shimoga news | ಶಿವಮೊಗ್ಗ : ಸ್ನೇಹಿತನಿಂದ ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವು!

Shivamogga: Man Dies After Being Stabbed by Friend ಶಿವಮೊಗ್ಗ : ಸ್ನೇಹಿತನಿಂದ ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವು!

ಶಿವಮೊಗ್ಗ, ಫೆಬ್ರವರಿ 22: ಸ್ನೇಹಿತರ ನಡುವೆ ನಡೆದ ಕಲಹದ ವೇಳೆ ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ತೌಫಿಕ್ (40) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತನ ಸ್ನೇಹಿತ ಸಯ್ಯದ್ ಅನ್ವರ್ (35) ಆರೋಪಿಯಾಗಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://udayasaakshi.com/archives/18432

ಪ್ರಕರಣದ ಹಿನ್ನೆಲೆ : ಸದರಿ ಸ್ನೇಹಿತರಿಬ್ಬರು ಗಾರೆ ಕೆಲಸ ಮಾಡುತ್ತಿದ್ದರು. ಫೆಬ್ರವರಿ 19 ರ ರಾತ್ರಿ ಶಿವಮೊಗ್ಗ ನಗರದ ಬಿ ಹೆಚ್ ರಸ್ತೆಯ ಹೊಳೆ ಬಸ್ ನಿಲ್ದಾಣದ ಬಳಿ ಇಬ್ಬರು ಪಾರ್ಟಿ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಆರೋಪಿ ಸಯ್ಯದ್ ಅನ್ವರ್ ನು ಚಾಕುವಿನಿಂದ ತೌಫಿಕ್ ಕುತ್ತಿಗೆಗೆ ಇರಿದಿದ್ದ.

ಗಂಭೀರವಾಗಿ ಗಾಯಗೊಂಡಿದ್ದ ತೌಫಿಕ್ ಬಿ ಹೆಚ್ ರಸ್ತೆಯಲ್ಲಿ ಕುಳಿತ್ತಿದ್ದು, ಈ ವೇಳೆ ಸ್ಥಳಕ್ಕಾಗಮಿಸಿದ 112 ಪೊಲೀಸರು ಆತನನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 21 ರ ರಾತ್ರಿ ಮೃತಪಟ್ಟಿದ್ದಾನೆ.

Shivamogga: Man Dies After Being Stabbed by Friend | Shivamogga, February 22: A man who had been hospitalized after being stabbed during a quarrel with his friend has died while undergoing treatment in Shivamogga. The deceased has been identified as Taufiq (40). His friend Syed Anwar (35) is the accused, and police have taken him into custody. A case has been registered at the Kote Police Station. Background of the incident: Both men worked as construction laborers. On the night of February 19, they were partying near the bus stand at B.H. Road in Shivamogga city. An argument broke out between them, during which Syed Anwar allegedly stabbed Taufiq in the neck with a knife. Taufiq, who was seriously injured, collapsed on B.H. Road. Police patrol unit 112 arrived at the spot and rushed him to the government McGann Hospital. Despite receiving treatment, he succu

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: www.udayasaakshi.@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *