ಶಿವಮೊಗ್ಗ (shivamogga), ಮಾರ್ಚ್ 05: ಶಿವಮೊಗ್ಗದ ಶರಾವತಿ ನಗರದ ಹಂದಿ ಜೋಗಿ ಬೀದಿಯಲ್ಲಿ, ಮನೆ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜು ಪುಡಿಗಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಶಿವಮೊಗ್ಗದ ವಿನೋಬನಗರ ಚಾಲನ್ ಏರಿಯಾ 6 ನೇ ಕ್ರಾಸ್ ನಿವಾಸಿ ಶರತ್, ವಿನೋಬನಗರ ಮೇದಾರ ಕೇರಿ 2 ನೇ ಕ್ರಾಸ್ ನಿವಾಸಿ ಪ್ರಶಾಂತ್ ಏ ಹಾಗೂ ಶರಾವತಿ ನಗರ ನಗರ ಬಿ ಬ್ಲಾಕ್ 2 ನೇ ಕ್ರಾಸ್ ನಿವಾಸಿ ಸತೀಶ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ : ಮಾರ್ಚ್ 03 ರ ರಾತ್ರಿ ಸುರೇಶ್ ಎಂಬುವರಿಗೆ ಸೇರಿದ ಕಾರಿನ ಗಾಜನ್ನು ಬೈಕ್ ನಲ್ಲಿ ಆಗಮಿಸಿದ ಇಬ್ಬರು ಅಪರಿಚಿತರು ಪುಡಿಗಟ್ಟಿದ್ದರು. ನಂತರ ಪರಾರಿಯಾಗಿದ್ದರು. ಸುಮಾರು 2.5 ಲಕ್ಷ ರೂ. ನಷ್ಟವಾಗಿತ್ತು. ಈ ಕುರಿತಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರಣವೇನು? : ಕಾರಿನ ಮಾಲೀಕ ಸುರೇಶ್ ಅವರು ಖರೀದಿಸಬೇಕಾಗಿದ್ದ ಮನೆಯನ್ನು, ಆರೋಪಿ ಸತೀಶ್ ಖರೀದಿಸಿದ್ದ. ಈ ಕುರಿತಂತೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು – ಪ್ರತಿದೂರು ದಾಖಲಾಗಿತ್ತು.
ಈ ವಿಷಯವನ್ನು ಆರೋಪಿ ಸತೀಶನು, ಇತರೆ ಇಬ್ಬರು ಆರೋಪಿಗಳಾದ ಶರತ್ ಹಾಗೂ ಪ್ರಶಾಂತ್ ಗೆ ತಿಳಿಸಿದ್ದ. ತದನಂತರ ಮೂವರು ಸೇರಿ ಸುರೇಶ್ ಅವರ ಕಾರಿನ ಗಾಜನ್ನು ಪುಡಿಗಟ್ಟುವ ನಿರ್ಧಾರ ಮಾಡಿದ್ದರು ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
shimoga news | ಶಿವಮೊಗ್ಗ : ಕಾರಿನ ಗಾಜು ಹಾನಿಗೊಳಿಸಿ ಪರಾರಿಯಾದ ಕಿಡಿಗೇಡಿ!
Shivamogga: Car Window Shattering Case – Three Arrested!
Shivamogga, March 05: In Sharavathi Nagar’s Handi Jogi Street, Shivamogga, police from Doddapete station successfully arrested three accused in connection with a case where a car parked in front of a house had its window shattered.
The arrested have been identified as: Sharath, resident of Vinobanagar Chalan Area, 6th Cross, Prashanth, resident of Vinobanagar Medara Keri, 2nd Cross and Satish, resident of Sharavathi Nagar B Block, 2nd Cross.
Incident Background: On the night of March 03, two unidentified men arrived on a bike and smashed the window of a car belonging to Suresh. They fled immediately after. The damage was estimated at around ₹2.5 lakh. A case was registered at Doddapete Police Station.
Reason Behind the Crime: The car owner, Suresh, had intended to purchase a house, but accused Satish bought it instead. This led to a dispute between the two, resulting in complaints and counter-complaints at Doddapete Police Station.

