shimoga centra jail news | ಶಿವಮೊಗ್ಗ ಸೆಂಟ್ರಲ್ ಜೈಲ್’ಗೆ ಆಟೋದಲ್ಲಿ ತಂದ ಬಾಳೆಗೊನೆಗಳಲ್ಲಿ ಗಾಂಜಾ, ಸಿಗರೇಟ್ : ಬೆಳಕಿಗೆ ಬಂದ ಖತರ್ನಾಕ್ ಪ್ಲ್ಯಾನ್!!

Cannabis and cigarettes found in bananas brought to Shivamogga Central Jail in an auto: A conspiracy plan has come to light!! ಶಿವಮೊಗ್ಗ ಸೆಂಟ್ರಲ್ ಜೈಲ್’ಗೆ ಆಟೋದಲ್ಲಿ ತಂದ ಬಾಳೆಗೊನೆಗಳಲ್ಲಿ ಗಾಂಜಾ, ಸಿಗರೇಟ್ : ಬೆಳಕಿಗೆ ಬಂದ ಖರ್ತನಾಕ್ ಪ್ಲ್ಯಾನ್!!

ಶಿವಮೊಗ್ಗ (shivamogga), ನವೆಂಬರ್ 21: ಶಿವಮೊಗ್ಗ ಸೆಂಟ್ರಲ್ ಜೈಲ್’ಗೆ ಆಟೋವೊಂದರಲ್ಲಿ ತಂದ ಬಾಳೆಗೊನೆಗಳಲ್ಲಿ, ಗಾಂಜಾ ಹಾಗೂ ಸಿಗರೇಟ್ ಗಳನ್ನು ಅಡಗಿಸಿ ತಂದಿದ್ದ ಪ್ರಕರಣವೊಂದನ್ನು ಕೆ.ಎಸ್.ಐ.ಎಸ್.ಎಫ್ ಭದ್ರತಾ ಸಿಬ್ಬಂದಿ ಬಯಲಿಗೆಳೆದಿದ್ದಾರೆ!

ಸದರಿ ಪ್ರಕರಣದಲ್ಲಿ 120 ಗ್ರಾಂ ತೂಕದ ಗಾಂಜಾ ಹಾಗೂ 40 ಸಿಗರೇಟ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಜೈಲ್ ನ ಮುಖ್ಯ ಅಧೀಕ್ಷಕರಾದ ಡಾ. ರಂಗನಾಥ್ ಅವರು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಾಳೆಗೊನೆಗಳಲ್ಲಿ ಗಾಂಜಾ – ಸಿಗರೇಟ್ ಕಳುಹಿಸಿದ್ದು ಯಾರು? ಯಾರಿಗಾಗಿ? ಎಂಬುವುದು ಇನ್ನಷ್ಟೆ ತಿಳಿದುಬರಬೇಕಾಗಿದೆ.

ಖತರ್ನಾಕ್ ಪ್ಲ್ಯಾನ್! : 19/11/2025 ರಂದು ಸೆಂಟ್ರಲ್ ಜೈಲ್ ನ ಮುಖ್ಯ ದ್ವಾರದಲ್ಲಿ ಕರ್ತವ್ಯದಲ್ಲಿದ್ದ ಕೆ.ಎಸ್.ಐ.ಎಸ್.ಎಫ್ ಇನ್ಸ್’ಪೆಕ್ಟರ್ ಜಗದೀಶ್, ಪ್ರೊಬೇಷನರಿ ಸಬ್ ಇನ್ಸ್’ಪೆಕ್ಟರ್ ಪ್ರಭು ಎಸ್, ಸಿಬ್ಬಂದಿಗಳಾದ ಪ್ರವೀಣ್ ಹಾಗೂ ನಿರೂಪಬಾಯಿ ಅವರು ಕಿಡಿಗೇಡಿಗಳ ಖತರ್ನಾಕ್ ಪ್ಲ್ಯಾನ್ ಪತ್ತೆ ಹಚ್ಚಿ ದಕ್ಷತೆ ಮೆರೆದವರಾಗಿದ್ದಾರೆ.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಟೋದಲ್ಲಿ ಜೈಲ್ ಗೆ ತಂದ ಬಾಳೆಗೊನೆಗಳನ್ನು ಅನುಮಾನದ ಮೇರೆಗೆ ತಪಾಸಣೆ ನಡೆಸಿದ್ದಾರೆ. ಈ ವೇಳೆ ಬಾಳೆಗೊನೆಗಳ ತಳಭಾಗದ ದಿಂಡು ಕೊರೆದು, ಕಪ್ಪು ಗಮ್ ಟೇಪ್ ನಲ್ಲಿ ಗಾಂಜಾ ಹಾಗೂ ಸಿಗರೇಟ್ ಗಳನ್ನು ಸುತ್ತಿಟ್ಟಿರುವುದು ಕಂಡುಬಂದಿತ್ತು.

Shivamogga, November 20: KSISF security personnel have uncovered a case where ganja and cigarettes were hidden in banana bags brought to Shivamogga Central Jail in an auto! In the said case, 120 grams of ganja and 40 cigarettes were seized. In this regard, the Chief Superintendent of the Jail, Dr. Ranganath, has registered a case at the Tunganagar Police Station. #shimoga, #shivamogga, #centraljail, #shivamoggacentraljail, #shimoganews,

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →