hosanagara news | ಮಾಸ್ತಿಕಟ್ಟೆ ಗ್ರಾಮದಲ್ಲಿದ್ದ ನಿರಾಶ್ರಿತ ಮಹಿಳೆಗೆ ನಗರ ಠಾಣೆ ಪೊಲೀಸರ ನೆರವಿಹಸ್ತ!

nagara police extend helping hand to homeless woman in Mastikatte village! ಮಾಸ್ತಿಕಟ್ಟೆ ಗ್ರಾಮದಲ್ಲಿದ್ದ ನಿರಾಶ್ರಿತ ಮಹಿಳೆಗೆ ನಗರ ಠಾಣೆ ಪೊಲೀಸರ ನೆರವಿಹಸ್ತ!

ಹೊಸನಗರ (hosanagara), ಮೇ 19: ಅಸ್ವಸ್ಥ ಸ್ಥಿತಿಯಲ್ಲಿ ತಿರುಗಾಡುತ್ತಿದ್ದ ನಿರಾಶ್ರಿತ ಮಹಿಳೆಯೋರ್ವರಿಗೆ, ಹೊಸನಗರ ತಾಲೂಕಿನ ನಗರ ಠಾಣೆ ಪೊಲೀಸರು ನೆರವಿನಹಸ್ತ ಚಾಚಿದ್ದಾರೆ. ಸದರಿ ಮಹಿಳೆಯ ವಾರಸುದಾರರನ್ನು ಪತ್ತೆ ಹಚ್ಚಿ, ಅವರ ಸುಪರ್ದಿಗೆ ಒಪ್ಪಿಸಿದ ಘಟನೆ ನಡೆದಿದೆ.

ಮಾಸ್ತಿಕಟ್ಟೆ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಅಪರಿಚಿತ ಮಹಿಳೆ ಓಡಾಡಿಕೊಂಡಿದ್ದರು. ಪೋಷಣೆಯ ಕೊರತೆಯಿಂದ ಅಸ್ವಸ್ಥ ಸ್ಥಿತಿಯಲ್ಲಿದ್ದರು. ಗಸ್ತು ಪೊಲೀಸರು ಸದರಿ ಮಹಿಳೆಯನ್ನು ಗಮನಿಸಿ, ಪೂರ್ವಾಪರಗಳ ಮಾಹಿತಿ ಕಲೆ ಹಾಕಿದ್ದರು.

ನಂತರ ಸಂಬಂಧಿಕರ ವಿವರ ಸಂಗ್ರಹಿಸಿದ್ದರು. ಸದರಿ ಮಹಿಳೆಯ ಚಿಕ್ಕಮ್ಮರೊಬ್ಬರು, ಪೋಷಣೆಯ ಜವಾಬ್ದಾರಿ ವಹಿಸಿಕೊಂಡಿದ್ದು ಅವರೊಂದಿಗೆ ಮಹಿಳೆಯನ್ನು ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.

ನಿರಾಶ್ರಿತ ಮಹಿಳೆಯ ವಾರಸುದಾರರನ್ನು ಪತ್ತೆ ಹಚ್ಚಿ ಆಶ್ರಯ ಕಲ್ಪಿಸುವಲ್ಲಿ ನೆರವಾದ ನಗರ ಠಾಣೆ ಪೊಲೀಸ್ ಸಿಬ್ಬಂದಿಗಳ ಮಾನವೀಯ ಕಾರ್ಯವನ್ನು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ ಅವರು ಅಭಿನಂದಿಸಿದ್ದಾರೆ.

nagara police extend helping hand to homeless woman in Mastikatte village!

Hosanagar, May 19: The nagara police of Hosanagar taluk have extended a helping hand to a homeless woman who was roaming in an unwell condition. The woman’s heirs have been traced and handed over to their custody.

An unknown woman had been roaming in Mastikatte village for the past few days. She was in an unwell condition due to lack of nourishment. The patrol police had observed the woman and collected information about her background.

Then they collected the details of relatives. One of the woman’s aunts has taken the responsibility of nurturing her and the police have sent the woman with them.

District Protection Officer Nikhil B has congratulated the city police personnel for their humanitarian work in locating the heirs of the homeless woman and providing her with shelter.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *