bhadravathi news | ಪತಿ ಆತ್ಮಹತ್ಯೆ ಮಾಡಿಕೊಂಡ ವಾರದಲ್ಲಿಯೇ ಪತ್ನಿಯೂ ನೇಣಿಗೆ ಶರಣು : ಪೊಲೀಸ್ ಪೇದೆ ವಿರುದ್ಧ ಕಿರುಕುಳದ ಆರೋಪ!

Wife dies by suicide within a week of husband’s suicide : Allegations of harassment against a police constable! ಪತಿ ಆತ್ಮಹತ್ಯೆ ಮಾಡಿಕೊಂಡ ವಾರದಲ್ಲಿಯೇ ಪತ್ನಿಯೂ ನೇಣಿಗೆ ಶರಣು : ಪೊಲೀಸ್ ಪೇದೆ ವಿರುದ್ಧ ಕಿರುಕುಳದ ಆರೋಪ!

ಭದ್ರಾವತಿ (bhadravati news), ಫೆಬ್ರವರಿ 21: ಪತಿ ಆತ್ಮಹತ್ಯೆ ಮಾಡಿಕೊಂಡ ವಾರದೊಳಗೆ, ಪತ್ನಿಯೂ ಆತ್ಮಹತ್ಯೆಗೆ ಶರಣಾದ ಘಟನೆ ಭದ್ರಾವತಿ ನಗರದ ಹೊಸ ಸಿದ್ದಾಪುರದಲ್ಲಿ ನಡೆದಿದೆ.

ಸ್ವಾತಿ (26) ಪತಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದವರೆಂದು ಗುರುತಿಸಲಾಗಿದೆ. ಈ ಕುರಿತಂತೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿ ಸಾವು : ಕೆಎಸ್ಐಎಸ್ಎಫ್ ನಲ್ಲಿ ಡಿ ದರ್ಜೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಾತಿ ಅವರ ಪತಿ ಜಗದೀಶ್ ಅವರು, ಶಿವರಾತ್ರಿಯಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಪ್ರಕರಣದಡಿ ದೂರು ದಾಖಲಾಗಿತ್ತು.

ವಾಟ್ಸಾಪ್ ಸಂದೇಶ : ಪತಿ ಮೃತಪಟ್ಟ ನಾಲ್ಕು ದಿನದ ಅಂತರದಲ್ಲಿಯೇ ಸ್ವಾತಿ ಕೂಡ ಪತಿ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಮೊಬೈಲ್ ಪೋನ್ ಮೂಲಕ ಅವರ ತಾಯಿಗೆ ವಾಟ್ಸಾಪ್ ಸಂದೇಶ ಕಳುಹಿಸಿರುವುದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ತೀರ್ಥಹಳ್ಳಿ ತಾಲೂಕಿನ ಪೊಲೀಸ್ ಠಾಣೆಯೊಂದರ ಸಿಬ್ಬಂದಿಯೋರ್ವರ ವಿರುದ್ದ ಸ್ವಾತಿ ಆರೋಪ ಮಾಡಿದ್ದಾಳೆ. ‘ನನ್ನ ಪತಿಯ ಸಾವಿಗೆ ನಾನೇ ಕಾರಣವೆಂದು ಪೊಲೀಸ್ ಸಿಬ್ಬಂದಿ ಹೇಳುತ್ತಿದ್ದು, ಜನರ ಬಳಿ ನನ್ನ ಬಗ್ಗೆ ಕೆಟ್ಟದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ’ ಎಂದೆಲ್ಲ ವಾಟ್ಸಾಪ್ ಸಂದೇಶದಲ್ಲಿ ಸ್ವಾತಿ ದೂರಿದ್ದಾಳೆ. ಈ ಕುರಿತಂತೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯ ನಂತರವಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.

Wife dies by suicide within a week of husband’s suicide : Allegations of harassment against a police constable!

Bhadravati, February 21: In a tragic incident at Hosahosahalli in Bhadravati city, a woman ended her life within a week of her husband’s suicide.

Swati (26) was found dead by hanging at her husband’s residence. A case has been registered at the Newtown Police Station.

Husband’s death: Swati’s husband, Jagadish, who worked as a D-grade employee in KSISF, had died by suicide on Shivaratri by hanging himself at home. Following this, an unnatural death case was registered at the Newtown Police Station.

WhatsApp message: Just four days after her husband’s death, Swati also took her own life at the same house. Before her death, she sent a WhatsApp message to her mother, which has given the case a new twist.

In the message, Swati accused a police staff member from a station in Tirthahalli taluk. She wrote: “That police staff keeps saying I am responsible for my husband’s death and is spreading bad things about me among people.”

Based on this, a case has been registered at the Newtown Police Station. Further details will only emerge after police investigation.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →