shimoga news | ಶಿವಮೊಗ್ಗ : ಭದ್ರಾ ನಾಲೆಯಲ್ಲಿ ಮಹಿಳೆಯ ಮೃತದೇಹ ಪತ್ತೆ!

Hosnagar: Retired Teacher Dies After Falling Off Bridge With Bike! ಹೊಸನಗರ : ಸೇತುವೆ ಮೇಲಿಂದ ಆಯತಪ್ಪಿ ಬೈಕ್ ಸಮೇತ ಬಿದ್ದು ನಿವೃತ್ತ ಶಿಕ್ಷಕ ಸಾವು!

ಶಿವಮೊಗ್ಗ (shivamogga), ಡಿಸೆಂಬರ್ 09: ಭದ್ರಾ ಚಾನಲ್ ನಲ್ಲಿ ಅಪರಿಚಿತ ಮಹಿಳೆ ಮೃತದೇಹ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ, ಶಿವಮೊಗ್ಗ ತಾಲೂಕಿನ ಅಮರಾವತಿ ಕ್ಯಾಂಪ್ ಮತ್ತು ನವಿಲೆ ಬಸಾಪುರದ ಮಧ್ಯದಲ್ಲಿನ ಚೌಡಮ್ಮ ದೇವಸ್ಥಾನದ ಸಮೀಪ ನಡೆದಿದೆ.

ಸುಮಾರು 40 ವರ್ಷದ ಮಹಿಳೆಯ ಮೃತ ದೇಹವು ಚಾನಲ್ ನೀರಿನಲ್ಲಿ ತೇಲುತ್ತಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ಮಹಿಳೆಯ ಹೆಸರು, ವಿಳಾಸ ಸೇರಿದಂತೆ ಪೂರ್ವಾಪರಗಳ ಯಾವುದೇ ವಿವರ ಲಭ್ಯವಾಗಿಲ್ಲ.

ಚಹರೆ : ಮೃತ ಮಹಿಳೆಯು 5 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ದೇಹ ಕೊಳೆತ ಸ್ಥಿತಿಯಲ್ಲಿದೆ. ಯಾವುದೇ ಗುರುತುಗಳಿರುವುದಿಲ್ಲ. ಕೈಯಲ್ಲಿ ಹಸಿರು ಗಾಜಿನ ಬಳೆಗಳಿರುತ್ತದೆ.

ಮೃತ ಮಹಿಳೆಯ ಕುರಿತಂತೆ ಮಾಹಿತಿಯಿದ್ದಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ.: 08182-261400/ 261410/261418/ 9480803332 / 9480803350, ಪೊಲೀಸ್ ಕಂಟ್ರೋಲ್ ರೂಂ ನಂ.: 100 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Shivamogga, December 09: The partially decomposed body of an unidentified woman was found in the Bhadra Channel near the Chaudamma Temple between Amaravati Camp and Navile Basapura in Shivamogga taluk.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →