hosanagara accident news | ಹುಲಿಕಲ್ ಘಾಟ್ ಬಳಿ ಖಾಸಗಿ ಬಸ್ ಅಪಘಾತ : ಮಗು ಸಾವು – 10 ಪ್ರಯಾಣಿಕರಿಗೆ ಗಾಯ

Private bus accident near Hulikal Ghat: Child dies - 10 passengers injured ಹುಲಿಕಲ್ ಘಾಟ್ ಬಳಿ ಖಾಸಗಿ ಬಸ್ ಅಪಘಾತ : ಮಗು ಸಾವು – 10 ಪ್ರಯಾಣಿಕರಿಗೆ ಗಾಯ

ಹೊಸನಗರ (hosanagar), ಡಿಸೆಂಬರ್ 30: ಖಾಸಗಿ ಬಸ್ ವೊಂದು ರಸ್ತೆ ಬದಿಯ ಧರೆಗೆ ಡಿಕ್ಕಿಯಾದ ಪರಿಣಾಮ, ಮಗುವೊಂದು ಸ್ಥಳದಲ್ಲಿಯೇ ಮೃತಪಟ್ಟು 10 ಪ್ರಯಾಣಿಕರು ಗಾಯಗೊಂಡ ಘಟನೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಲಿಕಲ್ ಘಾಟಿ ಮಾರ್ಗದಲ್ಲಿ ನಡೆದಿದೆ.

ಡಿಸೆಂಬರ್ 30 ರ ಮುಂಜಾನೆ 2. 30 ರಿಂದ 3 ಗಂಟೆ ಅವಧಿಯಲ್ಲಿ ಸದರಿ ಅಪಘಾತ ಸಂಭವಿಸಿದೆ. ಬಂಟ್ವಾಳದ ಮುಸ್ತಾಫ ಎಂಬುವರ ಪುತ್ರಿ, ಒಂದೂವರೆ ವರ್ಷದ ರೀಶ್ನಾ ಫಾತಿಮಾ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ.

ದಾವಣಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ದುರ್ಗಾಂಬ ಸಂಸ್ಥೆಗೆ ಸೇರಿದ ಖಾಸಗಿ ಬಸ್ ಅಪಘಾತಕ್ಕೀಡಾದ ಬಸ್ ಆಗಿದೆ. ಘಟನೆಯಲ್ಲಿ ಮೂವರು ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳಿದ ಪ್ರಯಾಣಿಕರು ಸ್ಥಳೀಯ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಕ್ಕಿಯ ತೀವ್ರತೆಗೆ ಬಸ್ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಬಸ್ ಚಾಲಕನ ಅಜಾಗರೂಕ ಚಾಲನೆಯೇ ಅವಘಡಕ್ಕೆ ಕಾರಣವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಸಬ್ ಇನ್ಸ್’ಪೆಕ್ಟರ್ ಶಿವಾನಂದ ಕೋಳಿ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಕುರಿತಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hosanagar, December 30: A child died on the spot and 10 passengers were injured when a private bus hit a roadside embankment on the Hulikal Ghati route in Hosanagar taluk of Shivamogga district.

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: www.udayasaakshi.@gmail.com Mobile : 9242987506

View all posts by B. Renukesha →

One Comment on “hosanagara accident news | ಹುಲಿಕಲ್ ಘಾಟ್ ಬಳಿ ಖಾಸಗಿ ಬಸ್ ಅಪಘಾತ : ಮಗು ಸಾವು – 10 ಪ್ರಯಾಣಿಕರಿಗೆ ಗಾಯ”

Comments are closed.