
chitradurga | ಚಿತ್ರದುರ್ಗ : BJP ಜಿಲ್ಲಾಧ್ಯಕ್ಷ – PSI ಡಿಶುಂ ಡಿಶುಂ ವಿಡಿಯೋ ವೈರಲ್..!
ಚಿತ್ರದುರ್ಗ (chitradurga), ಮಾ. 16: ಚಿತ್ರದುರ್ಗ ನಗರದಲ್ಲಿ ತುಮಕೂರು ಜಿಲ್ಲೆ ಮಧುಗಿರಿಯ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಹಾಗೂ ಚಿತ್ರದುರ್ಗ ನಗರ ಠಾಣೆ ಸಬ್ ಇನ್ಸ್’ಪೆಕ್ಟರ್ (ಪಿಎಸ್ಐ) ಗಾದಿಲಿಂಗಪ್ಪ ನಡುವಿನ ಮಾರಾಮಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ!
ಈ ನಡುವೆ ಚಿತ್ರದುರ್ಗ ನಗರ ಠಾಣೆಯಲ್ಲಿ ಹನುಮಂತೇಗೌಡ ವಿರುದ್ದ ಎಫ್ಐಆರ್ ದಾಖಲಾಗಿದೆ. ಮತ್ತೊಂದೆಡೆ, ಸಬ್ ಇನ್ಸ್’ಪೆಕ್ಟರ್ ವಿರುದ್ದವೂ ಎಫ್ಐಆರ್ ದಾಖಲಿಸುವಂತೆ ಬಿಜೆಪಿ ಪಕ್ಷ ಆಗ್ರಹಿಸಿದೆ. ಈ ಸಂಬಂಧ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಏನೀದು ಪ್ರಕರಣ? : ಕಳೆದ ಮಾರ್ಚ್ 14 ರ ಶುಕ್ರವಾರ ರಾತ್ರಿ ಚಿತ್ರದುರ್ಗ ನಗರದ ಐಶ್ವರ್ಯ ಪೋರ್ಟ್ ಹೋಟೆಲ್ ಬಳಿ ಹನುಮಂತೇಗೌಡ ಅವರು ಊಟ ಮಾಡಿ ನಿಂತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಪಿಎಸ್ಐ ಗಾದಿಲಿಂಗಪ್ಪ ಅಲ್ಲಿಗೆ ಆಗಮಿಸಿದ್ದಾರೆ.
ರಾತ್ರಿಯಾಗಿರುವ ಕಾರಣದಿಂದ ಸ್ಥಳದಿಂದ ತೆರಳುವಂತೆ ಹನುಮಂತೇಗೌಡರಿಗೆ ಪಿಎಸ್ಐ ಸೂಚಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ತಿರುಗಿ ಪಿಎಸ್ಐ ಹನುಮಂತೇಗೌಡರ ಕಪಾಳಕ್ಕೆ ಹೊಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಹನುಮಂತೇಗೌಡ ಕೂಡ ಪಿಎಸ್ಐ ಮೇಲೆ ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ.
ಹನುಮಂತೇಗೌಡರನ್ನು ನಗರ ಠಾಣೆಗೆ ಕರೆತರಲಾಗಿದೆ. ತದನಂತರ ಪಿಎಸ್ಐ ಗಾದಿ ಲಿಂಗಪ್ಪ ಹಾಗೂ ಹನುಮಂತೇಗೌಡ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಿಎಸ್ಐ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಹನುಮಂತೇಗೌಡ ವಿರುದ್ದ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಹನುಮಂತೇಗೌಡ ಕೂಡ ಪಿಎಸ್ಐ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿಲ್ಲ. ಇದಕ್ಕೆ ಬಿಜೆಪಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ. ತಕ್ಷಣವೇ ಪಿಎಸ್ಐ ವಿರುದ್ದ ಎಫ್ಐಆರ್ ದಾಖಲಿಸಿ, ಅಮಾನತ್ತುಗೊಳಿಸಬೇಕು. ಪ್ರಕರಣದ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದೆ.
ವೈರಲ್ : ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಪಿಎಸ್ಐ ಮಾರಾಮಾರಿಯನ್ನು ಸ್ಥಳದಲ್ಲಿದ್ದವರೊಬ್ಬರು ಮೊಬೈಲ್ ಪೋನ್ ನಲ್ಲಿ ಸೆರೆ ಹಿಡಿದಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Chitradurga, Mar 16: A video of a fight between BJP district president of Madhugiri, Tumkur district, Hanumantegowda and Chitradurga city police station sub-inspector (PSI) Gadilingappa in Chitradurga city has gone viral on social media!
Meanwhile, an FIR has been registered against Hanumantegowda at Chitradurga Nagar police station. On the other hand, the BJP party has demanded that an FIR be registered against the sub-inspector as well. It has decided to hold a protest in this regard.