hiriyur bus accident | ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಬಸ್ ಗೆ ಹೊತ್ತಿದ ಬೆಂಕಿ : ಹಲವು ಪ್ರಯಾಣಿಕರು ಸಜೀವ ದಹನ!

Bus catches fire near Hiriyur in Chitradurga district: 9 passengers burnt alive! ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಬಸ್ ಗೆ ಹೊತ್ತಿದ ಬೆಂಕಿ : ಹಲವು ಪ್ರಯಾಣಿಕರು ಸಜೀವ ದಹನ!

ಚಿತ್ರದುರ್ಗ (chitradurga), ಡಿಸೆಂಬರ್ 25: ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಕಂಟೇನರ್ ಲಾರಿ ಡಿಕ್ಕಿ ಹೊಡೆದಿದ್ದರಿಂದ, ಖಾಸಗಿ ಬಸ್ ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 9 ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನಗೊಂಡ ಭೀಕರ ಘಟನೆ ನಡೆದಿದೆ.

ಡಿಸೆಂಬರ್ 25 ರ ಮುಂಜಾನೆ ಸರಿಸುಮಾರು 2 ಗಂಟೆ ವೇಳೆ ಹಿರಿಯೂರಿನ ಜಾವಗುಂಡನ ಎಂಬ ಸ್ಥಳದ ಬಳಿ ದುರ್ಘಟನೆ ಸಂಭವಿಸಿದೆ.

ಬಸ್ ನಲ್ಲಿ ಸುಮಾರು 32 ಪ್ರಯಾಣಿಕರಿದ್ದರು. 12 ಪ್ರಯಾಣಿಕರನ್ನು ಹಿರಿಯೂರು ಆಸ್ಪತ್ರೆಗೆ, 9 ಜನರನ್ನು ತುಮಕೂರು ಶಿರಾ ಆಸ್ಪತ್ರೆ ಹಾಗೂ ಓರ್ವನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

https://www.instagram.com/reel/DSrB6UjgAvy/?utm_source=ig_web_copy_link&igsh=MzRlODBiNWFlZA==

ಕಂಟೈನರ್ ಲಾರಿ ಚಾಲಕ ಕೂಡ ಅವಘಡದಲ್ಲಿ ಮೃತಪಟ್ಟಿದ್ದಾನೆ. ಆಸ್ಪತ್ರೆಗೆ ದಾಖಲಾಗಿರುವ ಬಸ್ ಪ್ರಯಾಣಿಕರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಉಳಿದಂತೆ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಸಂಖ್ಯೆ, ಸಾವು – ನೋವಿಗೆ ತುತ್ತಾದವರ ಅದಿಕೃತ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

KA 01 AE 5217 ನೊಂದಣಿಯ ಖಾಸಗಿ ಸೀಬರ್ಡ್ ಕಂಪನಿ ಬಸ್, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿತ್ತು. ಹಿರಿಯೂರು ಪಟ್ಟಣದ ಬಳಿ ಕಂಟೇನರ್ ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು, ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ. ತದನತರ ಎದುರಿಗೆ ಬರುತ್ತಿದ್ದ ಖಾಸಗಿ ಬಸ್ ನ ಡಿಸೇಲ್ ಟ್ಯಾಂಕ್ ಗೆ ಗುದ್ದಿದೆ. ಇದರಿಂದ ಕ್ಷಣಮಾತ್ರದಲ್ಲಿಯೇ ಖಾಸಗಿ ಬಸ್ ಹಾಗೂ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಮುಂಜಾನೆಯ ನಿದ್ರೆಯ ಮಂಪರಿನಲ್ಲಿದ್ದ ಪ್ರಯಾಣಿಕರು ಏನಾಗುತ್ತಿದ್ದೆ ಎಂದು ನೋಡುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಆವರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

A horrific tragedy has occurred in Hiriyur, Chitradurga district. A private bus caught fire after being hit by a container lorry, resulting in the death of 9 passengers. The accident occurred near a place called Javagundana in Hiriyur at around 2 am on December 25. The bus was travelling from Bengaluru to Gokarna via Shimoga.

https://www.facebook.com/share/v/1MXMQSAWis

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: www.udayasaakshi.@gmail.com Mobile : 9242987506

View all posts by B. Renukesha →