The Abbalagere Gram Panchayat administration in Shivamogga is raising awareness about the ban on child marriage and the POCSO Act through a tree planting program! ಶಿವಮೊಗ್ಗ : ಹಸಿರೀಕರಣ ಮೂಲಕ ಬಾಲ್ಯ ವಿವಾಹ ನಿಷೇಧ - ಪೋಕ್ಸೋ ಕಾಯ್ದೆ ಜಾಗೃತಿ - ಅಬ್ಬಲಗೆರೆ ಗ್ರಾಪಂ ಆಡಳಿತದ ವಿಭಿನ್ನ ಕಾರ್ಯ!

shimoga | ಶಿವಮೊಗ್ಗ : ಹಸಿರೀಕರಣ ಮೂಲಕ ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆ ಜಾಗೃತಿ  – ಅಬ್ಬಲಗೆರೆ ಗ್ರಾಪಂ ಆಡಳಿತದ ವಿಭಿನ್ನ ಕಾರ್ಯ!

ಶಿವಮೊಗ್ಗ (shivamogga), ಆಗಸ್ಟ್ 22: ಗಿಡ ನೆಡುವ ಕಾರ್ಯದ ಮೂಲಕ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆಗಳ ಜಾಗೃತಿ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರ ಸ್ಮರಣೆ ಮಾಡುವ ವಿನೂತನ ಕಾರ್ಯಕ್ರಮವನ್ನು ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತ ನಡೆಸುತ್ತಿದೆ.

79 ನೇ ಸ್ವಾತಂತ್ರ್ಯ ದಿನಾಚರಣೆ, ಮಕ್ಕಳ ಹಾಗೂ ಮಹಿಳಾ ದಿನಾಚರಣೆ ಅಂಗವಾಗಿ ಕಳೆದ ಕೆಲ ದಿನಗಳಿಂದ ಗ್ರಾಮ ಪಂಚಾಯ್ತಿಯ ವಿವಿಧೆಡೆ ಹಸಿರೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಆಗಸ್ಟ್ 22 ರಂದು ಬಸವನಗಂಗೂರು ಗ್ರಾಮದ ಕರ್ನಾಟಕ ಗೃಹ ಮಂಡಳಿ ಬಡಾವಣೆಯ ಉದ್ಯಾನವನಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭಾಗ್ಯ ಹೊಸಟ್ಟಿ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಸ್ವಾತಂತ್ರ್ಯ ದಿನಾಚರಣೆ ವೇಳೆ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಗ್ರಾಮ ಪಂಚಾಯ್ತಿ ಒಕ್ಕೂಟ, ಮಹಿಳಾ ಸ್ವಸಹಾಯ ಸಂಘ, ಗ್ರಾಮ ಪಂಚಾಯ್ತಿ ಆಡಳಿತದ ಸಂಯುಕ್ತಾಶ್ರಯದಲ್ಲಿ ಹಸಿರೀಕರಣ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ ಎಂದರು.

ಗ್ರಾಪಂ ಪಿಡಿಓ ರಾಜಪ್ಪ ಅವರು ಮಾತನಾಡಿ, 500 ಗಿಡಗಳನ್ನು ನೆಡಲಾಗುತ್ತಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿದ ಮಹನೀಯರ ಕಾರ್ಯ ಸ್ಮರಿಸಲು ಹಸಿರೀಕರಣ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಲೆಕ್ಕ ಪರಿಶೋಧಕರು ಹಾಗೂ ವಕೀಲರಾದ ಮಂಜುನಾಥ್ ಅವರು ಮಾತನಾಡಿ, ಹಸಿರೀಕರಣದ ಮೂಲಕ ಜನರಿಗೆ ಪ್ರಮುಖ ಕಾಯ್ದೆಗಳ ಬಗ್ಗೆ ಅರಿವು ಮೂಡಿಸುವ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟದ ಮಹತ್ವದ ಬಗ್ಗೆ ನಾಗರೀಕರಿಗೆ ತಿಳಿಸಲು ಮುಂದಾಗಿರುವ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತದ ಕ್ರಮ ಸ್ವಾಗತಾರ್ಹ. ಜಿಲ್ಲೆಯ ಎಲ್ಲ ಗ್ರಾಪಂಗಳು ಈ ರೀತಿಯ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಸಿಬ್ಬಂದಿ ಸಂದೀಪ್, ಕೆಹೆಚ್’ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷರಾದ ಜಿ ಎಂ ರಾಮಚಂದ್ರ, ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್, ಮುಖಂಡರಾದ ಕುಶಕುಮಾರ್, ಗುರುಚರಣ್, ಗೋಪಾಲ್ ಪೂಜಾರಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Shivamogga, August 22: The Abbalagere Gram Panchayat administration in Shivamogga taluk is conducting an innovative program to raise awareness about the Child Marriage Prohibition Act, the POCSO Act, and to commemorate the martyrs of the country’s freedom struggle through tree planting.

What did Shimoga DC, SP say in the peace committee meeting? ಶಾಂತಿ ಸಮಿತಿ ಸಭೆಯಲ್ಲಿ ಶಿವಮೊಗ್ಗ ಡಿಸಿ, ಎಸ್ಪಿ ಹೇಳಿದ್ದೇನು? Previous post shimoga | ಶಾಂತಿ ಸಮಿತಿ ಸಭೆ | ಶಿವಮೊಗ್ಗ ಡಿಸಿ, ಎಸ್ಪಿ ಹೇಳಿದ್ದೇನು?
Dharmasthala case: Chinnaiah transferred to Shivamogga Central Jail? ಧರ್ಮಸ್ಥಳ ಪ್ರಕರಣ : ಶಿವಮೊಗ್ಗ ಸೆಂಟ್ರಲ್ ಜೈಲಿಗೆ ಚಿನ್ನಯ್ಯ ಸ್ಥಳಾಂತರ? Next post dharmasthala | BREAKING NEWS | ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಭಾರೀ ಟ್ವಿಸ್ಟ್ : ಮಾಸ್ಕ್ ಮ್ಯಾನ್ ಅರೆಸ್ಟ್!