Residents of the barangay request for action to be taken for inclusion in the Shivamogga Municipal Corporation jurisdiction ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಸೇರ್ಪಡೆಗೆ ಕ್ರಮಕೈಗೊಳ್ಳುವಂತೆ ಬಡಾವಣೆ ನಿವಾಸಿಗಳ ಮನವಿ

shimoga news | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಸೇರ್ಪಡೆಗೆ ಕ್ರಮಕೈಗೊಳ್ಳುವಂತೆ ಬಡಾವಣೆ ನಿವಾಸಿಗಳ ಮನವಿ

ಶಿವಮೊಗ್ಗ (shivamogga), ಜನವರಿ 02: ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತಿರುವ ಬಸವನಗಂಗೂರು ಗ್ರಾಮ ವ್ಯಾಪ್ತಿಯಲ್ಲಿರುವ ವಸತಿ ಬಡಾವಣೆಗಳನ್ನು, ಮಹಾನಗರ ಪಾಲಿಕೆ ವ್ಯಾಪ್ತಿ ಸೇರ್ಪಡೆಗೆ ನಿರ್ಣಯ ಅಂಗೀಕರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ವಿವಿಧ ಬಡಾವಣೆ ನಿವಾಸಿಗಳು ಅಬ್ಬಲಗೆರೆ ಗ್ರಾಮ ಪಂಚಾಯ್ತಿಗೆ ಆಗ್ರಹಿಸಿದ್ದಾರೆ.

ಈ ಸಂಬಂಧ ಡಿಸೆಂಬರ್ 2 ರಂದು ಗ್ರಾಪಂ ಪಿಡಿಓ ರಾಜಪ್ಪ ಅವರಿಗೆ ಕೆಹೆಚ್’ಬಿ ಪ್ರೆಸ್ ಕಾಲೋನಿ, ಶ್ರೀ ಬಡಾವಣೆ, ಮಹಾಲಕ್ಷ್ಮಿ ಲೇಔಟ್, ಓಂ ಶಕ್ತಿ ಲೇಔಟ್ (ಬ್ರೈಟ್ ಸಿಟಿ), ಶೋಭಾ ಬಡಾವಣೆ ನಿವಾಸಿಗಳು ಮವಿ ಪತ್ರ ಅರ್ಪಿಸಿದ್ದಾರೆ.

ಸದರಿ ಬಡಾವಣೆಗಳು ಹಾಲಿ ಪಾಲಿಕೆ ಪ್ರದೇಶ ವ್ಯಾಪ್ತಿಗೆ ಸಮೀಪದಲ್ಲಿವೆ. ನಗರಕ್ಕೆ ಹೊಂದಿಕೊಂಡಂತಿವೆ. ನಿವಾಸಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ, ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ನಿರ್ಣಯವನ್ನು ಗ್ರಾಪಂ ಸಭೆಯಲ್ಲಿ ಕೈಗೊಂಡು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಹಾಗೆಯೇ ಪ್ರೆಸ್ ಕಾಲೋನಿಗೆ ಹೊಂದಿಕೊಂಡಂತಿರುವ ಇತರೆ ಬಡಾವಣೆಗಳಿಗೂ ಜಲ ಮಂಡಳಿಯಿಂದ ಕುಡಿಯುವ ನೀರು ಪೂರೈಸಬೇಕು. ಚರಂಡಿ ಹಾಗೂ ಪಾರ್ಕ್ ಗಳ ಸ್ವಚ್ಛತೆಗೆ ಕ್ರಮಕೈಗೊಳ್ಳಬೇಕು. ನಾಗರೀಕರ ವಾಯು ವಿಹಾರಕ್ಕೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಪಾರ್ಕ್ ಗಳಿಗೆ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಬೇಕು.

ಪಾರ್ಕ್ ಗಳಿಗೆ ಶಿವಶರಣೆ ಅಕ್ಕಮಹಾದೇವಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಭೋಸ್ ಅವರ ಹೆಸರಿಡಬೇಕು. ಸಿಸಿ ಕ್ಯಾಮರಾ ಅಳವಡಿಸಬೇಕು. ಬೋರ್’ವೆಲ್ ನೀರು ಪೂರೈಕೆ, ಬಡಾವಣೆಗಳಿಗೆ ನಾಮಫಲಕ ಅಳವಡಿಕೆಗೆ ಕ್ರಮಕೈಗೊಳ್ಳಬೇಕು.

ಸ್ವಾಮಿ ವಿವೇಕಾನಂದ 60 ಅಡಿ ರಸ್ತೆ ಮುಖ್ಯರಸ್ತೆ ಗುಂಡಿಗೊಟರು ಮುಚ್ಚಲು ಕ್ರಮಕೈಗೊಳ್ಳಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ನಾಗರೀಕರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್, ಪ್ರಮುಖರಾದ ಗುರುಚರಣ್, ಅಭಿನಂದನ್, ಅಕ್ಷಯ್ ಕುಮಾರ್, ಕಾಂತರಾಜ್, ಕುಶಕುಮಾರ್, ಶ್ರೀಮತಿ ರಮಾ, ಅರುಣ್ ಸೇರಿದಂತೆ ಮೊದಲಾದವರಿದ್ದರು.

Shimoga, January 2 : They have urged the Abbalagere Gram Panchayat to pass a resolution to include the residential areas in Basavanagangur village, which is adjacent to Shivamogga city, under the jurisdiction of the Mahanagara Palike and submit it to the district administration.

Shivamogga: What are the instructions of new SP B Nikhil to police officers? ಶಿವಮೊಗ್ಗ : ಪೊಲೀಸ್ ಅಧಿಕಾರಿಗಳಿಗೆ ನೂತನ ಎಸ್ಪಿ ಬಿ ನಿಖಿಲ್ ಸೂಚನೆಯೇನು? Previous post shimoga news | ಶಿವಮೊಗ್ಗ : ಪೊಲೀಸ್ ಅಧಿಕಾರಿಗಳಿಗೆ ನೂತನ SP ಬಿ ನಿಖಿಲ್ ಸೂಚನೆಯೇನು?
Power outages in various parts of Shivamogga city on January 03 - 04! ಶಿವಮೊಗ್ಗ ನಗರದ ವಿವಿಧೆಡೆ ಜನವರಿ 03 - 04 ರಂದು ವಿದ್ಯುತ್ ವ್ಯತ್ಯಯ! Next post shimoga news | ಶಿವಮೊಗ್ಗ ನಗರದ ವಿವಿಧೆಡೆ ಜನವರಿ 03 – 04 ರಂದು ವಿದ್ಯುತ್ ವ್ಯತ್ಯಯ!