sagara news | ಸಾಗರ : ಹೋಟೆಲ್ ಮಾಲೀಕನಿಂದಲೇ ಬಿಹಾರ ಮೂಲದ ಕಾರ್ಮಿಕನ ಕೊಲೆ!

Sagara : Hotel Owner Murders Worker from Bihar!ಸಾಗರ : ಹೋಟೆಲ್ ಮಾಲೀಕನಿಂದಲೇ ಬಿಹಾರ ಮೂಲದ ಕಾರ್ಮಿಕನ ಕೊಲೆ!

ಸಾಗರ (sagara), ಏಪ್ರಿಲ್ 02: ಸಾಗರ ನಗರದ ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಟಾಫ್ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕನೋರ್ವನನ್ನು, ಸ್ವತಃ ಕೆಫೆ ಮಾಲೀಕನ ಕೊಲೆ ಮಾಡಿರುವ ಘಟನೆ ಏಪ್ರಿಲ್ 02 ರಂದು ಬೆಳಿಗ್ಗೆ ನಡೆದಿದೆ.

ಬಿಹಾರ ರಾಜ್ಯದ ಪಾಟ್ನಾ ಸಮೀಪದ ನಿವಾಸಿ ಟಿಂಕು ಶರ್ಮಾ (30) ಕೊಲೆಗೀಡಾದ ಕಾರ್ಮಿಕ ಎಂದು ಗುರುತಿಸಲಾಗಿದೆ. ಈತ ಹೋಟೆಲ್ ನಲ್ಲಿ ಹೆಡ್ ಕುಕ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ. ಕೆಫೆ ಮಾಲೀಕ ಇಮ್ರಾನ್ (30) ಆರೋಪಿತ ವ್ಯಕ್ತಿಯಾಗಿದ್ದಾನೆ.

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ನಿನ್ನೆ ರಾತ್ರಿಯಿಂದಲೂ ಹೋಟೆಲ್ ನಲ್ಲಿ ಗಲಾಟೆಯಾಗುತ್ತಿತ್ತು. ಬೆಳಿಗ್ಗೆ ಕೂಡ ಇಬ್ಬರ ನಡುವೆ ಗಲಾಟೆಯಾಗಿದೆ. ಇದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗಿದೆ.

ಕಾರ್ಮಿಕನ ಶವವನ್ನು ಕಾರಿನಲ್ಲಿ ಕೊಂಡೊಯ್ಯುವ ವೇಳೆ ಹೋಟೆಲ್ ಮಾಲೀಕ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ ಅವರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.

Sagara : Hotel Owner Murders Worker from Bihar!

Sagara, April 02: A shocking incident took place on the morning of April 02 in Sagara city, on Shivamogga Road. A worker from Bihar, employed at a rooftop café, was murdered by the café owner himself.

The victim has been identified as Tinku Sharma (30), a resident near Patna, Bihar. He was working as the head cook at the hotel. The accused is the café owner, Imran (30).

According to reports, the two had been quarreling since last night over financial matters. The argument continued into the morning, escalated further, and ended in murder.

The hotel owner was caught by police while attempting to transport the worker’s body in a car. District Superintendent of Police, Nikhil B, visited the crime scene and conducted an inspection.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *