shimoga news | ಶಿವಮೊಗ್ಗ – ಪಲ್ಟಿಯಾದ ಟಿಪ್ಪರ್ ಲಾರಿ : ಅಪ್ಪಚ್ಚಿಯಾದ ಟ್ರ್ಯಾಕ್ಟರ್ ಎಂಜಿನ್!

Shivamogga – Tipper Lorry Overturned : Tractor Engine Crushed!ಶಿವಮೊಗ್ಗ - ಪಲ್ಟಿಯಾದ ಟಿಪ್ಪರ್ ಲಾರಿ : ಅಪ್ಪಚ್ಚಿಯಾದ ಟ್ರ್ಯಾಕ್ಟರ್ ಎಂಜಿನ್!

ಶಿವಮೊಗ್ಗ (shivamogga), ಮಾರ್ಚ್ 14: ಹೈಡ್ರಾಲಿಕ್ ಜಾಕ್ ತುಂಡರಿಸಿದ ಪರಿಣಾಮ ಟಿಪ್ಪರ್ ಲಾರಿಯೊಂದು ಪಲ್ಟಿಯಾಗಿ ಬಿದ್ದ ಘಟನೆ, ಶಿವಮೊಗ್ಗ ನಗರದ ಖಾಜಿ ಗಾರ್ಡನ್ ಸಮೀಪದ ಚೌಡಮ್ಮ ದೇವಾಲಯ ಎದುರು ಮಾರ್ಚ್ 14 ರ ಬೆಳಿಗ್ಗೆ ನಡೆದಿದೆ.

ಸದರಿ ಟಿಪ್ಪರ್ ಲಾರಿ ತುಮಕೂರಿನಿಂದ ಎಂ ಸ್ಯಾಂಡ್ ಲೋಡ್ ಮಾಡಿಕೊಂಡು ಶಿವಮೊಗ್ಗಕ್ಕೆ ಆಗಮಿಸಿತ್ತು. ಖಾಲಿ ಜಾಗದಲ್ಲಿ ಎಂ ಸ್ಯಾಂಡ್ ಅನ್ ಲೋಡ್ ಮಾಡುವ ವೇಳೆ, ಆಕಸ್ಮಿಕವಾಗಿ ಹೈಡ್ರಾಲಿಕ್ ಜಾಕ್ ತುಂಡರಿಸಿದೆ.

ಇದರಿಂದ ಟಿಪ್ಪರ್ ಎಂಜಿನ್ ಹಾಗೂ ಬಾಡಿ ಬೇರ್ಪಟ್ಟು, ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರ್ ಎಂಜಿನ್ ಮೇಲೆ ಬಿದ್ದಿದೆ. ಇದರಿಂದ ಟ್ರ್ಯಾಕ್ಟರ್ ಎಂಜಿನ್ ಸಂಪೂರ್ಣ ಅಪ್ಪಚ್ಚಿಯಾಗಿದೆ. ಸ್ಥಳದಲ್ಲಿ ಯಾರೂ ಇರದಿದ್ದ ಕಾರಣದಿಂದ ಸಂಭಾವ್ಯ ದುರಂತ ತಪ್ಪಿದೆ ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ಇಲಾಖೆಯ ತುರ್ತು ವಾಹನ ಇಆರ್’ಎಸ್ಎಸ್ – 112 ವಾಹನದ  ಸಿಬ್ಬಂದಿ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.

Shivamogga – Tipper Lorry Overturned: Tractor Engine Crushed!

Shivamogga, March 14: An incident occurred on the morning of March 14 near the Chaudamma Temple opposite Khazi Garden in Shivamogga city, where a tipper lorry overturned after its hydraulic jack broke.

The tipper lorry had arrived from Tumakuru carrying a load of M-sand. While unloading the sand in an open space, the hydraulic jack suddenly snapped.

As a result, the lorry’s engine and body separated, and the engine fell onto a tractor parked at the spot. The tractor’s engine was completely crushed. Fortunately, no one was present at the site, so a potential tragedy was avoided, according to eyewitnesses.

Police emergency response vehicle ERSS–112 staff visited the scene and conducted an inspection.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *