ಸಾಗರ (sagar), ಜನವರಿ 11: ಶರಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ ಪಶುವೈದ್ಯಾಧಿಕಾರಿಯೋರ್ವರು, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃ**ತಪಟ್ಟ ದಾರುಣ ಘಟನೆ, ಸಾಗರ ತಾಲೂಕಿನ ಹಕ್ರೆಯ ಬಾಳೇಗೆರೆ ಗ್ರಾಮದ ಸಮೀಪ ಜನವರಿ 11 ರಂದು ನಡೆದಿದೆ.
ಡಾ. ಸುನೀಲ್ (38) ಮೃತಪಟ್ಟ ಪಶುವೈದ್ಯಾಧಿಕಾರಿ ಎಂದು ಗುರುತಿಸಲಾಗಿದೆ. ಇವರು ಮಾಸೂರಿನಲ್ಲಿ ಹಿರಿಯ ಪಶು ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.
ಭಾನುವಾರ ಕರ್ತವ್ಯಕ್ಕೆ ರಜೆಯಿದ್ದ ಕಾರಣದಿಂದ, ಮಧ್ಯಾಹ್ನ ಕುಟುಂಬ ಸದಸ್ಯರೊಂದಿಗೆ ಶರಾವತಿ ಹಿನ್ನೀರು ಬಳಿ ಡಾ. ಸುನೀಲ್ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಶರಾವತಿ ಹಿನ್ನೀರಿನಲ್ಲಿ ಈಜಾಡಲು ತೆರಳಿದ್ದರು.
ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳವು ಹಲವು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿ, ನೀರಿನಿಂದ ಮೃ**ತದೇಹ ಹೊರತೆಗೆದಿದೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿ ವಿನಾಯಕ ಹೆಗ್ಗೆನಾಯಕ, ಲೀಡಿಂಗ್ ಫೈರ್‘ಮ್ಯಾನ್ ಗಳಾದ ರಾಜೇಂದ್ರ ಡಿ ಬಿ, ಗಣೇಶ್ ಆರ್ ಶೇಟ್, ಸಿಬ್ಬಂದಿಗಳಾದ ವಿಶ್ವನಾಥ ರೆಡ್ಡಿ, ಶಿವಕುಮಾರ್ ಡಿ, ಸತೀಶ್ ಕುಮಾರ್, ಜಯಂತ್ ರವರು ಭಾಗಿಯಾಗಿದ್ದರು. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Sagara: Veterinarian Drowns While Swimming! Sagara, January 11: A tragic incident occurred near Hakre village in Sagara taluk on January 11, when a veterinarian who had gone swimming in the backwaters of the Sharavathi accidentally drowned.

