hosanagara news | ಹೊಸನಗರದಲ್ಲಿ ಕಳ್ಳತನ ಪ್ರಕರಣ : ಭದ್ರಾವತಿ ಆರೋಪಿ ಬಂಧನ

Theft case in Hosanagar : Bhadravati accused arrestedಹೊಸನಗರದಲ್ಲಿ ಕಳ್ಳತನ ಪ್ರಕರಣ : ಭದ್ರಾವತಿ ಆರೋಪಿ ಬಂಧನ

ಹೊಸನಗರ, ಜೂನ್ 10: ಶಿವಮೊಗ್ಗ ಜಿಲ್ಲೆಯ ಹೊಸನಗರ ಪಟ್ಟಣದಲ್ಲಿ ನಡೆದಿದ್ದ ಎರಡು ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ,  ಭದ್ರಾವತಿ ನಗರದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಜೂನ್ 10 ರಂದು ನಡೆದಿದೆ.

ಭದ್ರಾವತಿಯ ಭೋವಿ ಕಾಲೋನಿ ನಿವಾಸಿ ಮೂರ್ತಿ ಯಾನೆ ಕತ್ತೆ ಮೂರ್ತಿ (28) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ 60 ಸಾವಿರ ರೂ. ಮೌಲ್ಯದ ಹೀರೋ ಹೊಂಡಾ ಸ್ಲ್ಪೆಂಡರ್ ಬೈಕ್ ಹಾಗೂ 1100 ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸರ್ಕಲ್ ಇನ್ಸ್’ಪೆಕ್ಟರ್ ಗೌಡಪ್ಪಗೌಡ್ರು ಮಾರ್ಗದರ್ಶನದಲ್ಲಿ ಸಬ್ ಇನ್ಸ್’ಪೆಕ್ಟರ್ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸತೀಶ್ ರಾಜ್, ಮಾಯಪ್ಪ ಗೋಕಾವಿ, ಸುನೀಲ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಪ್ರಕರಣದ ಹಿನ್ನೆಲೆ : ಹೊಸನಗರ ಪಟ್ಟಣದ ನಗರ ರಸ್ತೆಯ ಗುರುಶಕ್ತಿ ಪೆಟ್ರೋಲ್ ಬಂಕ್ ಸಮೀಪ ಲಾಕ್ ಮಾಡಿ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಲಾಗಿತ್ತು. ಹಾಗೆಯೇ ನಗರ ರಸ್ತೆಯ ಪಕ್ಕದಲ್ಲಿರುವ ವೀರಾಂಜನೇಯ ಸ್ವಾಮಿ ದೇವಸ್ಥಾನದ ಬಾಗಿಲ ಬೀಗ ಒಡೆದು ಹುಂಡಿಯ ಹಣ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

Theft case in Hosanagar: Bhadravati accused arrested | Hosanagar, June 10: On June 10, the police arrested a youth from Bhadravati city on charges of being involved in two theft cases that took place in Hosanagar town of Shivamogga district.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *