shimoga palike news | ಶಿವಮೊಗ್ಗ ಪಾಲಿಕೆ ಚುನಾವಣೆ ನೆನೆಗುದಿಗೆ : ಹೈಕೋರ್ಟ್ ವಿಚಾರಣೆಯತ್ತ ಕುತೂಹಲದ ಚಿತ್ತ!

ಶಿವಮೊಗ್ಗ ಪಾಲಿಕೆ ಚುನಾವಣೆ ನೆನೆಗುದಿಗೆ : ಹೈಕೋರ್ಟ್ ವಿಚಾರಣೆಯತ್ತ ಕುತೂಹಲದ ಚಿತ್ತ!

ವರದಿ : ಬಿ. ರೇಣುಕೇಶ್

ಶಿವಮೊಗ್ಗ (shivamogga), ಜೂನ್ 10: ಶಿವಮೊಗ್ಗ ಮಹಾನಗರ ನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಎರಡೂವರೆ ವರ್ಷವಾಗಿದೆ. ವಾರ್ಡ್’ಗಳ ಚುನಾವಣೆ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಯಾವಾಗ ಚುನಾವಣೆ ನಡೆಯಲಿದೆ ಎಂಬುವುದು ಯಕ್ಷಪ್ರಶ್ನೆಯಾಗಿದೆ!

ಈ ನಡುವೆ ಶಿವಮೊಗ್ಗ ಪಾಲಿಕೆ ಚುನಾವಣೆ ನಡೆಸುವಂತೆ ಕೋರಿ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ಜೂನ್ 5 ರಂದು ಹೈಕೋರ್ಟ್ ನಲ್ಲಿ ನಡೆದಿದೆ.

ಶಿವಮೊಗ್ಗ ಪಾಲಿಕೆಗೆ 2018 ರ ಆಗಸ್ಟ್ 31 ರಂದು ಚುನಾವಣೆ ನಡೆದಿದ್ದು, 2023 ರಲ್ಲಿ ಅವಧಿ ಮುಗಿದಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ. ಸದರಿ ಅರ್ಜಿಯ ವಿಚಾರಣೆಯನ್ನು ಜುಲೈ 10 ಕ್ಕೆ ನ್ಯಾಯಪೀಠ ಮುಂದೂಡಿದೆ.

ವಿಳಂಬ  ಧೋರಣೆ : ಶಿವಮೊಗ್ಗ ಪಾಲಿಕೆ ಜೊತೆಗೆ ರಾಜ್ಯದ ಹಲವು ಪಾಲಿಕೆಗಳ ಅಧಿಕಾರಾವಧಿ ಅಂತ್ಯಗೊಂಡು ವರ್ಷಗಳೇ ಉರುಳಿದೆ. ಆದರೆ ಸಕಾಲದಲ್ಲಿ ವಾರ್ಡ್ ಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಕ್ರಮಕೈಗೊಂಡಿರಲಿಲ್ಲ. ನಾನಾ ನೆಪ ಹೇಳಿಕೊಂಡು ಮುಂದೂಡುತ್ತ ಬಂದಿದೆ.

ಈ ನಡುವೆ ಶಿವಮೊಗ್ಗ ಪಾಲಿಕೆಗೆ ಸಂಬಂಧಿಸಿದಂತೆ, ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಲಾಗಿತ್ತು. ಸದರಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿತ್ತು. ಗ್ರಾಮ ಪಂಚಾಯ್ತಿ ಅಧೀನದ ವಿವಿಧ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ವರದಿ ಸಿದ್ದಪಡಿಸಲಾಗಿತ್ತು.

ಆದರೆ ವರ್ಷಗಳೇ ಉರುಳಿದರೂ ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಅಂತಿಮ ಪರಿಷ್ಕರಣೆ ವರದಿ ಸಲ್ಲಿಕೆಯಾಗಿಲ್ಲ. ಇದರಿಂದ ಸದರಿ ಪ್ರಕ್ರಿಯೆ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಆಸಕ್ತಿಯೇ ಇಲ್ಲದಂತಾಗಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ, ಶಿವಮೊಗ್ಗ ಪಾಲಿಕೆಗೆ ತತ್’ಕ್ಷಣವೇ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕೆ ಇ ಕಾಂತೇಶ್ ಅವರು ಕಳೆದ ಫೆಬ್ರವರಿ ತಿಂಗಳಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿಯ ವಿಚಾರಣೆ ಆರಂಭವಾಗಿದೆ.

ಜುಲೈ 10 ರಂದು ಅರ್ಜಿಯ ಮತ್ತೊಂದು ಸುತ್ತಿನ ವಿಚಾರಣೆ ಹೈಕೋರ್ಟ್ ನಲ್ಲಿ ಬರಲಿದೆ. ಅಷ್ಟರೊಳಗೆ ಚುನಾವಣೆ ಪ್ರಕ್ರಿಯೆ ಆರಂಭದ ಕುರಿತಂತೆ ಏನಾದರೂ ಪ್ರಕ್ರಿಯೆಗಳು ರಾಜ್ಯ ಸರ್ಕಾರದಿಂದ ಆರಂಭವಾಗಲಿದೆಯೇ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಸ್ಪರ್ಧಾಕಾಂಕ್ಷಿಗಳು!

*** ಶಿವಮೊಗ್ಗ ಮಹಾನಗರ ಪಾಲಿಕೆ ವಾರ್ಡ್ ಗಳ ಚುನಾವಣಾ ಕಣಕ್ಕಿಳಿಯಲು, ಸಾಕಷ್ಟು ಸಂಖ್ಯೆಯ ಸ್ಪರ್ಧಾಕಾಂಕ್ಷಿಗಳು ಕಳೆದ ಹಲವು ವರ್ಷಗಳಿಂದ ತಯಾರಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಎರಡೂವರೆ ವರ್ಷ ಕಳೆದರೂ ಚುನಾವಣಾ ಪ್ರಕ್ರಿಯೆಗಳು ಆರಂಭವಾಗದಿರುವುದರಿಂದ, ಕೆಲ ಸ್ಪರ್ಧಾಕಾಂಕ್ಷಿಗಳು ಭ್ರಮನಿರಸನಗೊಂಡಿದ್ದಾರೆ. ಮತ್ತೆ ಕೆಲ ಸ್ಪರ್ಧಾಕಾಂಕ್ಷಿಗಳು ಯಾವಾಗ ಚುನಾವಣೆ ನಡೆಯಲಿದೆ ಎಂಬುವುದರತ್ತ ಜಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ.

Shivamogga Municipal Corporation Election | Shivamogga, June 10: It has been two and a half years since the administration of people’s representatives in the Shivamogga Municipal Corporation. Ward elections have completely fallen into limbo. It is a question of when the elections will be held!

Meanwhile, the hearing of the petition filed by former Deputy Chief Minister K.S. Eshwarappa’s son K.E. Kantesh, seeking to hold elections in the Shivamogga Municipal Corporation, was held in the High Court on June 5.

The petitioners’ lawyers have brought to the notice of the bench that the elections to the Shivamogga Municipal Corporation were held on August 31, 2018, and the term ends in 2023. The bench has adjourned the hearing of the said petition to July 10.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *