Two people from Bhadravati sentenced to death! ಭದ್ರಾವತಿಯ ಇಬ್ಬರಿಗೆ ಮರಣ ದಂಡನೆ ಶಿಕ್ಷೆ!

bhadravati | ಭದ್ರಾವತಿಯ ಇಬ್ಬರಿಗೆ ಮರಣ ದಂಡನೆ ಶಿಕ್ಷೆ!

ಭದ್ರಾವತಿ (bhadravati), ಆಗಸ್ಟ್ 23: ಪತಿಯ ಹತ್ಯೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪತ್ನಿ ಹಾಗೂ ಆಕೆಯ ಸ್ನೇಹಿತನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ, 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಭದ್ರಾವತಿ ಜನ್ನಾಪುರದ ಎನ್ ಟಿ ಬಿ ರಸ್ತೆ ನಿವಾಸಿಗಳಾದ ಲಕ್ಷ್ಮೀ (29) ಹಾಗೂ ಕೃಷ್ಣಮೂರ್ತಿ (30)  ಮರಣ ದಂಡನೆ ಶಿಕ್ಷೆಗೊಳಗಾದವರೆಂದ ಗುರುತಿಸಲಾಗಿದೆ. ಇದೇ ಪ್ರಕರಣದಲ್ಲಿ ಶಿವರಾಜು (32) ಎಂಬಾತನಿಗೆ 7 ವರ್ಷ ಶಿಕ್ಷೆ ವಿಧಿಸಲಾಗಿದೆ.

ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು 23-8-2025 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ ಅವರು ವಾದ ಮಂಡನೆ ಮಾಡಿದ್ದರು.

ಪ್ರಕರಣದ ಹಿನ್ನೆಲೆ : ಕೊಲೆಗೀಡಾದ ಇಮ್ತಿಯಾಜ್ ಅಹಮದ್ ಎಂಬುವರು, ಲಕ್ಷ್ಮೀಯೊಂದಿಗೆ ಗುಲ್ಬರ್ಗದಲ್ಲಿ ರಿಜಿಸ್ಟರ್ ವಿವಾಹವಾಗಿದ್ದರು. 07-07-2016 ರಂದು ಲಕ್ಷ್ಮೀಯು, ಪತಿಯನ್ನು ಕೃಷ್ಣಮೂರ್ತಿಯೊಂದಿಗೆ ಸೇರಿಕೊಂಡು ಕಬ್ಬಿಣದ ರಾಡ್ ನಿಂದ ಹೊಡೆದು ಸಾಯಿಸಿದ್ದಳು.

ನಂತರ ಶಿವರಾಜ್ ನ ನೆರವು ಪಡೆದುಕೊಂಡು, ಮೂವರು ಮೃತದೇಹವನ್ನು ಹೊಳೆಗೆ ಹಾಕಿದ್ದರು. ಈ ಕುರಿತಂತೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0099/2016 ಐಪಿಸಿ ಕಲಂ 302, 201ಸಹಿತ 34  ಐಪಿಸಿ ರೀತ್ಯ ಪ್ರಕರಣ ದಾಖಲಾಗಿತ್ತು.

ಅಂದಿನ ತನಿಖಾಧಿಕಾರಿಗಳಾದ ಇನ್ಸ್’ಪೆಕ್ಟರ್ ಪ್ರಭು ಬಿ ಸೂರಿನ್, ಭದ್ರಾವತಿ ನಗರ ವೃತ್ತದ ಸಿಪಿಐ ಚಂದ್ರ ಶೇಖರ್ ಟಿ ಕೆ ರವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

bhadravati, August 23: The 4th Additional District and Sessions Court has sentenced a wife and a man to death for the murder of her husband.

Dharmasthala case: Chinnaiah transferred to Shivamogga Central Jail? ಧರ್ಮಸ್ಥಳ ಪ್ರಕರಣ : ಶಿವಮೊಗ್ಗ ಸೆಂಟ್ರಲ್ ಜೈಲಿಗೆ ಚಿನ್ನಯ್ಯ ಸ್ಥಳಾಂತರ? Previous post dharmasthala | BREAKING NEWS | ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಭಾರೀ ಟ್ವಿಸ್ಟ್ : ಮಾಸ್ಕ್ ಮ್ಯಾನ್ ಅರೆಸ್ಟ್!
Hosanagara : Man killed by accidental discharge from a loaded gun! ಹೊಸನಗರ : ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ ವ್ಯಕ್ತಿ ಬಲಿ! Next post shimoga | ಶಿವಮೊಗ್ಗ : ದರೋಡೆ ಪ್ರಕರಣ – ಇಬ್ಬರು ಆರೋಪಿಗಳ ಬಂಧನ!