ಶಿವಮೊಗ್ಗ (shivamogga), ಮೇ 19 : ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬುದ್ಧ ನಗರ ಬಡಾವಣೆಯಲ್ಲಿ ಒಂದೇ ಕುಟುಂಬದ ನಾಲ್ವರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಕಳೆದ ಏಪ್ರಿಲ್ 15 ರಿಂದ ಕುಟುಂಬ ಸದಸ್ಯರು ನಾಪತ್ತೆಯಾಗಿದ್ದಾರೆ. ಎಲ್ಲಿಯೂ ಅವರ ಸುಳಿವು ಲಭ್ಯವಾಗಿಲ್ಲ. ಈ ಕುರಿತಂತೆ ಮೇ 19 ರಂದು ಪೊಲೀಸ್ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದೆ. ನಾಪತ್ತೆಯಾದವರ ಪತ್ತೆಗೆ ಸಹಕರಿಸುವಂತೆ ನಾಗರಿಕರಿಗೆ ಮನವಿ ಮಾಡಿದೆ. ನಾಪತ್ತೆಯಾದವರ ಹೆಸರು, ವಯಸ್ಸು ಚಹರೆಯ ವಿವರ ಈ ಕೆಳಕಂಡಂತಿದೆ.
ಮೊಹಮ್ಮದ್ ಇಕ್ಬಾಲ್, 62 ವರ್ಷ, 5. 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ.
ನಸ್ರತ್ ಬಾನು, 54 ವರ್ಷ, 5.2 ಅಡಿ ಎತ್ತರ, ದಪ್ಪನೆ ಮೈಕಟ್ಟು, ಗೋಧಿ ಮೈಬಣ್ಣ, ಸೀಳು ತುಟಿ ಹೊಂದಿರುತ್ತಾರೆ.
ಮೊಹಮ್ಮದ್ ಫಾಜಿಲ್, 35 ವರ್ಷ, 5.6 ಅಡಿ ಎತ್ತರ, ತೆಳ್ಳನೆ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿದ್ದಾರೆ. ಎದೆಯಲ್ಲಿ ಚರ್ಮಗಂಟು ಇರುತ್ತದೆ.
ಮೊಹಮ್ಮದ್ ಆದಿಲ್, 32 ವರ್ಷ, 5.4 ಅಡಿ ಎತ್ತರ, ದಪ್ಪ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿರುತ್ತಾರೆ. ನಾಪತ್ತೆಯಾದವರ ಸುಳಿವು ಲಭ್ಯವಾದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 08182-261414 / 9972426144 / 9480803345 / 6264571710 ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
Four members of the same family go missing in Buddha Nagar, Shivamogga!
Shivamogga, May 19: Four members of the same family have mysteriously gone missing in the Buddha Nagar area under Doddapet police station limits in Shivamogga.
The family members have been missing since April 15. There is no trace of them anywhere. The police department issued a statement in this regard on May 19. It has appealed to the citizens to cooperate in finding the missing persons. The names, ages and physical characteristics of the missing persons are as follows.
Mohammed Iqbal, 62 years old, 5.5 feet tall, average build, white complexion.
Nasrat Banu, 54 years old, 5.2 feet tall, thick build, wheatish complexion, cleft lip.
Mohammed Fazil, 35 years old, 5.6 feet tall, thin build, white complexion. There is a skin lump on the chest.
Mohammed Adil, 32 years old, 5.4 feet tall, thick build, oily complexion. If you have any information about the missing person, please contact Doddapet Police Station on phone numbers: 08182-261414 / 9972426144 / 9480803345 / 6264571710, the police statement said.

