ವ್ಯಕ್ತವಾದ ಕಾರಣದ ಹಿನ್ನೆಲೆಯಲ್ಲಿ, ಈತನನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆತನ ಬಂಧನಕ್ಕೆ ಕಾರಣವೇನು? ಎಂಬಿತ್ಯಾದಿ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.

Dharmasthala, August 23: Information has emerged that the Special Investigation Team (SIT) has arrested the anonymous person who created a huge stir by claiming to have buried hundreds of people in Dharmasthala!

The Abbalagere Gram Panchayat administration in Shivamogga is raising awareness about the ban on child marriage and the POCSO Act through a tree planting program! ಶಿವಮೊಗ್ಗ : ಹಸಿರೀಕರಣ ಮೂಲಕ ಬಾಲ್ಯ ವಿವಾಹ ನಿಷೇಧ - ಪೋಕ್ಸೋ ಕಾಯ್ದೆ ಜಾಗೃತಿ - ಅಬ್ಬಲಗೆರೆ ಗ್ರಾಪಂ ಆಡಳಿತದ ವಿಭಿನ್ನ ಕಾರ್ಯ! Previous post shimoga | ಶಿವಮೊಗ್ಗ : ಹಸಿರೀಕರಣ ಮೂಲಕ ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆ ಜಾಗೃತಿ  – ಅಬ್ಬಲಗೆರೆ ಗ್ರಾಪಂ ಆಡಳಿತದ ವಿಭಿನ್ನ ಕಾರ್ಯ!
Two people from Bhadravati sentenced to death! ಭದ್ರಾವತಿಯ ಇಬ್ಬರಿಗೆ ಮರಣ ದಂಡನೆ ಶಿಕ್ಷೆ! Next post bhadravati | ಭದ್ರಾವತಿಯ ಇಬ್ಬರಿಗೆ ಮರಣ ದಂಡನೆ ಶಿಕ್ಷೆ!