ಶಿವಮೊಗ್ಗ (shivamogga), ಡಿಸೆಂಬರ್ 27: ಅಡಕೆ ತೋಟದಲ್ಲಿ ಅಡಕೆ ಗೊನೆ ಕತ್ತರಿಸುವ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ ಪರಿಣಾಮ ಓರ್ವರು ಮೃತಪಟ್ಟು, ಮತ್ತೋರ್ವರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ತ್ರಿಣಿವೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಂಡ್ರಳ್ಳಿ ಎಂಬಲ್ಲಿ ಡಿಸೆಂಬರ್ 26 ರಂದು ನಡೆದಿದೆ.
ಪುಟ್ಟಸ್ವಾಮಿ (48) ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ. ವಿದ್ಯುತ್ ಶಾಕ್ ನಿಂದ ಗಂಭೀರವಾಗಿ ಗಾಯಗೊಂಡಿರುವ ಮತ್ತೋರ್ವ ಕಾರ್ಮಿಕನನ್ನು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪ ಎಂಬುವರ ತೋಟದಲ್ಲಿ ಘಟನೆ ನಡೆದಿದೆ. ಕಾರ್ಮಿಕರು ಅಡಕೆ ಕೊಯ್ಯುವ ವೇಳೆ, ಅವರು ಬಳಸುತ್ತಿದ್ದ ದೋಟಿಯು ಸಮೀಪದಲ್ಲಿಯೇ ಹಾದು ಹೋಗಿದ್ದ ವಿದ್ಯುತ್ ಲೈನ್ ಗೆ ತಾಗಿದೆ. ಈ ವೇಳೆ ವಿದ್ಯುತ್ ಪ್ರವಹಿಸಿ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಹೊಸನಗರ ಪಟ್ಟಣದ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಭೇಟಿ ನೀಡಿದರು. ಮೃತ ಕಾರ್ಮಿಕನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
An incident occurred on December 27 in Mandralli under the Trinive Gram Panchayat of Hosanagara taluk, where two workers working in a supari plantation were accidentally electrocuted, killing one and seriously injuring the other.


One Comment on “hosanagara news | ಶಿವಮೊಗ್ಗ | ಹೊಸನಗರ | ವಿದ್ಯುತ್ ಶಾಕ್ ನಿಂದ ಅಡಕೆ ತೋಟದಲ್ಲಿ ಕಾರ್ಮಿಕ ಸಾವು : ಮತ್ತೋರ್ವರಿಗೆ ಗಂಭೀರ ಗಾಯ!”
Comments are closed.