ಶಿವಮೊಗ್ಗ (shivamogga), ಜುಲೈ 03: ದರೋಡೆ ಪ್ರಕರಣವೊಂದರಲ್ಲಿ ಯುವಕನೋರ್ವನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ, ಶಿವಮೊಗ್ಗದ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಮೊಹಮ್ಮದ್ ನೂರುಲ್ಲಾ ಯಾನೆ ಇಂಗ್ಲೀಷ್ ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಜುಲೈ 02 ರಂದು ನ್ಯಾಯಾಲಯ ಈ ತೀರ್ಪು ನೀಡಿದೆ.
ನ್ಯಾಯಾಧೀಶರಾದ ಅಭಯ್ ಧನಪಾಲ್ ಚೌಗಲ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮಮತಾ ಬಿ ಎಸ್ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : 4-05-2021 ರ ಮುಂಜಾನೆ ಶಿವಮೊಗ್ಗ ನಗರದ ಹೊನ್ನಾಳ್ಳಿ ರಸ್ತೆಯ ರಾಗಿಗುಡ್ಡ ಕ್ರಾಸ್ ಬಳಿ, ಮೊಪೆಡ್ ನಲ್ಲಿ ಆಗಮಿಸುತ್ತಿದ್ದ ಸುನೀಲ್ ಎಂಬುವರನ್ನು ಅಡ್ಡಗಟ್ಟಿ ನಿಲ್ಲಿಸಿದ ಇಬ್ಬರು ಯುವಕರು ಚಾಕು ತೋರಿಸಿ ಬೆದರಿಕೆ ಹಾಕಿ ಮೊಬೈಲ್ ಪೋನ್, 500 ನಗದು, ಎಟಿಎಂ ಕಾರ್ಡ್ ಗಳನ್ನು ಅಪಹರಿಸಿ ಪರಾರಿಯಾಗಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಇನ್ಸ್’ಪೆಕ್ಟರ್ ಸಂಜೀವ್ ಕುಮಾರ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು. ನ್ಯಾಯಾಲಯದ ವಿಚಾರಣೆ ವೇಳೆ ಮೊಹಮ್ಮದ್ ನೂರುಲ್ಲಾ ಯಾನೆ ಇಂಗ್ಲಿಷ್ ವಿರುದ್ದದ ಆರೋಪ ದೃಡಪಟ್ಟಿತ್ತು.
Shivamogga, July 3: The 1st Additional District and Sessions Court in Shivamogga has sentenced a young man to seven years of rigorous imprisonment and imposed a fine of ₹10,000 in a robbery case.

