ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಮೇ 18: ಶಿವಮೊಗ್ಗ ನಗರದ ಆಲ್ಕೋಳ ಸರ್ಕಲ್ ಸಮೀಪವಿರುವ ವಿಶಾಲ್ ಮಾರ್ಟ್ ಕಟ್ಟಡದ ಲಿಫ್ಟ್ ನಲ್ಲಿ ಸಿಲುಕಿ ಬಿದ್ದಿದ್ದ 9 ಜನರನ್ನು, ಅಗ್ನಿಶಾಮಕ ದಳದ ತಂಡ ಸುರಕ್ಷಿತವಾಗಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾದ ಘಟನೆ ಮೇ 18 ರ ಸಂಜೆ ನಡೆದಿದೆ.
ಭರತ್ (37), ಅನುಷಾ (35), ಅನೀಸ್ ಫಾತಿಮಾ (44), ಮುಸರತ್ (39), ಸೂಬಿಯಾ (31), ಮಿಜ್ಜಾ (09), ಬಿಲಾಲ್ (06), ಪ್ರಶಾಂತ್ (28) ಹಾಗೂ ಪ್ರವೀಣ್ ಕುಮಾರ್ (47) ಎಂಬುವರೇ ಲಿಫ್ಟ್ ನಲ್ಲಿ ಸಿಲುಕಿಬಿದ್ದ ನಾಗರಿಕರಾಗಿದ್ದಾರೆ.
ಸುಮಾರು 1 ಗಂಟೆಗೂ ಹೆಚ್ಚು ಕಾಲ ಲಿಫ್ಟ್ ನಲ್ಲಿ ಸಿಲುಕಿ ಬಿದ್ದಿದ್ದರಿಂದ ಕೆಲ ನಾಗರಿಕರು ಭಯಭೀತರಾಗಿದ್ದರು. ಮಹಿಳೆಯೋರ್ವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆದರೆ ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ ಲಿಫ್ಟ್ ನಲ್ಲಿ ಸಿಲುಕಿದ್ದವರೆಲ್ಲರು ಸುರಕ್ಷಿತವಾಗಿ ಹೊರಬಂದಿದ್ದಾರೆ.
ಏನಾಯ್ತು? : ಮಾಲ್ ಕಟ್ಟಡದ 2 ನೇ ಫ್ಲೋರ್ ನಲ್ಲಿ ಸಂಜೆ 8. 30 ರ ಸರಿಸುಮಾರಿಗೆ 9 ಜನರು ಲಿಫ್ಟ್ ನ ಕೆಳಭಾಗದ ಫ್ಲೋರ್ ಗೆ ಆಗಮಿಸುತ್ತಿದ್ದರು. ಈ ವೇಳೆ ತಾಂತ್ರಿಕ ಕಾರಣದಿಂದ ಲಿಫ್ಟ್ ಸ್ಥಗಿತಗೊಂಡಿದೆ. ತಕ್ಷಣವೇ ಮಾಲ್ ಸಿಬ್ಬಂದಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ. ಆದರೆ ಲಿಫ್ಟ್ ಬಾಗಿಲು ತೆರೆದುಕೊಂಡಿಲ್ಲ.
ಮತ್ತೊಂದೆಡೆ, ಲಿಫ್ಟ್ ಒಳಗಿದ್ದ ನಾಗರಿಕರೋರ್ವರು ತಮ್ಮ ಮೊಬೈಲ್ ಫೋನ್ ಮೂಲಕ 112 ತುರ್ತು ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸರಿಸುಮಾರು 8. 55 ಕ್ಕೆ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕೆಲ ನಿಮಿಷಗಳಲ್ಲಿಯೇ ಅಗ್ನಿಶಾಮಕ ತಂಡ ಸ್ಥಳಕ್ಕಾಗಮಿಸಿದೆ.
ತ್ವರಿತ ಕಾರ್ಯಾಚರಣೆ ಮೂಲಕ, ಕಟ್ಟರ್ ಯಂತ್ರದ ಮೂಲಕ ಲಿಫ್ಟ್ ಬಾಗಿಲನ್ನು ತುಂಡರಿಸಿದೆ. ಅದರೊಳಗೆ ಸಿಲುಕಿದ್ದವರನ್ನು ಸುರಕ್ಷಿತವಾಗಿ ಹೊರತರುವಲ್ಲಿ ಸಫಲವಾಗಿದೆ. 9.30 ರ ವೇಳೆಗೆ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಇದರಿಂದ ಭಯಭೀತರಾಗಿದ್ದ ನಾಗರಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಆರ್’ಎಫ್ಓ ರಾಜು, ಡಿಎಫ್ಓ ಅಶೋಕ್ ಕುಮಾರ್, ಎಫ್’ಎಸ್’ಟಿಓ ಮಕ್ತುಂ ಹುಸೇನ್, ಎಲ್.ಎಫ್ ಸುನೀಲ್, ಎಫ್ ಡಿ ಸತೀಶ್, ಎಫ್ ಎಂ ಸಂತೋಷ್ ಮನೋಜ್ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಕಾರಣವೇನು? : ಲಿಫ್ಟ್ ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಲು ಕಾರಣವೇನು? ಎಂಬಿತ್ಯಾದಿ ವಿವರಗಳ ಬಗ್ಗೆ ಇನ್ನಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.
ಅಗ್ನಿಶಾಮಕ ದಳದ ಸಾಹಸಕ್ಕೆ ಮೆಚ್ಚುಗೆ…
*** ಲಿಫ್ಟ್ ನಲ್ಲಿ ಸಿಲುಕಿ ಬಿದ್ದು ಭಯಭೀತರಾಗಿದ್ದ ನಾಗರಿಕರನ್ನು ತ್ವರಿತ ಕಾರ್ಯಾಚರಣೆ ಮೂಲಕ ಹೊರ ತರುವಲ್ಲಿ ಸಫಲರಾದ ಅಗ್ನಿಶಾಮಕ ದಳದ ತಂಡಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಮರೋಪಾದಿಯಲ್ಲಿ ಕಟ್ಟರ್ ಯಂತ್ರ ಬಳಸಿ, ಲಿಫ್ಟ್ ಬಾಗಿಲು ಮುರಿದು ನಾಗರಿಕರನ್ನು ಸುರಕ್ಷಿತವಾಗಿ ಹೊರ ತರುವಲ್ಲಿ ಶ್ರಮಿಸಿದ ಸಿಬ್ಬಂದಿಗಳಿಗೆ ಸ್ಥಳದಲ್ಲಿದ್ದವರು ಅಭಿನಂದಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಆರ್’ಎಫ್ಓ ರಾಜು, ಡಿಎಫ್ಓ ಅಶೋಕ್ ಕುಮಾರ್, ಎಫ್’ಎಸ್’ಟಿಓ ಮಕ್ತುಂ ಹುಸೇನ್, ಎಲ್.ಎಫ್ ಸುನೀಲ್, ಎಫ್ ಡಿ ಸತೀಶ್, ಎಫ್ ಎಂ ಸಂತೋಷ್ ಮನೋಜ್ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
9 people stuck in the lift of a mall building in Shivamogga – Rescued by the fire brigade! | Report: B. Renukesh |Shivamogga, May 18: The fire brigade team successfully rescued 9 people who were stuck in the lift of the Vishal Mart building near Alcohol Circle in Shivamogga city on the evening of May 18.
The citizens who were stuck in the lift are Bharat (37), Anusha (35), Anees Fatima (44), Musarat (39), Subiya (31), Mizzah (09), Bilal (06), Prashant (28) and Praveen Kumar (47).
Some citizens were scared as they were stuck in the lift for more than 1 hour. The health of a woman had deteriorated. But due to the timely operation of the fire brigade, all those trapped in the lift have come out safely.
What happened? : At around 8.30 pm, 9 people were arriving at the lower floor of the lift on the 2nd floor of the mall building. At this time, the lift stopped due to a technical reason. The mall staff immediately started solving the problem. But the lift door did not open.
On the other hand, a citizen who was inside the lift called the emergency number 112 through his mobile phone and informed. The information was sent to the fire brigade at around 8.55. As soon as the matter was known, the fire brigade reached the spot within a few minutes.
Through a quick operation, the lift door was cut off using a cutter machine. It was successful in bringing out those trapped inside safely. The rescue operation was completed by 9.30 pm. The citizens who were scared by this heaved a sigh of relief.
Fire brigade RFO Raju, DFO Ashok Kumar, FSTO Maktum Hussain, LF Sunil, FD Satish, FM Santosh Manoj were involved in the operation.
What is the reason? : What is the reason for the technical problem in the lift? More details are yet to be made available.
Appreciation for the bravery of the fire brigade…
*** Citizens have expressed their appreciation for the fire brigade team who were successful in quickly bringing out the frightened citizens who were trapped in the lift. Those present at the scene have congratulated the staff who worked hard to break the lift door and bring the citizens out safely using a cutter machine.
Fire brigade RFO Raju, DFO Ashok Kumar, FSTO Maktum Hussain, LF Sunil, FD Satish, FM Santosh Manoj were involved in the operation.

