
bhadravati news | ಭದ್ರಾವತಿ : ಕೊಲೆ ಪ್ರಕರಣ – 8 ಜನರಿಗೆ ಆಜೀವ ಜೈಲು ಶಿಕ್ಷೆ!
ಭದ್ರಾವತಿ (bhadravathi), ಸೆಪ್ಟೆಂಬರ್ 30: ಕೊಲೆ ಪ್ರಕರಣವೊಂದರಲ್ಲಿ 8 ಜನರಿಗೆ ಆಜೀವ ಜೈಲು ಶಿಕ್ಷೆ ವಿಧಿಸಿ, ಭದ್ರಾವತಿಯ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೆಪ್ಟೆಂಬರ್ 29 ರಂದು ತೀರ್ಪು ನೀಡಿದೆ.
ಭದ್ರಾವತಿ ಹೊಸಮನೆಯ ನಿವಾಸಿ ರಮೇಶ್ ಯಾನೆ ಹಂದಿ ರಮೇಶ್ (44), ಹನುಮಂತ ನಗರದ ನಿವಾಸಿಗಳಾದ ವೆಂಕಟರಾಮ (35), ಚಂದ್ರ (37), ಸತ್ಯಸಾಯಿ ನಗರದ ನಿವಾಸಿಗಳಾದ ಕಾರ್ತಿಕ್ (24), ಮಧುಸೂದನ್ (28),
ರಮೇಶ್ (37), ಹೊಸಮನೆಯ ನಾಗರಾಜ್ (25), ಸತ್ಯಸಾಯಿ ನಗರದ ಸಿದ್ದಪ್ಪ (48) ಜೈಲು ಶಿಕ್ಷೆಗೆ ಗುರಿಯಾದವರೆಂದು ಗುರುತಿಸಲಾಗಿದೆ.
ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : ಭದ್ರಾವತಿಯ ಹನುಮಂತನಗರದ ನಿವಾಸಿಯಾದ ಶಾರುಖ್ ಖಾನ್ (26) ಹಾಗೂ ಹಂದಿ ರಮೇಶ್, ಹಣದ ವಿಚಾರಕ್ಕಾಗಿ ಗಲಾಟೆ ಮಾಡಿಕೊಂಡಿದ್ದರು. 30-09-2020 ರ ರಾತ್ರಿ ಶಾರುಖ್ ಖಾನ್ ನನ್ನು, ಹಂದಿ ರಮೇಶ್ ಹಾಗೂ ಆತನ ಸಹಚರರು ಕೊಲೆ ಮಾಡಿದ್ದರು.
ಭದ್ರಾವತಿ ಹೊಸಮನೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0100/2020 ಐಪಿಸಿ ಕಲಂ 302, 201,120 (b), 143, 147, 144, 148 ಸಹಿತ 149 ರೀತ್ಯಾ ಪ್ರಕರಣ ದಾಖಲಾಗಿತ್ತು. ಅಂದಿನ ನಗರ ಸರ್ಕಲ್ ಇನ್ಸ್’ಪೆಕ್ಟರ್ ರಾಘವೇಂದ್ರ ಕಾಂಡಿಕೆ ಅವರು ಪ್ರಕರಣದ ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.
Bhadravati, September 30: The 4th Additional District and Sessions Court of Bhadravati sentenced 8 people to life imprisonment in a murder case on September 29.