Shivamogga: Biker dies on the spot after being hit by a lorry! ಶಿವಮೊಗ್ಗ : ಲಾರಿಗೆ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವು!

shimoga accident news | ಶಿವಮೊಗ್ಗ : ಲಾರಿಗೆ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವು!

ಶಿವಮೊಗ್ಗ (shivamogga), ಡಿಸೆಂಬರ್ 28: ಬೈಕ್ ಸವಾರನ ಮೇಲೆ ಲಾರಿ ಚಕ್ರ ಹರಿದು ಹೋದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶಿವಮೊಗ್ಗ ನಗರದ ವಾಲ್ಮೀಕಿ ಸರ್ಕಲ್ ನ ವಿದ್ಯಾನಗರ ಫ್ಲೈ ಓವರ್ ಸಮೀಪ ಡಿಸೆಂಬರ್ 28 ರ ಬೆಳಿಗ್ಗೆ ನಡೆದಿದೆ.

ಚನ್ನಗಿರಿ ತಾಲೂಕಿನ ರಾಘವೇಂದ್ರ ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಲಾರಿ ಹಾಗೂ ಬೈಕ್ ಫ್ಲೈ ಓವರ್ ಮೇಲ್ಭಾಗದಿಂದ ಆಗಮಿಸಿವೆ.

ಲಾರಿ ತಿರುವು ತೆಗೆದುಕೊಳ್ಳುವ ವೇಳೆ, ಲಾರಿಯ ಹಿಂಬದಿ ಚಕ್ರಕ್ಕೆ ಬೈಕ್ ಸವಾರ ಸಿಲುಕಿ ಕೆಳಕ್ಕೆ ಬಿದ್ದಿದ್ದಾನೆ. ಈತನ ಮೇಲೆಯೇ ಲಾರಿಯ ಚಕ್ರ ಹರಿದು ಹೋಗಿದೆ ಎಂದು ಹೇಳಲಾಗಿದೆ.

ಘಟನೆಯಿಂದ ಸ್ಥಳದಲ್ಲಿ ಕೆಲ ಸಮಯ ಸಂಚಾರ ಅಸ್ತವ್ಯಸ್ತವಾಗಿತ್ತು. ಘಟನಾ ಸ್ಥಳಕ್ಕೆ ಪೂರ್ವ ಸಂಚಾರಿ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.

https://www.instagram.com/reel/DSzMC13D-9K/?utm_source=ig_web_copy_link&igsh=MzRlODBiNWFlZA==

Shivamogga, December 28: An incident occurred near the Vidyanagar flyover in Valmiki Circle, Shivamogga city, where a biker died on the spot after a lorry wheel ran over him.

shimoga APMC vegetable prices | Details of vegetable prices for December 28 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 28 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 28 ರ ತರಕಾರಿ ಬೆಲೆಗಳ ವಿವರ