shimoga news | ಶಿವಮೊಗ್ಗದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ : ತೀರ್ಥಹಳ್ಳಿ ರಸ್ತೆಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ

Shivaratri Fair Festival in Shivamogga: Traffic Diversion on Thirthahalli Road ಶಿವಮೊಗ್ಗಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ : ತೀರ್ಥಹಳ್ಳಿ ರಸ್ತೆಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ

ಶಿವಮೊಗ್ಗ (shivamogga), ಫೆಬ್ರವರಿ 13: ಶಿವಮೊಗ್ಗ ನಗರದ ಹರಕೆರೆ ಶ್ರೀ ರಾಮೇಶ್ವರ ಸ್ವಾಮಿ ಮತ್ತು ಸೂಳೆಬೈಲ್ ಬೆಟ್ಟದ ಮಲ್ಲೇಶ್ವರ ದೇವಸ್ಥಾನದಲ್ಲಿ, ಫೆಬ್ರವರಿ 15 ರಂದು ಶಿವರಾತ್ರಿ ಹಬ್ಬದ ಅಂಗವಾಗಿ ಜಾತ್ರಾ ಮಹೋತ್ಸವಗಳನ್ನು ಆಯೋಜಿಸಲಾಗಿದೆ.  

ಸದರಿ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸುವುದರಿಂದ, ಶಿವಮೊಗ್ಗ- ತೀರ್ಥಹಳ್ಳಿ ರಸ್ತೆಯಲ್ಲಿ ಫೆಬ್ರವರಿ 15 ರ ಬೆಳಿಗ್ಗೆ 4 ಗಂಟೆಯಿಂದ ಫೆ. 16 ರ ಮುಂಜಾನೆಯವರೆಗೆ, ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆಗೊಳಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.

ವಿವರ : ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ವಾಹನಗಳು ಗಜಾನನ ಗ್ಯಾರೇಜ್ ಪಕ್ಕದ ರಸ್ತೆಯಲ್ಲಿ ಹೋಗಿ ರಾಮಿನಕೊಪ್ಪ ಚಾನಲ್ ಮಾರ್ಗವಾಗಿ ಎನ್.ಹೆಚ್. ಆಸ್ಪತ್ರೆ ಪಕ್ಕದ ರಸ್ತೆಗೆ ಬಂದು ಸೇರುವುದು.

ಹಾಗೂ ತೀರ್ಥಹಳ್ಳಿಯಿಂದ ಬರುವ ಎಲ್ಲಾ ವಾಹನಗಳು ಎನ್.ಹೆಚ್.ರಸ್ತೆಯ ಪಕ್ಕದ ರಸ್ತೆಯ ಮೂಲಕ ರಾಮಿನ ಕೊಪ್ಪ ಚಾನಲ್ ಕ್ರಾಸ್ ನಿಂದ ಗಜಾನನ ಗ್ಯಾರೇಜ್ ಮೂಲಕ ಸಂಚರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

Shivaratri Fair Festival in Shivamogga: Traffic Diversion on Thirthahalli Road

Shivamogga, February 13: On the occasion of Shivaratri, fairs and festivals will be organized at Harakere Sri Rameshwara Swamy Temple and Soolibail Hill Malleshwara Temple in Shivamogga city on February 15.

Since thousands of devotees are expected to visit the temples during these events, the Deputy Commissioner Prabhuling Kavalikatti has issued an order to divert traffic on the Shivamogga–Thirthahalli Road from 4 AM on February 15 until the morning of February 16.

Details of diversion:

Vehicles traveling from Shivamogga to Thirthahalli must go via the road next to Gajanan Garage, then proceed through Raminakoppa Channel Road, and join the road near NH Hospital.

Vehicles coming from Thirthahalli to Shivamogga must travel via the road next to NH Road, cross Raminakoppa Channel, and proceed through Gajanan Garage.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →