ಹೊಸನಗರ (hosanagar), ಜನವರಿ 10: ಮೋರಿ ಕಾಮಗಾರಿಗೆಂದು ರಸ್ತೆಯಲ್ಲಿ ತೆಗೆಯಲಾಗಿದ್ದ ಗುಂಡಿಗೆ ಬಿದ್ದು ಬೈಕ್ ಸವಾರನೋರ್ವ ಮೃ*ತ*ಪಟ್ಟ ಘಟನೆ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನಕಟ್ಟೆ ಸಮೀಪ ತಡರಾತ್ರಿ ನಡೆದಿದೆ.
ಮಾವಿನಕಟ್ಟೆ ಗ್ರಾಮದ ನಿವಾಸಿ ಚೇತನ್ ಮೊಗವೀರ್ (26) ಮೃ*ತ*ಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಉಡುಪಿಯ ಬಟ್ಟೆ ಅಂಗಡಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಇವರು ಹೊಸನಗರದಿಂದ ಬೈಕ್ ನಲ್ಲಿ ತಮ್ಮ ಊರಿಗೆ ಹಿಂದಿರುಗವ ವೇಳೆ, ರಸ್ತೆಯಲ್ಲಿ ಮೋರಿ ಕಾಮಗಾರಿಗೆಂದು ತೆಗೆಯಲಾದ ಗುಂಡಿಯಲ್ಲಿ ಆಯತಪ್ಪಿ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಅ**ಸುನೀಗಿದ್ದಾರೆ.
ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Shivamogga, January 10: A biker died after falling into a pothole dug on the road for kennel work. The incident took place late last night near Mavinakatte in Hosanagar taluk of Shivamogga district.

