shimoga news | ರಾಜ್ಯ ಬಜೆಟ್ : ಶಿವಮೊಗ್ಗ ಜಿಲ್ಲೆಯ ಬೇಡಿಕೆಗಳಿಗೆ ಸಿಗಲಿದೆಯೇ ಮನ್ನಣೆ?

State Budget: Will Shivamogga District’s Demands Get Approval? ರಾಜ್ಯ ಬಜೆಟ್ : ಶಿವಮೊಗ್ಗ ಜಿಲ್ಲೆಯ ಬೇಡಿಕೆಗಳಿಗೆ ಸಿಗಲಿದೆಯೇ ಮನ್ನಣೆ?

ಶಿವಮೊಗ್ಗ (shivamogga), ಫೆಬ್ರವರಿ 18: ಮುಂಬರುವ ಮಾರ್ಚ್ 6 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಪೂರ್ವಭಾವಿ ಸಿದ್ದತೆ ಆರಂಭಿಸಿದ್ದಾರೆ. ಇಲಾಖಾವಾರು ಸಚಿವರು – ಅಧಿಕಾರಿಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.  ಈ ನಡುವೆ ಪ್ರಸ್ತುತ ಬಜೆಟ್ ನಲ್ಲಾದರೂ ಶಿವಮೊಗ್ಗ ಜಿಲ್ಲೆಗೆ ಹೆಚ್ಚಿನ ಆದ್ಯತೆ ದೊರಕಲಿದೆಯಾ? ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯಲಾರಂಭಿಸಿದೆ.

ಈ ಹಿಂದಿನ ಬಜೆಟ್ ಗಳಲ್ಲಿ ಶಿವಮೊಗ್ಗ ಜಿಲ್ಲೆಗೆ ಸಾಕಷ್ಟು ಪ್ರಾತಿನಿಧ್ಯ ದೊರಕುತ್ತಿತ್ತು. ಆದರೆ ಇತ್ತೀಚಿಗೆ ಜಿಲ್ಲೆಗೆ ದೊರಕುತ್ತಿರುವ ಆದ್ಯತೆ ಕಡಿಮೆಯಾಗುತ್ತಿದೆ. ಇದರಿಂದ ಹಲವು ಪ್ರಮುಖ ಬೇಡಿಕೆಗಳು ನೆನೆಗುದಿಗೆ ಬೀಳುವಂತಾಗಿದೆ. ಪ್ರಮುಖ ಬೇಡಿಕೆಗಳ ವಿವರ ಈ ಮುಂದಿನಂತಿದೆ.

ಪೊಲೀಸ್ ಕಮೀಷನರೇಟ್ : ಶಿವಮೊಗ್ಗ – ಭದ್ರಾವತಿ ನಗರಗಳನ್ನೊಳಗೊಂಡಂತೆ ಪೊಲೀಸ್ ಕಮೀಷನರೇಟ್ ಕಚೇರಿ ಸ್ಥಾಪಿಸಬೇಕೆಂಬುವುದು ಹಲವು ವರ್ಷಗಳ ಬೇಡಿಕೆಯಾಗಿದೆ. ಆದರೆ ಇಲ್ಲಿಯವರೆಗೂ ಇದು ಕಾರ್ಯರೂಪಕ್ಕೆ ಬಂದಿಲ್ಲ. ಶಿವಮೊಗ್ಗ ನಗರ – ತಾಲೂಕು ವ್ಯಾಪ್ತಿಯಲ್ಲಿ ಹೊಸದಾಗಿ ನಾಲ್ಕು ಪೊಲೀಸ್ ಠಾಣೆ, ಸಾಗರದಲ್ಲಿ ಪ್ರತ್ಯೇಕ ಟ್ರಾಫಿಕ್ ಠಾಣೆ ಸ್ಥಾಪನೆಯಾಗಬೇಕೆಂಬ ಬೇಡಿಕೆಯಿದೆ.

ಸರ್ಕಾರಿ ಆಸ್ಪತ್ರೆಗೆ ಅನುದಾನ : ರಾಜ್ಯದ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ, ಶಿವಮೊಗ್ಗದ ಮೆಗ್ಗಾನ್ ಕೂಡ ಒಂದಾಗಿದೆ. ಸುತ್ತಮುತ್ತಲಿನ ಜಿಲ್ಲೆಗಳ ರೋಗಿಗಳು ಸದರಿ ಆಸ್ಪತ್ರೆಗೆ ಆಗಮಿಸುತ್ತಾರೆ. ಬಡ ರೋಗಿಗಳ ಪಾಲಿಗೆ ಆಶಾಕಿರಣವಾಗಿರುವ ಮೆಗ್ಗಾನ್ ಆಸ್ಪತ್ರೆಯನ್ನು ಮಾದರಿಯಾಗಿ ಅಭಿವೃದ್ದಿಗೊಳಿಸಬೇಕು. ಬಜೆಟ್ ನಲ್ಲಿ ವಿಶೇಷ ಅನುದಾನ ಮೀಸಲಿರಿಸಬೇಕಾಗಿದೆ.

ಜಿಲ್ಲೆ – ತಾಲೂಕು ಕೇಂದ್ರ : ಆಡಳಿತಾತ್ಮಕ ಹಿತದೃಷ್ಟಿಯಿಂದ ಸಾಗರ ತಾಲೂಕು ಕೇಂದ್ರವನ್ನು ಜಿಲ್ಲಾ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆಯಿದೆ. ಶಿವಮೊಗ್ಗ ನಗರ – ಗ್ರಾಮಾಂತರ ಪ್ರತ್ಯೇಕ ತಾಲೂಕುಗಳ ರಚನೆ, ಸೊರಬ ತಾಲೂಕಿನ ಆನವಟ್ಟಿ ಹಾಗೂ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ತಾಲೂಕು ಕೇಂದ್ರಗಳ ರಚನೆಯಾಗಬೇಕೆಂಬ ಬೇಡಿಕೆ ಹಲವು ದಶಕಗಳದ್ದಾಗಿದೆ.

ಎಂಪಿಎಂ : ಭದ್ರಾವತಿಯಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ವಿಐಎಸ್’ಎಲ್ ಕಾರ್ಖಾನೆ ಪುನಶ್ಚೇತನದ ಚರ್ಚೆಗಳು ನಡೆಯುತ್ತಿವೆ. ಅದೇ ರೀತಿಯಲ್ಲಿ ರಾಜ್ಯ ಸರ್ಕಾರಿ ಸ್ವಾಮ್ಯದ. ಮೈಸೂರು ಪೇಪರ್ ಮಿಲ್ (ಎಂಪಿಎಂ) ಕಾರ್ಖಾನೆ ಪುನಶ್ಚೇತನಕ್ಕೆ ಒತ್ತು ಸಿಗಬೇಕಾಗಿದೆ. ಬಜೆಟ್ ನಲ್ಲಿ ವಿಶೇಷ ಯೋಜನೆ ಕಾರ್ಯಗತವಾಗಬೇಕಾಗಿದೆ.

ಮಾದರಿ ಜಿಲ್ಲಾಡಳಿತ ಭವನ : ಶಿವಮೊಗ್ಗ ನಗರದ ಎಸ್ಪಿ ಕಚೇರಿ ಸಮೀಪವಿರುವ ಸರ್ಕಾರಿ ಜಾಗದಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾದ ಹಾಗೂ ಎಲ್ಲ ರಾಜ್ಯ ಸರ್ಕಾರಿ ಅಧೀನದ ಇಲಾಖೆಗಳು ಒಂದೇ ಕಡೆಯಿರುವ ಸುಸಜ್ಜಿತ ಜಿಲ್ಲಾಡಳಿತ ಭವನ ನಿರ್ಮಿಸಬೇಕೆಂಬ ಬೇಡಿಕೆ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಬಜೆಟ್ ನಲ್ಲಿ ಇದಕ್ಕೆ ಆದ್ಯತೆ ಸಿಗಬೇಕಾಗಿದೆ.

ಕುಡಿಯುವ ನೀರು ಯೋಜನೆ : ಶಿವಮೊಗ್ಗ ನಗರದ ಬೆಳವಣಿಗೆ ಹಾಗೂ ಜನಸಂಖ್ಯೆಗೆ ಅನುಗುಣವಾಗಿ, ಕುಡಿಯುವ ನೀರು ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕಾಗಿದೆ. ಗಾಜನೂರು ಬಳಿ ಹೊಸ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಅನುದಾನ ಬಿಡುಗಡೆಯಾಗಬೇಕಾಗಿದೆ. ನಗರದ ಹೊರವಲಯದ ಬಡಾವಣೆಗಳಿಗೂ ತುಂಗಾ ನದಿ ನೀರು ಪೂರೈಕೆಯ ಯೋಜನೆ ಕಾರ್ಯಗತವಾಗಬೇಕಾಗಿದೆ.

ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ : ಶಿವಮೊಗ್ಗದಲ್ಲಿ ಈಗಾಗಲೇ ಸರ್ಕಾರಿ ಮೆಡಿಕಲ್ ಕಾಲೇಜ್, ಆಯುರ್ವೇದ ಕಾಲೇಜ್, ಕೃಷಿ ವಿಶ್ವವಿದ್ಯಾಲಯಗಳಿವೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಭದ್ರಾವತಿ ಸರ್ಕಾರಿ ಐಟಿಐ ಕಾಲೇಜ್ ನಲ್ಲಿ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಆರಂಭವಾಗಬೇಕಾಗಿದೆ.

ಆಯುಷ್ ವಿಶ್ವವಿದ್ಯಾಲಯ : ದಕ್ಷಿಣ ಭಾರತದ ಮೊಟ್ಟಮೊದಲ ಆಯುಷ್ ವಿಶ್ವವಿದ್ಯಾಲಯವನ್ನು ಶಿವಮೊಗ್ಗದಲ್ಲಿ ಸ್ಥಾಪನೆ ಮಾಡಲು ಕಳೆದ ಹಲವು ವರ್ಷಗಳ ಹಿಂದಿನ ರಾಜ್ಯ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಅಗತ್ಯ ಭೂಮಿ ಕಾಯ್ದಿರಿಸಲಾಗಿದೆ. ಆದರೆ ಇಲ್ಲಿಯವರೆಗೂ ಆಯುಷ್ ವಿವಿ ಕಾರ್ಯಾರಂಭ ಮಾಡಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಕ್ರಮವಾಗಬೇಕಾಗಿದೆ.

ಕೈಗಾರಿಕಾ ಬೆಳವಣಿಗೆ : ಕೇಂದ್ರ ಸರಕಾರ ಘೋಷಿಸಿರುವ ಬೆಂಗಳೂರು -ಮುಂಬೈ ಕೈಗಾರಿಕಾ ಕಾರಿಡಾರ್‌ ನಲ್ಲಿ ಶಿವಮೊಗ್ಗ ಬರುವುದಿಲ್ಲ. ಇದಕ್ಕೆ ಪೂರಕವಾಗಿ ಶಿವಮೊಗ್ಗ, ದಾವಣಗೆರೆ ಅಥವಾ ಶಿವಮೊಗ್ಗ ಚಿತ್ರದುರ್ಗ ಮಾರ್ಗದಲ್ಲಿ ಕೈಗಾರಿಕಾ ಕಾರಿಡಾರ್‌ ಮಾಡಬೇಕು. ಹೊಸ ಕೈಗಾರಿಕೆ, ಉದ್ದಿಮೆಗಳ ಸ್ಥಾಪನೆಯಾಗಬೇಕು. ಈ ಮೂಲಕ ಉದ್ಯೋಗಾವಕಾಶ ಸೃಷ್ಟಿಗೆ ಕ್ರಮಕೈಗೊಳ್ಳಬೇಕು.

ರೈಲ್ವೆ ಯೋಜನೆಗಳಿಗೆ ಅನುದಾನ : ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಯೋಜನೆಯ ಭೂ ಸ್ವಾದೀನ ಪ್ರಕ್ರಿಯೆ ಹಾಗೂ ತ್ವರಿತ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಬೇಕಾಗಿದೆ.

ಉಳಿದಂತೆ ಈ ಹಿಂದಿನ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಫುಡ್ ಪಾರ್ಕ್ ನಿರ್ಮಾಣಕ್ಕೆ ಅನುದಾನ, ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಕ್ರಮ, ಕೃಷಿ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಸೇರಿದಂತೆ ಜಿಲ್ಲೆಯ ವಿವಿಧ ಯೋಜನೆಗಳಿಗೆ ಅವಕಾಶ ಸಿಗಬೇಕಾಗಿದೆ.

State Budget: Will Shivamogga District’s Demands Get Approval? Report: B. Renukesh Shivamogga, February 18: The upcoming State Budget will be presented on March 6. Chief Minister Siddaramaiah has begun preparations for the budget. Ministers and officials are holding departmental meetings to collect opinions. Meanwhile, discussions have started in the public sphere on whether Shivamogga district will receive greater priority in the present budget.

In earlier budgets, Shivamogga district had considerable representation. But recently, the priority given to the district has been declining. As a result, several major demands have been sidelined. The key demands are as follows:

  • Police Commissionerate: Establishment of a Police Commissionerate office covering Shivamogga–Bhadravati cities has been a long-standing demand. So far, it has not materialized. There is also a demand for four new police stations in Shivamogga city–taluk limits, and a separate traffic station in Sagar.
  • Government Hospital Grant: Among the largest government hospitals in the state, Shivamogga’s McGann is one. Patients from surrounding districts come here. For poor patients, McGann Hospital is a ray of hope. It should be developed as a model hospital, with special grants reserved in the budget.
  • District–Taluk Centers: For administrative convenience, Sagar taluk center should be upgraded to district center. There is also a demand for separate taluks for Shivamogga city–rural, and creation of taluk centers at Anavatti (Sorab taluk) and Holehonnuuru (Bhadravati taluk), pending for decades.
  • MPM: Discussions are ongoing about revival of the central government-owned VISL factory in Bhadravati. Similarly, emphasis should be given to revival of the state-owned Mysore Paper Mill (MPM). A special project should be implemented in the budget.
  • Model District Administration Building: On government land near the SP office in Shivamogga city, a well-equipped district administration building housing all state government departments under one roof should be constructed as a model for the state. This demand has been sidelined; it needs priority in the budget.
  • Drinking Water Project: In line with Shivamogga city’s growth and population, a drinking water project must be designed and implemented. Funds should be released for a new water purification plant near Gajanur. Plans to supply Tunga river water to suburban layouts must also be executed.
  • Government Engineering College: Shivamogga already has a government medical college, Ayurveda college, and agricultural university. For students’ benefit, a government engineering college should be started at Bhadravati Government ITI College.
  • AYUSH University: The first AYUSH University in South India was announced years ago in the state budget to be set up in Shivamogga. Land has been reserved, but the university has not yet started. Necessary steps must be taken.
  • Industrial Development: Shivamogga is not included in the Bengaluru–Mumbai Industrial Corridor announced by the central government. As a complement, an industrial corridor should be created along Shivamogga–Davangere or Shivamogga–Chitradurga route. New industries and enterprises should be established, creating employment opportunities.
  • Railway Project Grants: For the Shivamogga–Shikaripura–Ranebennur railway project, land acquisition and speedy implementation require the state government to release its share of funds.
  • Other: Grants for the food park announced in the previous budget, measures for tourism development, and steps to resolve agricultural issues should also be provided for various district projects.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →