shimoga news | ಶಿವಮೊಗ್ಗ : ಬಡಾವಣೆಗಳ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ ಅಬ್ಬಲಗೆರೆ ಗ್ರಾಪಂ ಆಡಳಿತಾಧಿಕಾರಿ, ಪಿಡಿಓಗೆ ಮನವಿ

Shivamogga, October 6: The Press Colony Residents' Welfare Association submitted a memorandum to Abalagere Gram Panchayat Administrator Santhosh Kumar and PDO Rajappa seeking a resolution to infrastructure-related issues.

ಶಿವಮೊಗ್ಗ (shivanogga), ಅಕ್ಟೋಬರ್ 06: ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿ ಸಂತೋಷ್ ಕುಮಾರ್ ಹಾಗೂ ಪಿಡಿಓ ರಾಜಪ್ಪ ಅವರಿಗೆ, ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದಿಂದ ಮನವಿ ಪತ್ರ ಅರ್ಪಿಸಲಾಯಿತು.

ಪ್ರೆಸ್ ಕಾಲೋನಿ, ಮಹಾಲಕ್ಷ್ಮೀ ಲೇಔಟ್, ಶ್ರೀ ಬಡಾವಣೆ ಮೂಲಕ ಹಾದು ಹೋಗಿರುವ ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆ ಗುಂಡಿ – ಗೊಟರು ಮುಚ್ಚಲು ಕ್ರಮಕೈಗೊಳ್ಳಬೇಕು. ಸುಗಮ ಜನ – ವಾಹನ ಸಂಚಾರಕ್ಕೆ ಕ್ರಮಕೈಗೊಳ್ಳಬೇಕು. ಹಾಳಾಗಿರುವ ಪಾರ್ಕ್ ಗಳ ಗೇಟ್ ದುರಸ್ತಿ ಮಾಡಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಶ್ರೀ ಬಡಾವಣೆ ಪಾರ್ಕ್ ನಲ್ಲಿ ಗಿಡಗಳನ್ನು ಬೆಳೆಸಲು ಬೋರ್’ವೆಲ್ ನೀರಿನ ವ್ಯವಸ್ಥೆ ಮಾಡಬೇಕು. ಹಾಳಾಗಿರುವ ಬೋರ್’ವೆಲ್ ನೀರು ಪೂರೈಕೆಯ ಪೈಪ್ ದುರಸ್ತಿಗೊಳಿಸಬೇಕು. ಪ್ರೆಸ್ ಕಾಲೋನಿಯಲ್ಲಿರುವ ಕಲ್ಯಾಣಿ ಅಭಿವೃದ್ದಿಗೊಳಿಸಬೇಕು.

ಶೋಭಾ ಲೇಔಟ್ ಸೇರಿದಂತೆ ವಿವಿಧೆಡೆ ಬೀದಿ ದೀಪಗಳ ಸ್ವಿಚ್ ಬಾಕ್ಸ್ ಹಾಳಾಗಿದ್ದು, ಹೊಸ ಸ್ವಿಚ್ ಬಾಕ್ಸ್ ಅಳವಡಿಸಬೇಕು. ಪ್ರಸ್ತುತ ಬೇಸಿಗೆ ತೀವ್ರತೆ ಹೆಚ್ಚಾಗಿರುವ ಕಾರಣದಿಂದ ಪ್ರೆಸ್ ಕಾಲೋನಿಯಲ್ಲಿರುವ ಜಾನುವಾರು ತೊಟ್ಟಿಗೆ ನಿರಂತರವಾಗಿ ನೀರು ಪೂರೈಕೆ ಮಾಡಬೇಕು. ಹಾಗೂ ಹೊಸದಾಗಿ ಜಾನುವಾರು ತೊಟ್ಟಿ ನಿರ್ಮಿಸಬೇಕು.

ಈಗಾಗಲೇ ಪಾಲಿಕೆ ಆಡಳಿತ, ಜನಪ್ರತಿನಿಧಿಗಳ ಅನುದಾನದಲ್ಲಿ ಹೊಸ ಹೈಮಾಸ್ಟ್ ವಿದ್ಯುತ್ ದೀಪಗಳು ಮಂಜೂರಾಗಿದೆ. ಗ್ರಾಪಂ ವ್ಯಾಪ್ತಿಯ ಬಡಾವಣೆಗಳಲ್ಲಿಯೂ ಗ್ರಾಪಂನಿಂದ ಹೈಮಾಸ್ಟ್ ದೀಪ ಅಳವಡಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತಂತೆ ಆಡಳಿತಾಧಿಕಾರಿಗಳು ಹಾಗೂ ಪಿಡಿಓ ಅವರಿಗೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ನಿವಾಸಿಗಳ ಸಂಘದ ಅಧ್ಯಕ್ಷರೂ ಆದ ಪತ್ರಕರ್ತ ಬಿ ರೇಣುಕೇಶ್, ಮುಖಂಡ ಗುರುಚರಣ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Shivamogga, October 6: The Press Colony Residents’ Welfare Association submitted a memorandum to Abalagere Gram Panchayat Administrator Santhosh Kumar and PDO Rajappa seeking a resolution to infrastructure-related issues.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *