ಶಿವಮೊಗ್ಗ (shivamogga), ಮೇ 09: ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಹಿರೇಹಳ್ಳಿ ಯಾರ್ಡ್‌ನಲ್ಲಿ ಅತ್ಯಗತ್ಯ ಸುರಕ್ಷತಾ ಮತ್ತು ಸಿಗ್ನಲಿಂಗ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ, ಮೇ 20, 2026 ರಂದು ಈ ಕೆಳಗಿನ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ. ವಿವರ ಈ ಕೆಳಗಿನಂತಿವೆ:
ರೈಲುಗಳ ಮಾರ್ಗ ಬದಲಾವಣೆ: ಮೇ 20, 2026 ರಂದು ಹೊರಡುವ ರೈಲು ಸಂಖ್ಯೆ 20689 ಯಶವಂತಪುರ–ಶಿವಮೊಗ್ಗ ಟೌನ್ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಯಶವಂತಪುರ, ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಈ ರೈಲು ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುವುದಿಲ್ಲ.
ಮೇ 20, 2026 ರಂದು ಹೊರಡುವ ರೈಲು ಸಂಖ್ಯೆ 20676 ಮೈಸೂರು–ಬೆಳಗಾವಿ ವಿಶ್ವಮಾನವ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಮೈಸೂರು, ಹೊಳೆನರಸೀಪುರ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಈ ರೈಲು ಪಾಂಡವಪುರದಿಂದ ತಿಪಟೂರಿನವರೆಗಿನ ಎಲ್ಲಾ ನಿಲ್ದಾಣಗಳ ನಿಲುಗಡೆಯನ್ನು ಇರುವುದಿಲ್ಲ.
ರೈಲುಗಳ ಭಾಗಶಃ ರದ್ದು: ಮೇ 20, 2026 ರಂದು ರೈಲು ಸಂಖ್ಯೆ 66567 ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು ರೈಲು ದೊಡ್ಡಬೆಲೆ ಮತ್ತು ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ರೈಲು ದೊಡ್ಬೆಲೆಯಲ್ಲಿ ಕೊನೆಗೊಳ್ಳಲಿದೆ.
ಮೇ 20, 2026 ರಂದು ರೈಲು ಸಂಖ್ಯೆ 66572 ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು ರೈಲು ತುಮಕೂರು ಮತ್ತು ದೊಡ್ಡಬೆಲೆ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ತುಮಕೂರಿನ ಬದಲಾಗಿ ದೊಡ್ಡಬೆಲೆ ನಿಲ್ದಾಣದಿಂದ ನಿಗದಿತ ಸಮಯಕ್ಕೆ ತನ್ನ ಪ್ರಯಾಣ ಆರಂಭಿಸಲಿದೆ.
ರೈಲುಗಳ ನಿಯಂತ್ರಣ: ಮೇ 19, 2026 ರಂದು ವೇಲಂಕಣಿಯಿಂದ ಹೊರಡುವ ರೈಲು ಸಂಖ್ಯೆ 17316 ವೇಲಂಕಣಿ–ವಾಸ್ಕೊ ಡ ಗಾಮ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಣಕ್ಕೊಳಪಡಲಿದೆ (ವಿಳಂಬವಾಗಲಿದೆ).
ಮೇ 20, 2026 ರಂದು ತಮ್ಮ ಮೂಲ ನಿಲ್ದಾಣಗಳಿಂದ ಹೊರಡುವ ರೈಲುಗಳ ಸಂಖ್ಯೆ 12725 ಕೆಎಸ್ಆರ್ ಬೆಂಗಳೂರು–ಧಾರವಾಡ ಸಿದ್ದಗಂಗಾ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಾಗೂ 12649 ಯಶವಂತಪುರ–ಹಜರತ್ ನಿಜಾಮುದ್ದೀನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳು ಮಾರ್ಗಮಧ್ಯೆ ತಲಾ 30 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Yeshwantpur-Shivamogga Town Superfast Express train route diversion on May 20
Shivamogga, May 09: Due to essential safety and signalling works being undertaken at Hirehalli Yard of Bangalore Division of South Western Railway, temporary diversions have been made in the movement of the following trains on May 20, 2026. The details are as follows:
Train route diversion: Train No. 20689 Yeshwantpur-Shivamogga Town daily Superfast Express train departing on May 20, 2026 will run via Yeshwantpur, Chikkabanavara, Nelamangala, Hassan and Arasikere. Hence, the train will not halt at Tumkur and Tiptur stations.
Train No. 20676 Mysore-Belgaum Vishwamanav Daily Superfast Express train departing on May 20, 2026 will operate via Mysore, Holenarasipur, Hassan and Arsikere. Hence, this train will not stop at all the stations from Pandavapura to Tiptur.
Partial Cancellation of Trains: Train No. 66567 KSR Bengaluru-Tumkur MEMU train will be partially cancelled between Doddabele and Tumkur stations on May 20, 2026. The train will terminate at Doddabele.
Train No. 66572 Tumkur-KSR Bengaluru MEMU train will be partially cancelled between Tumkur and Doddabele on May 20, 2026. This train will start its journey from Doddabele station instead of Tumkur at the scheduled time.
Train Control: Train No. 17316 Velankani-Vasco da Gama Weekly Express departing from Velankani on May 19, 2026 will be controlled (delayed) for 60 minutes en route.
Train No. 12725 KSR Bengaluru-Dharwad Siddaganga Daily Superfast Express and 12649 Yesvantpur-Hazrat Nizamuddin Superfast Express departing from their respective origin stations on May 20, 2026 will be controlled for 30 minutes each, a Railway Department release said.

