ಶಿವಮೊಗ್ಗ (shivamogga), ಜನವರಿ 23: ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಮತ್ತೆ ಕಾಡಾನೆಗಳು ಕಾಣಿಸಿಕೊಂಡಿವೆ. ಗ್ರಾಮದ ತೋಟ, ಗದ್ದೆಗಳಿಗೆ ದಾಳಿಯಿಟ್ಟು ಬೆಳೆ ನಾಶ ಪಡಿಸಿರುವ ವರದಿಗಳು ಬಂದಿವೆ.
ನಿನ್ನೆ ರಾತ್ರಿ ವೇಳೆ ಪುರದಾಳು ಗ್ರಾಮದ ವಸಂತ್ ಕುಮಾರ್, ಅನಂತಪ್ಪ, ವೀರಪ್ಪ ಮತ್ತು ಚಂದ್ರಮ್ಮ ಎಂಬುವರ ಅಡಕೆ ತೋಟಕ್ಕೆ ಕಾಡಾನೆಗಳು ನುಗ್ಗಿ ಸುಮಾರು 35 ಕ್ಕೂ ಹೆಚ್ಚು ಅಡಕೆ ಮರ ಹಾಗೂ ಬಾಳೆ ಗಿಡಗಳನ್ನು ಹಾಳುಗೆಡವಿ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಕಡಿಮೆಯಾಗಿದ್ದ ಆನೆಗಳ ಹಾವಳಿ ಮತ್ತೆ ಶುರುವಾಗಿದೆ. ತೋಟ, ಗದ್ದೆಗಳಲ್ಲಿನ ಬೆಳೆಗಳನ್ನು ಹಾಳುಗೆಡವುತ್ತಿವೆ. ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಅರಣ್ಯ ಇಲಾಖೆಗೆ ಅಗತ್ಯ ಕ್ರಮಕೈಗೊಳ್ಳುತ್ತಿಲ್ಲ ಎಂದು ರೈತರು ದೂರುತ್ತಾರೆ.
ಇನ್ನಾದರೂ ಕಾಡಾನೆಗಳು ತೋಟ, ಗದ್ದೆಗಳಿಗೆ ಪ್ರವೇಶಿಸದಂತೆ ಎಲ್ಲ ರೀತಿಯ ನಿಯಂತ್ರಣ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
Shivamogga: Wild elephants menace again in Puradalu village! | Shivamogga, January 23: Wild elephants have once again appeared in Puradalu village of Shivamogga taluk. Reports say they raided farms and plantations, destroying crops. Last night, elephants entered the areca nut plantations of Vasanth Kumar, Ananthappa, Veerappa, and Chandramma in Puradalu village, damaging more than 35 areca nut trees and banana plants. After a brief lull, elephant menace has started again, with crops in farms and plantations being destroyed. Farmers complain that the Forest Department is not taking necessary measures to control the problem. Farmers are demanding that the Forest Department implement all possible control measures to prevent elephants from entering their farms and plantations.

