railway news | ಪ್ರಮುಖ ರೈಲುಗಳ ಸಂಚಾರ ನಿಯಂತ್ರಣ : ಯಾವಾಗ? ಕಾರಣವೇನು?

Stoppage at Arasalu and Kumsi Extended for Six Months ಶಿವಮೊಗ್ಗ : ಅರಸಾಳು - ಕುಂಸಿ ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆ ಅವಧಿ ಆರು ತಿಂಗಳು ವಿಸ್ತರಣೆ!

ಶಿವಮೊಗ್ಗ (shivamogga), ಡಿಸೆಂಬರ್ 27: ಅರಸೀಕೆರೆ, ಬೀರೂರು, ಚಿಕ್ಕಜಾಜೂರು ಹಾಗೂ ಹರಿಹರ ಯಾರ್ಡ್‌ಗಳಲ್ಲಿ ನಿರ್ವಹಣಾ ಕಾಮಗಾರಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಗರ್ಡರ್‌ಗಳ ಅಳವಡಿಕೆ ಮತ್ತು ತೆರವು ಕಾರ್ಯಕ್ಕಾಗಿ ಲೈನ್ ಬ್ಲಾಕ್ ಹಾಗೂ ವಿದ್ಯುತ್ ಬ್ಲಾಕ್ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಕೆಳಕಂಡ ರೈಲುಗಳನ್ನು ನಿಯಂತ್ರಿಣ/ ಮರುನಿಗದಿಗೊಳ್ಳಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ವಿವರ : ರೈಲು ಸಂಖ್ಯೆ 07395 ಬಳ್ಳಾರಿ ಜಂಕ್ಷನ್ – ದಾವಣಗೆರೆ ಡೆಮು 29.12.2025 ರಿಂದ 01.01.2026 ಹಾಗೂ 03.01.2026 ರಂದು ಪ್ರಯಾಣ ಆರಂಭಿಸುವ ಈ ರೈಲು ಮಾರ್ಗ ಮಧ್ಯೆ 30 ನಿಮಿಷ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್ – ತುಮಕೂರು ಎಕ್ಸ್‌ಪ್ರೆಸ್ 29.12.2025 ರಿಂದ 01.01.2026 ಹಾಗೂ 03.01.2026 ರಿಂದ 07.01.2026 ರವರೆಗೆ ಪ್ರಯಾಣ ಆರಂಭಿಸುವ ಈ ರೈಲು ಮಾರ್ಗ ಮಧ್ಯೆ 90 ನಿಮಿಷ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ 29.12.2025 ರಿಂದ 01.01.2026 ಹಾಗೂ 03.01.2026 ರಿಂದ 07.01.2026 ರವರೆಗೆ ಪ್ರಯಾಣ ಆರಂಭಿಸುವ ಈ ರೈಲು ಮಾರ್ಗ ಮಧ್ಯೆ 30 ನಿಮಿಷ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ 56272 ಚಿಕ್ಕಮಗಳೂರು – ಶಿವಮೊಗ್ಗ ಟೌನ್ ಪ್ಯಾಸೆಂಜರ್ 20.01.2026 ರಿಂದ 22.01.2026 ಹಾಗೂ 24.01.2026 ರಿಂದ 26.01.2026 ರವರೆಗೆ ಪ್ರಯಾಣ ಆರಂಭಿಸುವ ಈ ರೈಲು ಚಿಕ್ಕಮಗಳೂರಿನಿಂದ 30 ನಿಮಿಷ ತಡವಾಗಿ ಹೊರಡಲಿದೆ.

South Western Railway has informed that the following trains will be restricted/rescheduled due to maintenance work being undertaken at ArasiKere, Birur, Chikkajajur and Harihar yards.

Details: Train No. 07395 Bellary Junction – Davangere DEMU will operate from 29.12.2025 to 01.01.2026 and will be restricted for 30 minutes between this route. Train No. 16568 Shivamogga Town – Tumkur Express will operate from 29.12.2025 to 01.01.2026 and from 03.01.2026 to 07.01.2026. This train route will be restricted for 90 minutes. Train No. 12090 Shivamogga Town – KSR Bengaluru Jan Shatabdi Express will operate from 29.12.2025 to 01.01.2026 and from 03.01.2026 to 07.01.2026. This train route will be restricted for 30 minutes. Train No. 56272 Chikkamagaluru – Shivamogga Town Passenger will start its journey from 20.01.2026 to 22.01.2026 and from 24.01.2026 to 26.01.2026. This train will depart from Chikkamagaluru 30 minutes late.

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: www.udayasaakshi.@gmail.com Mobile : 9242987506

View all posts by B. Renukesha →