ಶಿವಮೊಗ್ಗ (shivamogga), ಮೇ 15: ‘ಶಾಲಾ – ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಕುರಿತಂತೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮ ಸ್ವಾಗತಾರ್ಹವಾಗಿದೆ. ಆದರೆ ಸರ್ಕಾರದ ನಿರ್ಧಾರದ ಕುರಿತಂತೆ ಕಾಂಗ್ರೆಸ್ ಪಕ್ಷದ ವಿರುದ್ದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ನೀಡಿರುವ ಹೇಳಿಕೆ ಆಕ್ಷೇಪಾರ್ಹವಾಗಿದೆ’ ಎಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಸಿ.ಜಿ. ಮಧುಸೂದನ್ ತಿಳಿಸಿದ್ದಾರೆ.
ಈ ಕುರಿತಂತೆ ಅವರು ಮೇ 15 ರಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕೆ.ಎಸ್. ಈಶ್ವರಪ್ಪ ಅವರು ಕಾಂಗ್ರೆಸ್ ವಿರುದ್ಧ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ಪ್ರಚಾರ ಪಡೆಯುತ್ತಿದ್ದಾರೆ. ದೇಶದ ಸಂವಿಧಾನದಲ್ಲಿ ಎಲ್ಲ ನಾಗರಿಕರಿಗೂ ಸಮಾನ ಅವಕಾಶಗಳನ್ನು ಕೊಡಲಾಗಿದೆ ಎನ್ನುವುದನ್ನೇ ಅವರು ಮರೆತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಶಿಕ್ಷಣ ಸಂಸ್ಥೆಗಳು ಸರ್ವ ಜನಾಂಗದ ಶಾಂತಿಯ ತೋಟ. ಆದರೆ ಕೆ ಎಸ್ ಈಶ್ವರಪ್ಪ ಅವರು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯರವರು ಶಿಕ್ಷಣ ಸಂಸ್ಥೆಗಳನ್ನು ನಿಜಾರ್ಥದಲ್ಲಿ ಸರ್ವ ಜನಾಂಗದ ಕೇಂದ್ರಗಳಾಗಿ ರೂಪಿಸಲು ಮುಂದಾಗಿದ್ದಾರೆ. ಶಾಲಾ – ಕಾಲೇಜುಗಳಲ್ಲಿ ಹಿಜಾಬ್, ಜನಿವಾರ, ರುದ್ರಾಕ್ಷಿ ಸೇರಿದಂತೆ ಅವರವರ ಧಾರ್ಮಿಕ ಆಚಾರದ ಸಂಕೇತಗಳನ್ನು ಧರಿಸಲು ಅವಕಾಶ ನೀಡಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ಸಿ ಜಿ ಮಧುಸೂದನ್ ಅವರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘Government’s decision is welcome, K.S. Eshwarappa’s statement is objectionable’ – Congress leader C.G. Madhusudan’s statement
Shivamogga, May 15: ‘The action taken by the state government regarding the dress code in schools and colleges is welcome. But the statement made by former DCM K.S. Eshwarappa against the Congress party regarding the government’s decision is objectionable,’ said Shivamogga district Youth Congress leader C.G. Madhusudan.
He issued a press statement in this regard on May 15. K.S. Eshwarappa is getting publicity by making irrelevant statements against the Congress. He has been criticized for forgetting that equal opportunities are given to all citizens in the country’s Constitution.
Educational institutions are gardens of peace for all communities. But K.S. Eshwarappa has accused them of creating confusion.
Chief Minister Siddaramaiah has taken steps to make educational institutions truly centers for all communities. C.G. Madhusudan expressed his appreciation for allowing them to wear religious symbols including the hijab, Janivar, and Rudraksha in schools and colleges, saying it is a welcome development.

