shimoga news | ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರ ಕಾರ್ಯಾಚರಣೆ : ಯುವತಿಯ ಬಂಗಾರದ ಸರ ಅಪಹರಿಸಿದ್ದ ಆರೋಪಿ ಅರೆಸ್ಟ್!

Shimoga Rural Police Operation: Accused Arrested for Snatching Young Woman’s Gold Chain!ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರ ಕಾರ್ಯಾಚರಣೆ : ಯುವತಿಯ ಬಂಗಾರದ ಸರ ಅಪಹರಿಸಿದ್ದ ಆರೋಪಿ ಅರೆಸ್ಟ್!

ಶಿವಮೊಗ್ಗ (shivamogga), ಮೇ 23: ಯುವತಿಯ ಬಂಗಾರದ ಸರ ಅಪಹರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳಲ್ಲಿ, ಓರ್ವನನ್ನು  ಶಿವಮೊಗ್ಗದ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಮಂಜುನಾಥ ನಾಯ್ಕ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ 10 ಗ್ರಾಂ ತೂಕದ 1.50 ಲಕ್ಷ ರೂ. ಮೌಲ್ಯದ ಬಂಗಾರದ ಸರ ಹಾಗೂ 5 ಲಕ್ಷ ರೂ. ಮೌಲ್ಯದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಡಿವೈಎಸ್ಪಿ ಸಂಜೀವ್ ಕುಮಾರ್ ಟಿ ಅವರ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ನವೀನ್ ಮಠಪತಿ, ಸಿಬ್ಬಂದಿಗಳಾದ ಸಿಪಿಸಿ ಶ್ರೀಕಾಂತ್, ಕಾಶೀನಾಥ್, ಕವನ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಪ್ರಕರಣದ ಹಿನ್ನೆಲೆ : 22-05-2026 ರಂದು ಸಂಜೆ ಅಬ್ಬಲಗೆರೆ ಬಳಿ ಯುವತಿಯೊಬ್ಬರು ಕಾರಿನಿಂದ ಕೆಳಗೆ ಇಳಿಯುತ್ತಿರುವ ವೇಳೆ, ಹಿಂಭಾಗದಿಂದ ಇಕೋ ಸ್ಪೋರ್ಟ್ಸ್ ಕಾರಿನಲ್ಲಿ ಆಗಮಿಸಿದ ಇಬ್ಬರು ಅಪರಿಚಿತರ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Shimoga Rural Police Operation: Accused Arrested for Snatching Young Woman’s Gold Chain!

Shimoga, May 23: In a case where two accused had snatched a young woman’s gold chain and fled, the Shimoga Rural Police have arrested one of them.

The arrested accused has been identified as Manjunath Naik. From him, the police recovered a gold chain weighing 10 grams worth ₹1.50 lakh, along with a car valued at ₹5 lakh.

Under the guidance of DYSP Sanjeev Kumar T, Inspector Raghavendra Kandike led the operation, assisted by Sub-Inspector Naveen Mathapati and staff members CPC Srikanth, Kashinath, and Kavan, who successfully arrested the accused.

Background of the case: On 22-05-2026, in the evening at Abbalagere, when a young woman was getting down from a car, two strangers arrived from behind in an Eco Sports car, snatched her gold chain, and escaped. A case was registered at the Rural Police Station in connection with this incident.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *