children’s day | ಮಕ್ಕಳ ದಿನಾಚರಣೆ ನಿಮಿತ್ತ ವಿಶೇಷ ಲೇಖನ | ‘ಮಕ್ಕಳ ಹಕ್ಕುಗಳ ರಕ್ಷಣೆ ಸಮಾಜದ ಜವಾಬ್ದಾರಿ…’
ಲೇಖಕರು : ತಾಜುದ್ದೀನ್ ಖಾನ್, ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ, ಶಿವಮೊಗ್ಗ.
ಎಲ್ಲಾ ಪ್ರೀತಿಯ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು, ಮಕ್ಕಳನ್ನು ದೇಶದ ಭವಿಷ್ಯ ಮತ್ತು ಆ ದೇಶದ ಅಮೂಲ್ಯವಾದ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಮಕ್ಕಳು ಪ್ರತಿಯೊಂದು ಸಮಾಜದ ಆಧಾರ ಶಿಲೆಗಳು. ಅವರು ನಮ್ಮ ಭವಿಷ್ಯವಾಗಿದ್ದು, ಅವರ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಕ್ಷೇಮಾಭಿವೃದ್ಧಿಗೆ ಅನುಕೂಲಕರವಾದ ವಾತಾವರಣದಲ್ಲಿ ಬೆಳೆಯುವ ಹಕ್ಕು ಹೊಂದಿದ್ದಾರೆ. ಈ ಉದ್ದೇಶಕ್ಕಾಗಿ ವಿಶ್ವಸಂಸ್ಥೆಯು ಮಕ್ಕಳ ಹಕ್ಕುಗಳ ಕುರಿತು ಒಪ್ಪಂದ (United Nations Convention on the Rights of the Child – UNCRC) ಅನ್ನು ರಚಿಸಿತು. ಇದು ವಿಶ್ವದಾದ್ಯಂತ ಅತ್ಯಂತ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಮಾನವ ಹಕ್ಕುಗಳ ಒಪ್ಪಂದವಾಗಿದ್ದು, ಸಂಪೂರ್ಣವಾಗಿ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಉತ್ತೇಜನಕ್ಕೆ ಸಮರ್ಪಿತವಾಗಿದೆ.
ಅವರು ದೇಶದ ಅಭಿವೃದ್ಧಿ ಮತ್ತು ಸಮೃದ್ಧಿಗೆ ಕಾರಣಿಭೂತರಾಗುತ್ತಾರೆ. ಹಾಗೂ ಯಾವುದೇ ದೇಶ, ಸಮುದಾಯ ಹಾಗೂ ಕುಟುಂಬದ ಬೆನ್ನೆಲುಬು ಅಲ್ಲಿರುವ ಮಕ್ಕಳಾಗುತ್ತಾರೆ. ಆದರೆ ನಾವೆಲ್ಲ ತಿಳಿದಿರುವಂತೆ ಮಕ್ಕಳು ಸಮಾಜದ ಅತ್ಯಂತ ದುರ್ಬಲ ವರ್ಗವನ್ನು ಪ್ರತಿನಿಧಿಸುತ್ತಾರೆ ಮತ್ತು ಬಹಳ ಸುಲಭವಾಗಿ ಶೋಷಣೆಗೆ ಗುರಿಯಾಗುತ್ತಾರೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 40% ರಷ್ಟು ಮಕ್ಕಳಿದ್ದಾರೆ. ವಿಶ್ವದಲ್ಲಿಯೇ ಅತ್ಯಂತ ಹೆಚ್ಚು 18 ವರ್ಷದ ಒಳಗಿನ ಮಕ್ಕಳ ಜನಸಂಖ್ಯೆ ಹೊಂದಿರುವ ದೇಶ ಭಾರತವಾಗಿದೆ. ಮಕ್ಕಳ ಹಕ್ಕುಗಳ ಕುರಿತು ಮಕ್ಕಳ ಹಕ್ಕುಗಳ ಒಡಂಬಡಿಕೆ ಯುಎನ್‌ಸಿಆರ್‌ಸಿ (UNCRC) ಅನ್ನು 1989ರ ನವೆಂಬರ್ 20ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂಗೀಕರಿಸಿತು.
ಭಾರತವು 1992 ರಲ್ಲಿ ಈ ಒಪ್ಪಂದಕ್ಕೆ ಸಹಿಯನ್ನು ಹಾಕಿದೆ. ಈ ಒಡಂಬಡಿಕೆಗೆ ಸಹಿ ಹಾಕಿದ ನಂತರ ಭಾರತದಲ್ಲಿ ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಗಾಗಿ ಅನೇಕ ಕಾನೂನುಗಳು ಹಾಗೂ ಯೋಜನೆಗಳನ್ನು ಜಾರಿಗೆ ತಂದಿದೆ. ಮಕ್ಕಳ ನಾಗರಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ವಿವರಿಸುತ್ತದೆ. ಇದನ್ನು ವಿಶ್ವದ ಬಹುತೇಕ ಎಲ್ಲಾ ದೇಶಗಳು ಒಪ್ಪಿಕೊಂಡಿರುವ ಕಾನೂನಾಗಿದೆ. ಇದು ಮಕ್ಕಳ ನಿರ್ಲಕ್ಷ್ಯ, ಶೋಷಣೆ, ದೌರ್ಜನ್ಯ ಮತ್ತು ಹಿಂಸೆಯಿಂದ ರಕ್ಷಿಸಿ, ಅವರಿಗೆ ಗೌರವಪೂರ್ಣ ಮತ್ತು ಅವಕಾಶ ಪೂರ್ಣ ಜೀವನವನ್ನು ಖಚಿತಪಡಿಸುವ ವಿಶ್ವಮಟ್ಟದ ಒಪ್ಪಂದ ವಾಗಿದೆ. ಈ ಕಾನೂನಿನಲ್ಲಿ ಮಕ್ಕಳೆಂದರೆ 18 ವರ್ಷದೊಳಗಿನ ಯಾವುದೇ ವ್ಯಕ್ತಿ ಮಗು ಎಂದು ಪರಿಗಣಿಸಲಾಗಿದೆ.
ಮಕ್ಕಳ ಹಕ್ಕುಗಳ ಒಡಂಬಡಿಕೆ ಕಾನೂನು ಕಾನೂನಿನಲ್ಲಿ ಬಹಳ ಮುಖ್ಯವಾಗಿ 4 ಮುಖ್ಯ (Principles) ತತ್ವಗಳ ಆಧಾರದ ಮೇಲೆ ಜಾರಿಗೆ ತರಲಾಗಿದ್ದು,ಈ ನಾಲ್ಕು ತತ್ವಗಳನ್ನು ಆಧಾರದಲ್ಲಿ ಇಟ್ಟುಕೊಂಡು ಯುಎನ್‌ಸಿಆರ್‌ಸಿಯು ಒಟ್ಟು 54 ಪರಿಚ್ಛೇದಗಳನ್ನು ಹೊಂದಿದ್ದು, ಇದನ್ನು ನಾಲ್ಕು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ:
1. ಜೀವಿಸುವ / ಉಳಿವಿನ ಹಕ್ಕು (Right to Survival) ಜೀವಿಸುವ ಉಳಿಯುವ ಆರೋಗ್ಯ ಮತ್ತು ಪೌಷ್ಟಿಕತೆಯ ಪ್ರತಿಯೊಂದು ಮಗುವಿನ ಹಕ್ಕಾಗಿರುತ್ತದೆ.
2. ಅಭಿವೃದ್ಧಿ ಹೊಂದುವ ಹಕ್ಕು (Right to Development) ಪ್ರತಿಯೊಂದು ಮಗುವಿಗೂ ಶಿಕ್ಷಣ, ಜ್ಞಾನ, ಆಟ, ವಿಶ್ರಾಂತಿ ಮತ್ತು ಮಾಹಿತಿಯ ಪ್ರಾಪ್ತಿಯ ಹಕ್ಕು.
3. ರಕ್ಷಣೆಯ ಹಕ್ಕು (Right to Protection) – ಹಿಂಸೆ, ನಿರ್ಲಕ್ಷ್ಯ, ದೌರ್ಜನ್ಯ ಮತ್ತು ದುರ್ಬಳಕೆಯಿಂದ ಮಕ್ಕಳು ಎಲ್ಲೇ ಇದ್ದರೂ ರಕ್ಷಣೆ ಹೊಂದುವ ಹಕ್ಕನ್ನು ಹೊಂದಿದ್ದಾರೆ.
4. ಭಾಗವಹಿಸುವ ಹಕ್ಕು (Right to Participation) ಇದು ಬಹಳ ಪ್ರಮುಖವಾದ ಹಕ್ಕಾಗಿದ್ದು ಮಕ್ಕಳು ತಮ್ಮ ಹಕ್ಕುಗಳನ್ನು ಕುರಿತು ಅರಿವು ಮೂಡಿಸುವುದನ್ನು ಖಾತರಿ ಪಡಿಸುವುದು ಸರ್ಕಾರದ ಪ್ರಾಥಮಿಕ ಜವಾಬ್ದಾರಿ ಮತ್ತು ಅವರು ಮಕ್ಕಳು ತಮ್ಮ ವೈಯಕ್ತಿಕ ಬೆಳವಣಿಗೆಯಲ್ಲಿ ಹಾಗೂ ತಮಗೆ ಸಂಬಂಧಿಸಿದ ವಿಷಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸದೃಢಗೊಳಿಸಲು ಅವರಿಗೆ ತಮ್ಮ ಗುರಿಗಳನ್ನು ರೂಪಿಸಿಕೊಳ್ಳಲು ಮತ್ತು ಅವರ ವಯಸ್ಸಿಗೆ ಪ್ರೌಢತೆಗೆ ಅನುಗುಣವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪೂರಕವಾದ ವಾತಾವರಣ ಅವಕಾಶ ಮತ್ತು ಕೌಶಲ್ಯ ಅಭಿವೃದ್ಧಿಗೆ ನೆರವನ್ನು ಒದಗಿಸುವುದು ಪ್ರತಿಯೊಂದು ಮಗುವಿನ ಹಕ್ಕಾಗಿದೆ.
ಮಕ್ಕಳ ಹಕ್ಕುಗಳು ಏಕೆ ಮುಖ್ಯ? : ಮಕ್ಕಳ ಹಕ್ಕುಗಳು ಅತ್ಯಂತ ಅಗತ್ಯವಾದವು. ಏಕೆಂದರೆ ಅವು ಪ್ರತಿಯೊಂದು ಮಗುವಿಗೂ ಗೌರವ ಮತ್ತು ಮಾನವೀಯತೆ ನೀಡುತ್ತವೆ. ಮಕ್ಕಳನ್ನು ಹಿಂಸೆ, ದುರ್ಬಳಕೆ ಮತ್ತು ಭೇದಭಾವದಿಂದ ರಕ್ಷಿಸುತ್ತವೆ. ಅವರಿಗೆ ಶಿಕ್ಷಣ, ಆರೋಗ್ಯ ಹಾಗೂ ಅಭಿವೃದ್ಧಿಗೆ ಅಗತ್ಯವಾದ ಅವಕಾಶಗಳನ್ನು ಖಚಿತಪಡಿಸುತ್ತವೆ. ಮಕ್ಕಳಿಗೆ ಸಮಾಜದಲ್ಲಿ ಪಾಲ್ಗೊಳ್ಳಲು ಮತ್ತು ತಮ್ಮ ಭವಿಷ್ಯವನ್ನು ರೂಪಿಸಲು ಶಕ್ತಿ ನೀಡುತ್ತವೆ.
ಮಕ್ಕಳ ಹಕ್ಕುಗಳನ್ನು ಗೌರವಿಸುವ ಸಮಾಜಗಳು ಹೆಚ್ಚು ಬಲಿಷ್ಠ, ಸುರಕ್ಷಿತ ಮತ್ತು ನ್ಯಾಯ ಸಮ್ಮತವಾಗುತ್ತವಡಿ ಯುಎನ್‌ಸಿಆರ್‌ಸಿ (UNCRC) ಕೇವಲ ಕಾನೂನು ಪತ್ರವಲ್ಲ — ಅದು ಮಕ್ಕಳ ಕ್ಷೇಮಾಭಿವೃದ್ಧಿಗೆ ವಿಶ್ವದ ಸಮಗ್ರ ಬದ್ಧತೆಯ ಪ್ರತೀಕವಾಗಿದೆ. ಯಾವ ದೇಶದಲ್ಲಿ ಜನಿಸಿದರೂ ಪ್ರತಿಯೊಬ್ಬ ಮಗುವಿಗೂ ಸುರಕ್ಷಿತ, ಆರೋಗ್ಯಕರ, ಶಿಕ್ಷಣ ಪೂರ್ಣ ಮತ್ತು ಭಯ ಮುಕ್ತ ಜೀವನ ನಡೆಸುವ ಹಕ್ಕು ಇದೆ. ಇಷ್ಟೆಲ್ಲ ಹಕ್ಕುಗಳು ಇದ್ದರೂ ಕೂಡ ಪ್ರತಿನಿತ್ಯ ಮಕ್ಕಳು ಶೋಷಣೆ ದೌರ್ಜನ್ಯ ಕಿರುಕುಳ ಅತ್ಯಾಚಾರ ಕೊಳಗಾಗ್ತಿರೋದು, ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಮಕ್ಕಳು ಕುಟುಂಬದ ನಾಲ್ಕು ಗೋಡೆಗಳ ಮಧ್ಯೆ ಶೋಷಣೆ ದೌರ್ಜನ್ಯ ಕೊಳಗಾಗ್ತಿರೋದು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು.
ಮಕ್ಕಳಿಗಿರುವ ಕಾಯ್ದೆಗಳ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಅವಶ್ಯಕತೆ ಇದೆ. ಪೋಷಕರು, ಸಮಾಜ ಮತ್ತು ಸರ್ಕಾರಗಳ ಕರ್ತವ್ಯವೆಂದರೆ ಈ ಹಕ್ಕುಗಳನ್ನು ಗೌರವಿಸಿ, ರಕ್ಷಿಸಿ ಮತ್ತು ಅನುಷ್ಠಾನಗೊಳಿಸುವುದು, ಇದರಿಂದ ಪ್ರತಿಯೊಂದು ಮಗುವು ತನ್ನ ಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಸಾಧ್ಯವಾಗುತ್ತದೆ.
ಭಾರತ ಸರ್ಕಾರವು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಅನೇಕ ಕಾನೂನುಗಳನ್ನು ಜಾರಿಗೆ ತಂದರು ಮುಖ್ಯವಾಗಿ ಬಾಲ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣಾ) ಕಾಯಿದೆ -2015, ಬಾಲ್ಯ ವಿವಾಹ ನಿಷೇಧ ಕಾಯ್ದೆ -2016, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣ ಕಾಯಿದೆ-2012. ಈಗ ಅನೇಕ ಕಾಯ್ದೆಗಳು ಮತ್ತು ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಮಕ್ಕಳ ರಕ್ಷಣೆಗೆ ಮುಂದಾಗಿದ್ದು ಪುನರ್ವಸತಿಗಾಗಿ ಮಿಷನ್ ವಾತ್ಸಲ್ಯ ಯೋಜನೆ ಜಾರಿಗೆ ತರುವುದರ ಮೂಲಕ ಪುನರವಸ್ಥೆಗೊಳಿಸಲಾಗುತ್ತಿದೆ.
ಆದರೂ ಕೂಡ ಈಗಲೂ ಅನೇಕ ಮಕ್ಕಳು ಸಮಸ್ಯೆಗಳಿಂದ ಬಳಲುತ್ತಿದ್ದುm ಅವರಿಗೆ ಮುಖ್ಯವಾಗಿ ತರುವಲ್ಲಿ ಸಮುದಾಯದ ಪ್ರತಿಯೊಬ್ಬರು ನಾಗರಿಕರು ಕೂಡ ಪ್ರಾಮಾಣಿಕವಾದ ಪ್ರಯತ್ನ ಪಡುವ ಅವಶ್ಯಕತೆ ಇದೆ. ಪ್ರತಿ ಮಗುವಿನ ರಕ್ಷಣೆ ನಮ್ಮ ಹೊಣೆ ಎಂದುಕೊಂಡಾಗ ಮಾತ್ರ ಮಕ್ಕಳಿಗೆ ಸುರಕ್ಷಿತವಾದ ವಾತಾವರಣ ಹಾಗೂ ಆರೋಗ್ಯಕರವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಮತ್ತೊಮ್ಮೆ ಎಲ್ಲಾ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು ತಿಳಿಸುತ್ತಾ, ಮಕ್ಕಳಿಗೆ ಸಂಬಂಧಪಟ್ಟಂತಹ ಯಾವುದೇ ಸಮಸ್ಯೆ ಕಂಡು ಬಂದಲ್ಲಿ ಅಥವಾ ಅಭಿಪ್ರಾಯವಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ಉಚಿತ ಸಹಾಯವಾಣಿ 1098 ಸಂಪರ್ಕಿಸುವುದರ ಮೂಲಕ ಮಾಹಿತಿ ಪಡೆಯಬಹುದು.
Happy Children’s Day to all the beloved children. Children are considered the future of the country and the most valuable asset of that country. Children are the cornerstone of every society. They are our future and have the right to grow up in an environment conducive to their physical, mental, emotional and social well-being. For this purpose, the United Nations created the United Nations Convention on the Rights of the Child (UNCRC). It is the most widely adopted human rights treaty worldwide, dedicated entirely to the protection and promotion of children’s rights.
ಲೇಖಕರ ಸಂರ್ಪಕ ಸಂಖ್ಯೆ : 95388-32526
