hiriyur bus accident | ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಬಸ್ ಗೆ ಹೊತ್ತಿದ ಬೆಂಕಿ : ಹಲವು ಪ್ರಯಾಣಿಕರು ಸಜೀವ ದಹನ!
ಬೆಂಗಳೂರಿನಿಂದ ಶಿವಮೊಗ್ಗ ಮೂಲಕ ಗೋಕರ್ಣಕ್ಕೆ ತೆರಳಬೇಕಾಗಿದ್ದ ಬಸ್
ಚಿತ್ರದುರ್ಗ (chitradurga), ಡಿಸೆಂಬರ್ 25: ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಕಂಟೇನರ್ ಲಾರಿ ಡಿಕ್ಕಿ ಹೊಡೆದಿದ್ದರಿಂದ, ಖಾಸಗಿ ಬಸ್ ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 9 ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನಗೊಂಡ ಭೀಕರ ಘಟನೆ ನಡೆದಿದೆ.
ಡಿಸೆಂಬರ್ 25 ರ ಮುಂಜಾನೆ ಸರಿಸುಮಾರು 2 ಗಂಟೆ ವೇಳೆ ಹಿರಿಯೂರಿನ ಜಾವಗುಂಡನ ಎಂಬ ಸ್ಥಳದ ಬಳಿ ದುರ್ಘಟನೆ ಸಂಭವಿಸಿದೆ.
ಬಸ್ ನಲ್ಲಿ ಸುಮಾರು 32 ಪ್ರಯಾಣಿಕರಿದ್ದರು. 12 ಪ್ರಯಾಣಿಕರನ್ನು ಹಿರಿಯೂರು ಆಸ್ಪತ್ರೆಗೆ, 9 ಜನರನ್ನು ತುಮಕೂರು ಶಿರಾ ಆಸ್ಪತ್ರೆ ಹಾಗೂ ಓರ್ವನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಂಟೈನರ್ ಲಾರಿ ಚಾಲಕ ಕೂಡ ಅವಘಡದಲ್ಲಿ ಮೃತಪಟ್ಟಿದ್ದಾನೆ. ಆಸ್ಪತ್ರೆಗೆ ದಾಖಲಾಗಿರುವ ಬಸ್ ಪ್ರಯಾಣಿಕರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಉಳಿದಂತೆ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಸಂಖ್ಯೆ, ಸಾವು – ನೋವಿಗೆ ತುತ್ತಾದವರ ಅದಿಕೃತ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.
ಅಪಘಾತ ಸಂಭವಿಸಿದ್ದು ಹೇಗೆ?
KA 01 AE 5217 ನೊಂದಣಿಯ ಖಾಸಗಿ ಸೀಬರ್ಡ್ ಕಂಪನಿ ಬಸ್, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿತ್ತು. ಹಿರಿಯೂರು ಪಟ್ಟಣದ ಬಳಿ ಕಂಟೇನರ್ ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು, ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ತದನತರ ಎದುರಿಗೆ ಬರುತ್ತಿದ್ದ ಖಾಸಗಿ ಬಸ್ ನ ಡಿಸೇಲ್ ಟ್ಯಾಂಕ್ ಗೆ ಗುದ್ದಿದೆ. ಇದರಿಂದ ಕ್ಷಣಮಾತ್ರದಲ್ಲಿಯೇ ಖಾಸಗಿ ಬಸ್ ಹಾಗೂ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಮುಂಜಾನೆಯ ನಿದ್ರೆಯ ಮಂಪರಿನಲ್ಲಿದ್ದ ಪ್ರಯಾಣಿಕರು ಏನಾಗುತ್ತಿದ್ದೆ ಎಂದು ನೋಡುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಆವರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
A horrific tragedy has occurred in Hiriyur, Chitradurga district. A private bus caught fire after being hit by a container lorry, resulting in the death of 9 passengers. The accident occurred near a place called Javagundana in Hiriyur at around 2 am on December 25. The bus was travelling from Bengaluru to Gokarna via Shimoga.
