shimoga rain news | ಶಿವಮೊಗ್ಗ : ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಚುರುಕು : ಡ್ಯಾಂಗಳ ಒಳಹರಿವು ಏರಿಕೆ

bhadra dam news

ಶಿವಮೊಗ್ಗ (shivamogga), ಜುಲೈ 06: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಕ್ರಮೇಣ ಚುರುಕುಗೊಳ್ಳಲಾರಂಭಿಸಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಲಾರಂಭಿಸಿದೆ. ಪ್ರಮುಖ ಡ್ಯಾಂಗಳ ಒಳಹರಿವಿನಲ್ಲಿ ಏರಿಕೆ ಕಂಡುಬರಲಾರಂಭಿಸಿದೆ.

ಜುಲೈ 06 ರ ಬೆಳಿಗ್ಗೆ 8 ಗಂಟೆಯ ಮಾಹಿತಿಯಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿಯಲ್ಲಿ 180 ಮಿಲಿ ಮೀಟರ್ (ಮಿ.ಮೀ.) ಮಳೆಯಾಗಿದೆ. ಹಾಗೆಯೇ ಯಡೂರು 180 ಮಿ.ಮೀ., ಹುಲಿಕಲ್ 145 ಮಿ.ಮೀ. ಮಾಸ್ತಿಕಟ್ಟೆ 152 ಮಿ.ಮೀ., ಚಕ್ರಾ 123 ಮಿ.ಮೀ. ಸಾವೇಹಕ್ಲು 142 ಮಿ.ಮೀ. ಮಳೆಯಾಗಿದೆ.

ಉಳಿದಂತೆ ಶಿವಮೊಗ್ಗದಲ್ಲಿ 16.60 ಮಿ.ಮೀ., ಭದ್ರಾವತಿ 11.50 ಮಿ.ಮೀ., ತೀರ್ಥಹಳ್ಳಿ 65.10 ಮಿ.ಮೀ., ಸಾಗರ 31.10 ಮಿ.ಮೀ., ಶಿಕಾರಿಪುರ 10.60 ಮಿ.ಮೀ., ಸೊರಬ 14.40 ಮಿ.ಮೀ. ಹೊಸನಗರದಲ್ಲಿ 70.30 ಮಿ.ಮೀ. ಮಳೆಯಾಗಿದೆ.

ಡ್ಯಾಂ ನೀರಿನ ಮಟ್ಟ : ಭದ್ರಾ ಜಲಾಶಯದ ನೀರಿನ ಮಟ್ಟ : 139 ಅಡಿ 6 ಇಂಚು (ಗರಿಷ್ಠ ಮಟ್ಟ : 186) ಇದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 170 ಅಡಿ 9 ಇಂಚು ಇತ್ತು. ಪ್ರಸ್ತುತ 4135 ಕ್ಯೂಸೆಕ್ ಒಳಹರಿವಿದ್ದು, 212 ಕ್ಯೂಸೆಕ್ ಹೊರ ಹರಿವಿದೆ.

ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ 1751.60 (ಗರಿಷ್ಠ ಮಟ್ಟ : 1819) ಅಡಿಯಿದೆ. 18,486 ಕ್ಯೂಸೆಕ್ ಒಳಹರಿವಿದ್ದು, 507 ಕ್ಯೂಸೆಕ್ ಹೊರಹರಿವಿದೆ. ತುಂಗಾ ಜಲಾಶಯದದ ನೀರಿನ ಮಟ್ಟ 587.86 (ಗರಿಷ್ಠ ಮಟ್ಟ: 588.24) ಅಡಿಯಿದೆ. 21,747 ಕ್ಯೂಸೆಕ್ ಒಳಹರಿವಿದ್ದು, 23,784 ಕ್ಯೂಸೆಕ್ ಹೊರಹರಿವಿದೆ.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *