hiriyur bus accident | shimoga | ಹಿರಿಯೂರು ಬಸ್ ದುರಂತ : ಶಿವಮೊಗ್ಗದ ಇಬ್ಬರು ಪ್ರಯಾಣಿಕರ ಬಗ್ಗೆ ಸಿಗದ ಸುಳಿವು!
ಶಿವಮೊಗ್ಗ (shivamogga), ಡಿಸೆಂಬರ್ 25: ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಡಿಸೆಂಬರ್ 25 ರ ಮುಂಜಾನೆ ಕಂಟೇನರ್ ಲಾರಿ ಹಾಗೂ ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ, ಬಸ್ ಗೆ ಬೆಂಕಿ ಹೊತ್ತಿಕೊಂಡು ಅದರಲ್ಲಿದ್ದ ಹಲವು ಪ್ರಯಾಣಿಕರು ಸಜೀವ ದಹನಗೊಂಡಿದ್ದರು.
ಈ ನಡುವೆ ಅಪಘಾತಕ್ಕೀಡಾದ ಸದರಿ ಸೀಬರ್ಡ್ ಬಸ್ ನಲ್ಲಿ, ಶಿವಮೊಗ್ಗದ ಓರ್ವ ಪುರುಷ ಹಾಗೂ ಮಹಿಳೆ ಪ್ರಯಾಣಿಸುತ್ತಿದ್ದ ಮಾಹಿತಿ ಹೊರಬರಲಾರಂಭಿಸಿದೆ. ಆದರೆ ಈ ಇಬ್ಬರು ಪ್ರಯಾಣಿಕರ ಸ್ಪಷ್ಟ ಸುಳಿವು ಲಭ್ಯವಾಗಿಲ್ಲ. ಜೊತೆಗೆ ಸದರಿ ಪ್ರಯಾಣಿಕರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಯಶವಂತಪುರದಿಂದ ಪ್ರಯಾಣ : ಸೀಬರ್ಡ್ ಬಸ್ ಬೆಂಗಳೂರಿನಿಂದ ಶಿವಮೊಗ್ಗ, ಸಾಗರ, ಹೊನ್ನಾವರ, ಗೋಕರ್ಣಕ್ಕೆ ಸಂಚರಿಸುತ್ತಿತ್ತು. ಸದರಿ ಬಸ್ ನಲ್ಲಿ ಬೆಂಗಳೂರಿನ ಯಶವಂತಪುರದಿಂದ, ಶಿವಮೊಗ್ಗದ ಮಸ್ರತುನ್ನಿಸಾ ಎಸ್ ಮತ್ತು ಸೈಯದ್ ಜಮೀರ್ ಗೌಸ್ ಎಂಬುವರು ಪ್ರಯಾಣಿಸಿದ್ದರು ಎಂಬ ವಿಷಯ ಸಂಸ್ಥೆಯ ಟಿಕೆಟ್ ನ ವಿವರದಿಂದ ಲಭ್ಯವಾಗಿದೆ.
ಆದರೆ ಇವರಿಬ್ಬರ ಕುರಿತಂತೆ ಯಾವುದೇ ಅದಿಕೃತ ವಿವರಗಳು ಲಭ್ಯವಾಗಿಲ್ಲ. ಈ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯ ಪೊಲೀಸರು ಮಾಹಿತಿ ಕಲೆ ಹಾಕುವ ಕಾರ್ಯ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಇನ್ನಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.
Shivamogga, December 25: In a horrific accident that occurred between a container lorry and a private bus in Hiriyur, Chitradurga district on the early morning of December 25, the bus caught fire and around 9 passengers were burnt alive. Information has started to emerge that a man and a woman from Shimoga were travelling in the Seabird bus that met with the accident. However, no clear clue has been found about these two passengers. The passengers’ mobile phones are switched off.
